Fake News - Kannada
 

ಪಂಜಾಬ್‌ನ ನ್ಯಾಯಾಲಯದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅವರ 2020 ರ ವೀಡಿಯೊವನ್ನು, ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂಬ ಸುಳ್ಳು ಕ್ಲೇಮನೊಂದಿಗೆ ಹಂಚಿಕೊಳ್ಳಲಾಗುತ್ತಿದೆ

0

ಅಧಿಕಾರಿಗಳು ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಕರೆದೊಯ್ಯುತ್ತಿರುವ ವೀಡಿಯೊ ತುಣುಕು (ಇಲ್ಲಿ) ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಅವರಿಗೆ ಜಾಮೀನು ದೊರೆತಿದೆ ಎಂಬ ಕ್ಲೈಮ್‌ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್‌ನ ಫ್ಯಾಕ್ಟ್-ಚೆಕ್ ಮಾಡೋಣ.

ಕ್ಲೇಮ್: ಈ ವೀಡಿಯೊ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ 2025ರ ನವೆಂಬರ್‌ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬರುತ್ತಿರುವುದನ್ನು ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ಆಗಿರುವ ಈ ವೀಡಿಯೊ ವಾಸ್ತವವಾಗಿ 2020ರ ಫೆಬ್ರವರಿಯದ್ದಾಗಿದ್ದು, ಪಂಜಾಬ್‌ನ ಫಾಜಿಲ್ಕಾದಲ್ಲಿರುವ ನ್ಯಾಯಾಲಯದ ಮುಂದೆ ಬಿಷ್ಣೋಯ್ ಅವರನ್ನು ಹಾಜರುಪಡಿಸುತ್ತಿರುವುದನ್ನು ತೋರಿಸುತ್ತದೆ. ಲಾರೆನ್ಸ್ ಬಿಷ್ಣೋಯ್ ಅವರು ಇನ್ನೂ ಜೈಲಿನಲ್ಲಿಯೇ ಇದ್ದಾರೆ ಮತ್ತು ಅವರಿಗೆ ಇತ್ತೀಚೆಗೆ ಜಾಮೀನು ದೊರೆತಿದೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ. ಅವರು 2023ರಿಂದ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಬರಮತಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ವರದಿಗಳ ಪ್ರಕಾರ, ಗೃಹ ವ್ಯವಹಾರಗಳ ಸಚಿವಾಲಯ (MHA)ವು ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಓಡಾಟವನ್ನು ಮತ್ತೊಂದು ವರ್ಷದವರೆಗೆ ನಿರ್ಬಂಧಿಸುವ ಆದೇಶವನ್ನು 2025ರ ಆಗಸ್ಟ್‌ನಲ್ಲಿ ನವೀಕರಿಸಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳು.

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರಿಗೆ ಇತ್ತೀಚೆಗೆ ಜಾಮೀನು ದೊರೆತಿದೆಯೇ ಎಂದು ನಿರ್ಧರಿಸಲು ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ, ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಖಚಿತಪಡಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ಲಾರೆನ್ಸ್ ಬಿಷ್ಣೋಯ್ ಅವರಿಗೆ ಜಾಮೀನು ದೊರೆತಿದ್ದರೆ, ಅದು ಖಂಡಿತವಾಗಿಯೂ ಪ್ರಸಾರವಾಗುತ್ತಿತ್ತು.

ದಿ ಇಂಡಿಯನ್ ಎಕ್ಸ್‌ಪ್ರೆಸ್‘ ಪತ್ರಿಕೆಯಲ್ಲಿ 2025ರ ನವೆಂಬರ್ 20 ರಂದು ಪ್ರಕಟವಾದ ವರದಿಯ ಪ್ರಕಾರ, ಗೃಹ ವ್ಯವಹಾರಗಳ ಸಚಿವಾಲಯ (MHA)ವು 2025ರ ಆಗಸ್ಟ್‌ನಲ್ಲಿ ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅವರ ಓಡಾಟವನ್ನು ಮತ್ತೊಂದು ವರ್ಷದವರೆಗೆ ನಿರ್ಬಂಧಿಸುವ ನಿರ್ದೇಶನವನ್ನು ವಿಸ್ತರಿಸಿದೆ. ಈ ಆದೇಶದ ಅರ್ಥವೇನೆಂದರೆ, ಅವರನ್ನು ಜೈಲಿನಿಂದ ಹೊರಗೆ ಕರೆದೊಯ್ಯಲು ಸಾಧ್ಯವಿಲ್ಲ ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಅಥವಾ ತನಿಖೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಥವಾ ಜೈಲು ಆವರಣದೊಳಗೆ ನಡೆಯಬೇಕು.

ವೈರಲ್ ಕ್ಲಿಪ್‌ನ ಬಲ ಮೂಲೆಯಲ್ಲಿ “Punjabvarta.com” ಎಂಬ ಸುದ್ದಿ ವಾಹಿನಿಯ ಹೆಸರನ್ನು ಮತ್ತು ಎಡ ಮೂಲೆಯಲ್ಲಿ ಪಂಜಾಬ್‌ನ ಜಿಲ್ಲೆಯಾದ “Fazilka” ಎಂಬ ಸ್ಥಳದ ಟ್ಯಾಗ್ ಇರುವುದನ್ನು ನಾವು ಗಮನಿಸಿದ್ದೇವೆ.

ವೈರಲ್ ವೀಡಿಯೊದ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು, ನಾವು ಕ್ಲಿಪ್‌ನ ಪ್ರಮುಖ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಈ ಹುಡುಕಾಟವು ನಮ್ಮನ್ನು ‘Living Fazilka’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ 2020ರ ಫೆಬ್ರವರಿ 24ರಂದು ಹಂಚಿಕೊಂಡಿರುವ ವೀಡಿಯೊದ ಎಕ್ಸ್ಟೆಂಡೆಡ್ ವರ್ಷನ್ ಕರೆದೊಯ್ಯಿತು. ಮತ್ತಷ್ಟು ಹುಡುಕಾಟ ನಡೆಸಿದಾಗ, ಅದೇ ದಿನಾಂಕದಂದು ‘RB Live Media’ ಅಪ್‌ಲೋಡ್ ಮಾಡಿದ ದೀರ್ಘಾವಧಿಯ ತುಣುಕನ್ನು ನಾವು ಕಂಡುಕೊಂಡೆವು. ಈ ವೀಡಿಯೊಗಳ ವಿವರಣೆಗಳ ಪ್ರಕಾರ, ಈ ಕ್ಲಿಪ್ 2020ರ ಫೆಬ್ರವರಿ 24ರದ್ದಾಗಿದ್ದು, ಪಂಜಾಬ್‌ನ ಫಾಜಿಲ್ಕಾ ನ್ಯಾಯಾಲಯದ ಮುಂದೆ ಬಿಷ್ಣೋಯ್ ಅವರನ್ನು ಹಾಜರುಪಡಿಸುತ್ತಿರುವುದನ್ನು ತೋರಿಸುತ್ತದೆ.

2020ರ ಫೆಬ್ರವರಿ 24ರಂದು News18 Punjab ನ ಅಫೀಸಿಯಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಫಾಜಿಲ್ಕಾ ನ್ಯಾಯಾಲಯದಲ್ಲಿ ಬಿಷ್ಣೋಯ್ ಅವರ ಇದೇ ರೀತಿಯ ದೃಶ್ಯಾವಳಿ ಇತ್ತು. ಈ ವರದಿಯ ಪ್ರಕಾರ, ಕೊಲೆಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಷ್ಣೋಯ್ ಅವರನ್ನು ಪೀಠದ ಮುಂದೆ ಹಾಜರುಪಡಿಸಲಾಗಿತ್ತು. ಆ ಪ್ರಕರಣದಲ್ಲಿ ಖುಲಾಸೆ ಗೊಂಡಿದ್ದು, ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿಯೇ ಉಳಿದರು.

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರು 2014ರಿಂದ ಜೈಲಿನಲ್ಲಿದ್ದು, ಸುಲಿಗೆ, ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಆರೋಪಗಳಲ್ಲಿ ಪಂಜಾಬಿ ಗಾಯಕ-ರ್ಯಾಪರ್ ಸಿಧು ಮೂಸೆವಾಲಾ ಮತ್ತು ಮುಂಬೈ ರಾಜಕೀಯ ನಾಯಕ ಬಾಬಾ ಸಿದ್ದಿಕ್ ಸೇರಿದಂತೆ ಹಲವು ಉನ್ನತ ಮಟ್ಟದ ಕೊಲೆ ಪ್ರಕರಣಗಳು ಸೇರಿವೆ. ವಿವಿಧ ಪ್ರಕರಣಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಅವರನ್ನು ದೆಹಲಿಯ ತಿಹಾರ್ ಜೈಲು ಸೇರಿದಂತೆ ಹಲವಾರು ಜೈಲುಗಳ ನಡುವೆ ವರ್ಗಾಯಿಸಲಾಗಿದೆ ಮತ್ತು ಆಗಸ್ಟ್ 2023ರಿಂದ ಅವರು ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿದ್ದಾರೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ).

ಇತ್ತೀಚೆಗೆ, 2025ರ ನವೆಂಬರ್ 19 ರಂದು, ಲಾರೆನ್ಸ್‌ನ ಕಿರಿಯ ಸಹೋದರನಾದ ಅನ್‌ಮೋಲ್ ಬಿಷ್ಣೋಯ್‌ನನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದ್ದು, ರಾಷ್ಟ್ರೀಯ ತನಿಖಾ ದಳಕ್ಕೆ (NIA) ಒಪ್ಪಿಸಲಾಗಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ನಾಯಕ ಬಾಬಾ ಸಿದ್ದಿಕ್ ಹತ್ಯೆ, ನಟ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಗುಂಡಿನ ದಾಳಿ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮತ್ತು ಇತರ ಹಲವಾರು ಆರೋಪಗಳಿಗೆ ಸಂಬಂಧಿಸಿದಂತೆ ಅನ್‌ಮೋಲ್ ಬೇಕಾಗಿದ್ದಾನೆ. ಆತ 2022ರಿಂದಲೂ ತಲೆಮರೆಸಿಕೊಂಡಿದ್ದನು (ಇಲ್ಲಿ, ಇಲ್ಲಿ, ಮತ್ತು ಇಲ್ಲಿ).

​ ಕೊನೆಯದಾಗಿ ಹೇಳುವುದಾದರೆ, ಪಂಜಾಬ್‌ನ ಫಾಜಿಲ್ಕಾ ನ್ಯಾಯಾಲಯದ ಮುಂದೆ ಲಾರೆನ್ಸ್ ಬಿಷ್ಣೋಯ್ ಅವರನ್ನು ಹಾಜರುಪಡಿಸುತ್ತಿರುವ 2020ರ ವೀಡಿಯೊವನ್ನು, ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂಬ ಸುಳ್ಳು ಕ್ಲೈಮ್ ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll