ಬಿಜೆಪಿ ಆಳ್ವಿಕೆಯಲ್ಲಿ ದೇಶಾದ್ಯಂತ ಮಹಿಳೆಯರ ಮೇಲೆ ಅಪರಾಧಗಳು ಹೆಚ್ಚುತ್ತಿರುವುದನ್ನು ವಿರೋಧಿಸಿ ದೇಹಕ್ಕೆ ಕಬ್ಬಿಣದ ಮುಳ್ಳುತಂತಿ ಸುತ್ತಿಕೊಂಡ ಈ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದು ನಿಜವೆ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಬಿಜೆಪಿ ಆಳ್ವಿಕೆಯಲ್ಲಿ ದೇಶಾದ್ಯಂತ ಮಹಿಳೆಯರ ಮೇಲೆ ಅಪರಾಧಗಳು ಹೆಚ್ಚುತ್ತಿರುವುದನ್ನು ವಿರೋಧಿಸಿ ದೇಹಕ್ಕೆ ಕಬ್ಬಿಣದ ಮುಳ್ಳುತಂತಿ ಸುತ್ತಿಕೊಂಡು ಈ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದಾರೆ.
ನಿಜಾಂಶ; ಆ ಫೋಟೊದಲ್ಲಿರವು ಮಹಿಳೆಯು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಆ ಮಹಿಳೆಯ ಶ್ರೀಲಂಕಾದವರಾಗಿದ್ದು ಪಾಕ್ ಜಲಸಂಧಿ ಮೂಲದ ಒಸರಿಯಾ ಶೈಲಿಯ ಉಡುಪನ್ನು ಪ್ರದರ್ಶಿಸುತ್ತಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ಸುಳ್ಳಾಗಿದೆ.
ಫೋಟೊವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ಮಹಿಳೆ, ಅದೇ ಶೈಲಿ ಉಡುಪು ತೊಟ್ಟ, ಆದರೆ ವಿಭಿನ್ನ ಭಂಗಿಯಲ್ಲಿರುವ ಫೋಟೊವೊಂದು ವೆಬ್ಸೈಟ್ ಒಂದರಲ್ಲಿ ಕಂಡುಬಂದಿದೆ. ವೆಬ್ಸೈಟ್ ವಿವರಣೆ ಪ್ರಕಾರ ಶ್ರೀಲಂಕಾ ಮಹಿಳೆಯು ಪಾಕ್ ಜಲಸಂಧಿ ಮೂಲದ ಒಸರಿಯಾ ಶೈಲಿಯ ಉಡುಪನ್ನು ಪ್ರದರ್ಶಿಸುತ್ತಿದ್ದಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕಾಡಿದಾಗ, ಶ್ರೀಲಂಕಾದ ಯೂಟ್ಯೂಬ್ ಚಾನೆಲ್ ಒಂದು ಇದೇ ವಿಡಿಯೋವನ್ನು ಒಳಗೊಂಡಿದೆ. ವಿಡಿಯೋ ವಿವರಣೆಯಲ್ಲಿ “ಶ್ರೀಲಂಕಾದಲ್ಲಿ ಪ್ರೇಮಿಗಳ ದಿನ” ಎಂದು ಬರೆಯಲಾಗಿದೆ. ಈ ವಿಡಿಯೋ 13, ಫೆಬ್ರವರಿ 2020 ರಲ್ಲಿ ಅಪ್ಲೋಡ್ ಆಗಿದೆ.

ಇದೇ ಮಹಿಳೆಯ ಇದೇ ವೇಷಭೂಷಣದ ಚಿತ್ರವೂ ಇದೇ ರೀತಿಯ ಪ್ರತಿಪಾದನೆಯೊಂದಿಗೆ 2019 ರಲ್ಲಿಯೂ ಸಹ ವೈರಲ್ ಆಗಿತ್ತು. ಆಗ ಫ್ಯಾಕ್ಟ್ಲಿ ಅದರ ಸತ್ಯಾಸತ್ಯತೆಯನ್ನು ಬಯಲುಗೊಳಿಸಿತ್ತು. ಅದನ್ನು ಇಲ್ಲಿ ಓದಬಹುದು.
ಉತ್ತರಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಈ ರೀತಿಯ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ದಾರಿತಪ್ಪಿಸುವ ಪ್ರತಪಾದನೆಗಳೊಂದಿಗೆ ಹಂಚಿಕೆಯಾಗುತ್ತಿವೆ.
ಒಟ್ಟಿನಲ್ಲಿ ದೇಹಕ್ಕೆ ಕಬ್ಬಿಣದ ಮುಳ್ಳುತಂತಿ ಸುತ್ತಿಕೊಂಡ ಈ ಮಹಿಳೆ ಶ್ರೀಲಂಕದವರಾಗಿದ್ದು ಅವರು ಒಸರಿಯಾ ಶೈಲಿಯ ಉಡುಪನ್ನು ಪ್ರದರ್ಶಿಸುತ್ತಿದ್ದಾರೆ.