Fake News - Kannada
 

ಭಾರತದ ಬೆಳವಣಿಗೆಯ ಕುರಿತಾದ ಯೂಟ್ಯೂಬ್ ವೀಡಿಯೊವನ್ನು ಅಮೆರಿಕದ ಸುದ್ದಿ ಔಟ್ಲೆಟ್ಸ್ ಗಳೊಂದಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

0

2025 ರ ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಇದು ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಉದ್ವಿಗ್ನತೆಯನ್ನು ಹೆಚ್ಚಿಸಿತು. ಎರಡೂ ಕಡೆಯವರು ಗಡಿಯಾಚೆಗಿನ ಗುಂಡಿನ ದಾಳಿ ಮತ್ತು ಸಶಸ್ತ್ರ ಪಡೆಗಳ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದಾರೆ ಎಂದು ವರದಿ ಮಾಡಿದೆ. ಇದರಿಂದಾಗಿ ಮಿಲಿಟರಿ ಮತ್ತು ಜನಸಾಮಾನ್ಯರ ಸಾವುನೋವುಗಳು ಸಂಭವಿಸಿವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಎರಡೂ ಕಡೆಯಿಂದ ಕೆಲವು ದಿನಗಳ ಕಾಲ ನಡೆದ ದಾಳಿಯ ನಂತರ, 2025 ರ ಮೇ 10 ರಂದು ಉನ್ನತ ಮಟ್ಟದ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಮೂಲಕ ಕದನ ವಿರಾಮ ಒಪ್ಪಂದವನ್ನು ಮಾಡಲಾಯಿತು. ಆದರೆ, ಪಾಕಿಸ್ತಾನವು ಈ ಒಪ್ಪಂದವನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ವರದಿಯಾಗಿದೆ. ಶ್ರೀನಗರ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಲ್ಲಿ ಹಾಗೂ ಗುಜರಾತ್‌ನ ಪ್ರದೇಶಗಳಲ್ಲಿ ಪಾಕಿಸ್ತಾನಿ ಡ್ರೋನ್‌ಗಳನ್ನು ಸೆರೆಹಿಡಿಯಲಾಯಿತು (ಇಲ್ಲಿ ಮತ್ತು ಇಲ್ಲಿ).

ಇದರ ನಡುವೆ, ಕಳೆದ 10 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಚರ್ಚಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಅಮೇರಿಕನ್ ಟಿವಿ ಚಾನೆಲ್‌ಗಳು ಭಾರತ ಏನು ಮಾಡುತ್ತಿದೆ ಎಂಬುದರ ಕುರಿತು ಇಡೀ ಜಗತ್ತಿಗೆ ಹೇಳುತ್ತಿವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ಪರಿಸ್ಥಿಯ ನಡುವೆ ಕಳೆದ 10 ವರ್ಷಗಳಲ್ಲಿ ಭಾರತದ ಬೆಳವಣಿಗೆಯನ್ನು ಚರ್ಚಿಸುವ ವೀಡಿಯೊವನ್ನು ಅಮೇರಿಕನ್ ಟಿವಿ ಚಾನೆಲ್‌ಗಳು ಪ್ರಸಾರ ಮಾಡುತ್ತಿವೆ.

ಫ್ಯಾಕ್ಟ್: ಈ ವೀಡಿಯೊವನ್ನು ಫೆಬ್ರವರಿ 23, 2024 ರಂದು ‘ವರ್ಲ್ಡ್ ಇನ್ ಡಿಟೇಲ್ಸ್’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇಲ್ಲಿರುವ ವಿವರಣೆಯ ಪ್ರಕಾರ, ಭಾರತ ಆಧುನಿಕತೆ ಮತ್ತು ಬಹಳ ಸುಂದರವಾದ ಯೋಗ್ಯ ದೇಶವೆಂದು ಪ್ರಪಂಚಕ್ಕೆ ಸಾರುವ ಉದ್ದೇಶದಿಂದ ಈ ವಿಡಿಯೋವನ್ನು ಮಾಡಲಾಗಿದ್ದು, ಭವಿಷ್ಯದಲ್ಲಿ ಭಾರತದಲ್ಲಿ ಪ್ರವಾಸೋದ್ಯಮ ಮತ್ತು ಹೂಡಿಕೆಯನ್ನು ಮಾಡಿದರೆ ಉತ್ತಮ ಎನ್ನುವ ಉದ್ದೇಶವನ್ನು ಈ ವಿಡಿಯೋ ಹೊಂದಿದೆ ಎಂದು ಹೇಳಲಾಗಿದೆ. ಈ ವಿಡಿಯೋದ ಎಡಿಟರ್ ಭಾರತದಲ್ಲಿ ನೆಲೆಸಿದ್ದು, ಅಮೇರಿಕನ್ ಅಥವಾ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ವೀಡಿಯೊ ಲಿಂಕ್ ಮಾಡಿ ಕೊಡುವ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ, ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ತಪ್ಪು.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ನಲ್ಲಿ ಹುಡುಕಾಡಿದಾಗ ಅಮೇರಿಕನ್ ಮಾಧ್ಯಮಗಳು ಈ ದೃಶ್ಯಗಳನ್ನು ಪ್ರಸಾರ ಮಾಡಿದ್ದಕ್ಕೆ ಯಾವುದೇ ಪುರಾವೆಗಳು ಸಿಗಲಿಲ್ಲ. ಆದರೆ,  ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು.  ಇದನ್ನು ಫೆಬ್ರವರಿ 23, 2024 ರಂದು ‘ವರ್ಲ್ಡ್ ಇನ್ ಡಿಟೇಲ್ಸ್’ ಎಂಬ ಯುಟ್ಯೂಬ್  ಚಾನೆಲ್‌ಗೆ ಅಪ್‌ಲೋಡ್ ಮಾಡಲಾಗಿದೆ.

ವೀಡಿಯೊ ವಿವರಣೆಯಲ್ಲಿ, ಕ್ರಿಯೇಟರ್ ಭಾರತದ ಆಧುನಿಕ ಮತ್ತು ಸುಂದರ ಅಂಶಗಳನ್ನು ಜಗತ್ತಿಗೆ ಎತ್ತಿ ತೋರಿಸುವುದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಭಾರತಕ್ಕೆ ಹೂಡಿಕೆಯನ್ನು ಆಕರ್ಷಿಸುವುದು ವೀಡಿಯೊದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಹೆಚ್ಚುವರಿಯಾಗಿ, ಚಾನಲ್‌ನ ವಿವರಣೆಯು  ಎಡಿಟರ್/ಕ್ರಿಯೇಟರ್ ಭಾರತದಲ್ಲಿ ನೆಲೆಸಿದ್ದಾರೆ ಎಂದು ಸೂಚಿಸುತ್ತದೆ. ಇದಲ್ಲದೆ, ಯುಎಸ್ ಅಥವಾ ಅಂತರರಾಷ್ಟ್ರೀಯ ಮಾಧ್ಯಮಗಳೊಂದಿಗೆ ಯಾವುದೇ ಸಂಬಂಧದ ಬಗ್ಗೆ ಅಥವಾ ವೀಡಿಯೊವನ್ನು ಅವರಿಂದ ಪಡೆಯಲಾಗಿದೆ ಎಂಬ ಯಾವುದೇ ಸೂಚನೆಯಿಲ್ಲ.

ಭಾರತದ ಆರ್ಥಿಕ ಪ್ರಗತಿಯನ್ನು ಎತ್ತಿ ತೋರಿಸುವ ವಿವಿಧ ಅಂತರರಾಷ್ಟ್ರೀಯ ಮಾಧ್ಯಮಗಳ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹೆಚ್ಚುವರಿಯಾಗಿ, ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತದ ಏರಿಕೆಯ ಕುರಿತು ಅಮೆರಿಕ ಮೂಲದ ಬ್ಲೂಮ್‌ಬರ್ಗ್ ಮಾಡಿದ ವೀಡಿಯೊವನ್ನು ಇಲ್ಲಿ ನೋಡಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ಭಾರತದ ಬೆಳವಣಿಗೆಯ ಕಥೆಯನ್ನು ಅಮೇರಿಕನ್ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ  ಹಳೆಯ, ಸಂಬಂಧವಿಲ್ಲದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll