Fake News - Kannada
 

2020 ರ ಅಮೆರಿಕದ ಪತ್ರಕರ್ತರೊಬ್ಬ ಭಾರತೀಯ ವರದಿಗಾರನನ್ನು ನೋಡಿ ನಗುತ್ತಿರುವ ವೀಡಿಯೊವನ್ನು ಪ್ರಧಾನಿ ಮೋದಿ ಅವರ 2025 ರ ಅಮೆರಿಕ ಭೇಟಿಯ ವೀಡಿಯೊ ಎಂದು ಹಂಚಿಕೊಳ್ಳಲಾಗಿದೆ

0

ಇತ್ತೀಚೆಗೆ ಎರಡು ದಿನಗಳ ಕಾಲ ಭಾರತದ ಪ್ರಧಾನಿ ನರೇಂದ್ರ ಮೋದಿ  ಅಮೆರಿಕಕ್ಕೆ ಭೇಟಿ ನೀಡಿದ್ದರು. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆಯಾದ ನಂತರ ಇದು ಅವರ ಮೊದಲ ಅಧಿಕೃತ ಭೇಟಿಯಾಗಿತ್ತು. ಫೆಬ್ರವರಿ 13, 2025 ರಂದು ಶ್ವೇತಭವನ/ ವೈಟ್ಹೌಸ್ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಅಮೆರಿಕದಲ್ಲಿ ಭಾರತ ವಿರೋಧಿ ಚಟುವಟಿಕೆಗಳ ಕುರಿತ ಪ್ರಶ್ನೆಗೆ ವರದಿಗಾರನ ಉಚ್ಚಾರಣೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು  ಟ್ರಂಪ್  ಪ್ರತಿಕ್ರಿಯಿಸಿದರು (ಇಲ್ಲಿ ಮತ್ತು ಇಲ್ಲಿ). ಇದಾದ ನಂತರ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು (ಇಲ್ಲಿ) ಭಾರತೀಯ ಪತ್ರಕರ್ತ ಟ್ರಂಪ್‌ಗೆ ಪ್ರಶ್ನೆ ಕೇಳುತ್ತಿರುವಾಗ ಅವನ  ಹಿಂದಿದ್ದ  ಪತ್ರಕರ್ತ ನಗುತ್ತಿರುವಂತೆ ಕಂಡುಬಂದಿದೆ.  2025 ರ ಮೋದಿ-ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವರದಿಗಾರನನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ಕ್ಲಿಪ್ ಅನ್ನು ಹಂಚಿಕೊಳ್ಳಲಾಗುತ್ತಿದೆಹಾಗಾದರೆ . ಹಾಗಾದರೆ  ಈ ಪೋಸ್ಟ್ನಲ್ಲಿ ಮಾಡಲಾದ  ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: 2025 ರಲ್ಲಿ ಮೋದಿ ಮತ್ತು ಟ್ರಂಪ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳುವಾಗ ಅಮೆರಿಕದ ಪತ್ರಕರ್ತರೊಬ್ಬರು ಭಾರತೀಯ ಪತ್ರಕರ್ತರೊಬ್ಬರನ್ನು ಅಣಕಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಕ್ಲೇಮ್ ನಲ್ಲಿ ಮಾಡಲಾದ ವೈರಲ್ ವೀಡಿಯೊ ಫೆಬ್ರವರಿ 2020 ರದ್ದು. ಇದು ಡೊನಾಲ್ಡ್ ಟ್ರಂಪ್ ಅವರು ಕರೋನವೈರಸ್ ಕುರಿತು  ನಡೆಸಿದ ಪತ್ರಿಕಾಗೋಷ್ಠಿ. ಈ ಬ್ರೀಫಿಂಗ್ ಸಮಯದಲ್ಲಿ,  ಭಾರತೀಯ ಪತ್ರಕರ್ತ ರಘುಬೀರ್ ಗೋಯಲ್ ಭಾರತ-ಯುಎಸ್ ಸಂಬಂಧಗಳ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ನ್ಯೂಯಾರ್ಕ್ ಪೋಸ್ಟ್ ವರದಿಗಾರ್ತಿ ಎಬೊನಿ ಬೌಡೆನ್  ಅಣಕಿಸುತ್ತಿರುವುದನ್ನು ಕಾಣಬಹುದು. ಈ ಘಟನೆಯು ಇತ್ತೀಚೆಗೆ 2025 ರಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಗೆ ಸಂಬಂಧಿಸಿಲ್ಲ. ಆದ್ದರಿಂದ, ಈ ಕ್ಲೇಮ್ ತಪ್ಪಾಗಿದೆ. 

ಈ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು Google ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಅದು ಫೆಬ್ರವರಿ 28, 2020 ರಂದು X ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಮಗೆ ತೋರಿಸಿದೆ. ಪೋಸ್ಟ್‌ನ ಕ್ಯಾಪ್ಶನ್ ನಲ್ಲಿ ನ್ಯೂಯಾರ್ಕ್ ಪೋಸ್ಟ್ ವರದಿಗಾರ್ತಿ ಎಬೊನಿ ಬೌಡೆನ್ ಟ್ರಂಪ್ ಮೀಡಿಯಾ ಕಾನ್ಫರೆನ್ಸ್ ನಲ್ಲಿ ಕುಳಿತಿದ್ದಾಗ ಹಿರಿಯ ಭಾರತೀಯ ಪತ್ರಕರ್ತೆಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಮೆರಿಕನ್ನರು “ವಾಕ್ ಸ್ವಾತಂತ್ರ್ಯ/ ಫ್ರೀಡಂ ಆಫ್ ಸ್ಪೀಚ್ ” ದಲ್ಲಿ ನಂಬಿಕೆ ಇಟ್ಟಿದ್ದರೂ ಸಹ, ಬೇರೆ ಜನಾಂಗದ ಯಾರನ್ನಾದರೂ ನೋಡಿ ನಗುವುದು ಸೂಕ್ತವಲ್ಲ ಎಂದು ಉಸೆರ್ಸ್ ಕಾಮೆಂಟ್ ಮಾಡಿದ್ದಾರೆ. ಹಾಗಾಗಿ ಈ ವೀಡಿಯೊ ಇತ್ತೀಚಿನದಲ್ಲ ಎಂದು ತಿಳಿಸುತ್ತದೆ. 

 ಫೆಬ್ರವರಿ 28, 2020 ರಂದು ಟ್ರೂ ಸ್ಕೂಪ್ ಟಿವಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಅದೇ ವೀಡಿಯೊವನ್ನು ನಮಗೆ ಇನ್ನೊಂದು ಕಡೆ ದೊರಕಿದೆ. ಅದರ ಕ್ಯಾಪ್ಶನ್ ನಲ್ಲಿ: “ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ನ್ಯೂಯಾರ್ಕ್ ಪೋಸ್ಟ್ ಜರ್ನಲಿಸ್ಟ್ ಭಾರತೀಯ ವರದಿಗಾರನನ್ನು ಗೇಲಿ ಮಾಡಿದ್ದಾರೆ ಎಂದು ವೈರಲ್ ವಿಡಿಯೋದಲ್ಲಿ ಹೇಳಲಾಗಿದೆ. 

ಹೆಚ್ಚಿನ ಹುಡುಕಾಟವು ಈ ಘಟನೆಯನ್ನು ಒಳಗೊಂಡ ಹಲವಾರು ಮಾಧ್ಯಮಗಳ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು (ಇಲ್ಲಿ ಮತ್ತು ಇಲ್ಲಿ). ಈ ವರದಿಗಳ ಪ್ರಕಾರ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 26, 2020 ರಂದು ಶ್ವೇತಭವನದಲ್ಲಿ ಕೊರೊನಾವೈರಸ್ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಬ್ರೀಫಿಂಗ್ ಸಮಯದಲ್ಲಿ, ನ್ಯೂಯಾರ್ಕ್ ಪೋಸ್ಟ್ ಪತ್ರಕರ್ತೆ (ನಂತರ ಎಬೊನಿ ಬೌಡೆನ್ ಎಂದು ಗುರುತಿಸಲ್ಪಟ್ಟವರು) ಭಾರತ-ಯುಎಸ್ ಸಂಬಂಧಗಳ ಬಗ್ಗೆ ಟ್ರಂಪ್‌ಗೆ ಪ್ರಶ್ನೆಯನ್ನು ಕೇಳಿದಾಗ ಭಾರತೀಯ ವರದಿಗಾರ ರಘುಬೀರ್ ಗೋಯಲ್ ಅವರನ್ನು ಅಪಹಾಸ್ಯ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿತ್ತು. ಮೂರು ಮಿಲಿಯನ್‌ಗಿಂತಲೂ ಹೆಚ್ಚು ಜನ ನೋಡಿರುವ ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕತ್ತು. ಗೋಯಲ್ ಅವರ ಉಚ್ಚಾರಣೆ ಮತ್ತು ನಡವಳಿಕೆಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಅನೇಕರು ಬೌಡೆನ್ ಅವರನ್ನು “ರೇಸಿಸ್ಟ್/ಜನಾಂಗೀಯ” ಎಂದು ಕರೆದಿದ್ದಾರೆ.

ಈ ಘಟನೆಯ ಕುರಿತು ಹೆಚ್ಚಿನ ಸಂಶೋಧನೆ ನಡೆಸಿದಾಗ, ಫೆಬ್ರವರಿ 26, 2020 ರಂದು ಡೊನಾಲ್ಡ್ ಟ್ರಂಪ್ ಅವರು ಕೊರೊನಾವೈರಸ್ ಕುರಿತು ನಡೆಸಿದ ಪತ್ರಿಕಾಗೋಷ್ಠಿಯ ಒಂದು ಗಂಟೆಯ ಪೂರ್ಣ ವೀಡಿಯೊ ನಮಗೆ ಲಭ್ಯವಾಯಿತು. ಸಿಎನ್‌ಬಿಸಿ ಟೆಲಿವಿಷನ್ ಅಪ್‌ಲೋಡ್ ಮಾಡಿದ ಈ ವೀಡಿಯೊ, ಟ್ರಂಪ್ ಅವರು ಅಮೆರಿಕನ್ನರು ಸಾಂಕ್ರಾಮಿಕ ರೋಗದ ಸಾಧ್ಯತೆಗೆ ಸಿದ್ಧರಾಗುವ ಅಗತ್ಯತೆಯ ಬಗ್ಗೆ ಚರ್ಚಿಸುತ್ತಿರುವುದನ್ನು ತೋರಿಸುತ್ತದೆ. 25:40 ಟೈಮ್ಲ್ಯಾಪ್ ನಲ್ಲಿ ಭಾರತೀಯ ಪತ್ರಕರ್ತ ರಘುಬೀರ್ ಗೋಯಲ್ ಅವರು ಭಾರತ-ಯುಎಸ್ ಸಂಬಂಧಗಳು ಮತ್ತು ಟ್ರಂಪ್ ಅವರ ಇತ್ತೀಚಿನ ಭಾರತ ಭೇಟಿಯ ಬಗ್ಗೆ ಪ್ರಶ್ನೆಸುತ್ತಿರುವುದನ್ನು ಕೇಳಬಹುದು. ಇದಕ್ಕೆ ಪ್ರತಿಕ್ರಿಯೆಯಾಗಿ, ಟ್ರಂಪ್ ನರೇಂದ್ರ ಮೋದಿ “ಒಬ್ಬ ಮಹಾನ್ ಸಂಭಾವಿತ ವ್ಯಕ್ತಿ ಮತ್ತು ಮಹಾನ್ ನಾಯಕ” ಎಂದು ಹೊಗಳಿದ್ದರು. ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ “ಸಾಕಷ್ಟು ಪ್ರಗತಿ ಸಾಧಿಸಲಾಗಿದೆ” ಎಂದು ಹೇಳಿದರು. ಹೆಚ್ಚುವರಿಯಾಗಿ, ಅದೇ ಸಂಭಾಷಣೆಯನ್ನು “ಟ್ರಂಪ್ ವೈಟ್ ಹೌಸ್” ವೆಬ್‌ಸೈಟ್‌ನಲ್ಲಿನ ಪತ್ರಿಕಾಗೋಷ್ಠಿಯ ಆರ್ಕೈವ್‌ಗಳಲ್ಲಿ ಕಾಣಬಹುದು, ಇದು ವೀಡಿಯೊದ ಸಂದರ್ಭವನ್ನು ಮತ್ತಷ್ಟು ದೃಢೀಕರಿಸುತ್ತದೆ.

ಹೆಚ್ಚುವರಿಯಾಗಿ, ಪ್ರಧಾನಿ ಮೋದಿ ಫೆಬ್ರವರಿ 2025 ರಲ್ಲಿ ಎರಡು ದಿನಗಳ ಕಾಲ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ  ಭೇಟಿಯ ಸಮಯದಲ್ಲಿ, ಅವರು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು, ಚುನಾವಣಾ ಗೆಲುವಿನ ನಂತರ ಟ್ರಂಪ್ ಶ್ವೇತಭವನಕ್ಕೆ ಹಿಂದಿರುಗಿದ ನಂತರ ಅವರ ಮೊದಲ ಭೇಟಿ ಇದಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ, ವರದಿಗಾರನ ಉಚ್ಚಾರಣೆಯನ್ನು ಅರ್ಥಮಾಡಿಕೊಳ್ಳುವಲ್ಲಿನ ತೊಂದರೆಯನ್ನು ಉಲ್ಲೇಖಿಸುವ ಮೂಲಕ ಟ್ರಂಪ್ ಭಾರತ ವಿರೋಧಿ ಚಟುವಟಿಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ್ದರು (ಇಲ್ಲಿ ಮತ್ತು ಇಲ್ಲಿ). ಆದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊ ಈ ಘಟನೆಗೆ ಸಂಬಂಧಿಸಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಪಿಎಂ ಮೋದಿಯವರ 2025 ರ ಅಮೆರಿಕ ಭೇಟಿಯ ವೀಡಿಯೊವನ್ನು ಎಂದು ಅಮೆರಿಕದ ಪತ್ರಕರ್ತರೊಬ್ಬರು ಭಾರತೀಯ ವರದಿಗಾರನನ್ನು ಅಪಹಾಸ್ಯ ಮಾಡುತ್ತಿರುವ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

Share.

Comments are closed.

scroll