Fake News - Kannada
 

ಪಾಕಿಸ್ತಾನದ ಅಹ್ಮದಿಯಾ ಮಸೀದಿಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯಗಳನ್ನು ಪಾಕಿಸ್ತಾನಿಗಳು ಕಬ್ಬಿಣ ಮತ್ತು ಇಟ್ಟಿಗೆಗಳನ್ನು ಮಾರಾಟ ಮಾಡಲು ಮಸೀದಿಗಳನ್ನು ನಾಶಪಡಿಸುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ

0

ಕರಾಚಿಯ ಜನ ಕಬ್ಬಿಣ ಮತ್ತು ಇಟ್ಟಿಗೆಗಳಿಗಾಗಿ ಮಸೀದಿಯನ್ನು ಹಾನಿಗೊಳಿಸಿದ್ದಾರೆ, ಇದರಿಂದಾಗಿ ಅವರು ಹಣಕ್ಕಾಗಿ ಅದನ್ನು ಮಾರಾಟ ಮಾಡಬಹುದು ಎಂದು ಆರೋಪಿಸಿ ಮಸೀದಿಯಂತೆ ಕಾಣುವ ಮಿನಾರ್‌ಗಳಿಗೆ ಕೆಲವು ಪುರುಷರು ಗೋಡೆಯನ್ನು ಹೊಡೆಯುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪಾಕಿಸ್ತಾನದಲ್ಲಿನ ಇತ್ತೀಚಿನ ಆರ್ಥಿಕ ಬಿಕ್ಕಟ್ಟು ಜನರು ಇಂತಹ ತೀವ್ರ ಕ್ರಮಗಳನ್ನು ತೆಗೆದುಕೊಳ್ಳಲು ಕಾರಣವಾಗಿದೆ ಎಂದು ಹೇಳಲಾಗಿದೆ. ಹಾಗಾದರೆ ಈ  ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಕಬ್ಬಿಣ ಮತ್ತು ಇಟ್ಟಿಗೆಗಳಿಗಾಗಿ ಕರಾಚಿಯಲ್ಲಿ ಮಸೀದಿಯನ್ನು ಪಾಕಿಸ್ತಾನದ ಜನರು ಧ್ವಂಸ ಮಾಡುತ್ತಿರುವ ದೃಶ್ಯಗಳು.

ಫ್ಯಾಕ್ಟ್: ವೈರಲ್ ಪೋಸ್ಟ್‌ನ ದೃಶ್ಯಗಳು ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಘಟನೆಯಾಗಿದೆ. ಪಾಕಿಸ್ತಾನಿ ಗುಂಪಿನ ತೆಹ್ರೀಕ್-ಎ-ಲಬ್ಬೈಕ್‌ನ ಕೆಲವು ಶಂಕಿತ ಸದಸ್ಯರು ಕರಾಚಿಯ ಸದ್ದಾರ್‌ನಲ್ಲಿರುವ ಅಹ್ಮದಿ ಮಸೀದಿಯನ್ನು ಧ್ವಂಸ ಮಾಡಿದ್ದಾರೆ. ಈ ಮಸೀದಿ ಪಾಕಿಸ್ತಾನದ ಅಹ್ಮದಿಯಾ ಸಮುದಾಯಕ್ಕೆ ಸೇರಿದ್ದು, ಅವರನ್ನು ಧರ್ಮದ್ರೋಹಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ವೈರಲ್ ವೀಡಿಯೊದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದು ವೈರಲ್ ವೀಡಿಯೊದಂತೆಯೇ ಇರುವ ದೃಶ್ಯಗಳನ್ನು ಒಳಗೊಂಡಿರುವ ಕೆಲವು ಇತ್ತೀಚಿನ ಸುದ್ದಿ ಲೇಖನಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮ್ಮನ್ನು ಕರೆದೊಯ್ಯಿತು. ಪಾಕಿಸ್ತಾನಿ ಗುಂಪಿನ ತೆಹ್ರೀಕ್-ಇ-ಲಬ್ಬೈಕ್‌ನ ಕೆಲವು ಶಂಕಿತ ಸದಸ್ಯರು ಕರಾಚಿಯ ಸದ್ದಾರ್‌ನಲ್ಲಿರುವ ಮಸೀದಿಯನ್ನು ಧ್ವಂಸ ಮಾಡಿದ್ದಾರೆ ಎಂದು ಈ ಸುದ್ದಿ ಲೇಖನಗಳು ವರದಿ ಮಾಡಿವೆ.

ಈ ಮಸೀದಿಗಳು ಪಾಕಿಸ್ತಾನದಲ್ಲಿ ಕಿರುಕುಳವನ್ನು ಎದುರಿಸುತ್ತಿರುವ ಅಹ್ಮದೀಯರು ಎಂಬ ಧಾರ್ಮಿಕ ಪಂಗಡಕ್ಕೆ ಸೇರಿವೆ. ವರದಿಯ ಪ್ರಕಾರ, ಈ ಸಮುದಾಯವನ್ನು ‘ಕಠಿಣ ಮುಸ್ಲಿಂ ಧರ್ಮಗುರುಗಳು’/‘hardline Muslim clerics.‘ ಧರ್ಮದ್ರೋಹಿ ಎಂದು ಪರಿಗಣಿಸುತ್ತಾರೆ. ಪಾಕಿಸ್ತಾನದಲ್ಲಿ ಸುಮಾರು 2-5 ಮಿಲಿಯನ್ ಅಹ್ಮದೀಯರಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಮಸೀದಿಯನ್ನು ಧ್ವಂಸ ಮಾಡಲು ಕಾರಣ ಎಂದು ಹೇಳುವ ವೀಡಿಯೊದ ಸುತ್ತ ನಕಲಿ ಕಥೆಯನ್ನು ವೈರಲ್ ಪೋಸ್ಟ್ ಹೆಣೆದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನದ ಅಹ್ಮದಿಯಾ ಮಸೀದಿಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯಗಳನ್ನು, ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪಾಕಿಸ್ತಾನಿಗಳು ಕಬ್ಬಿಣ ಮತ್ತು ಇಟ್ಟಿಗೆಗಳಿಗಾಗಿ ಮಸೀದಿಗಳನ್ನು ನಾಶಪಡಿಸುತ್ತಿರುವಂತೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll