Fake News - Kannada
 

ಸೌದಿ ಅರೇಬಿಯಾದಲ್ಲಿ ಪ್ರವಾಹಕ್ಕೆ ಒಳಗಾದ ರಸ್ತೆಗಳ ದೃಶ್ಯಗಳು ತಮಿಳುನಾಡಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

ಫೆಂಗಲ್ ಚಂಡಮಾರುತದ ಪ್ರಭಾವದ ನಡುವೆ, ಶ್ರೀಲಂಕಾ ಮತ್ತು ತಮಿಳುನಾಡು ಮತ್ತು ಕರ್ನಾಟಕದ ಕರಾವಳಿ ತೀರಗಳಲ್ಲಿ ಸಮುದ್ರ ಮಟ್ಟದಲ್ಲಿ ವೈಪರೀತ್ಯ  ಮತ್ತು ಬಲವಾದ ಗಾಳಿಯನ್ನು ಎದುರಿಸುತ್ತಿವೆ. ಈ ವಿಡಿಯೋ ತಮಿಳುನಾಡಿನ ಮರೀನಾ ಬೀಚ್ ಚೆನ್ನೈಗೆ ಸಂಬಂಧಿಸಿದ್ದು,  ರಸ್ತೆಗಳಲ್ಲಿ ಭಾರೀ ಮಳೆನೀರು ವಾಹನ ಸಾಗಣೆಗೆ ಅಡ್ಡಿಪಡಿಸುತ್ತಿರುವ ವೀಡಿಯೊವನ್ನು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ತಮಿಳುನಾಡಿನ ಚೆನ್ನೈನ ಮರೀನಾ ಬೀಚ್ ಬಳಿ ಜಲಾವೃತವಾದ ರಸ್ತೆಗಳು ಮತ್ತು ವಾಹನಗಳು ಸಂಚರಿಸಲು ಹೆಣಗಾಡುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: 25 ನವೆಂಬರ್ 2024 ರಂದು ಪ್ರಾರಂಭವಾದ ಫೆಂಗಲ್ ಚಂಡಮಾರುತದಿಂದಾಗಿ ಚೆನ್ನೈ ಪ್ರವಾಹವನ್ನು ಎದುರಿಸಿದೆ. ಆದರೆ ಭಾರೀ ಮಳೆ ಮತ್ತು ಪ್ರವಾಹವನ್ನು ತೋರಿಸುವ ವೈರಲ್ ವೀಡಿಯೊ ನಿಜವಾಗಿಯೂ ಸೌದಿ ಅರೇಬಿಯಾದ ಜೆಡ್ಡಾದಲ್ಲಿ 2 ಸೆಪ್ಟೆಂಬರ್ 2024 ರಂದು ಭಾರೀ ಮಳೆಯ ವಿಡಿಯೋವಾಗಿದೆ. ವೈರಲ್ ವೀಡಿಯೋಗೂ  ಚೆನ್ನೈನಲ್ಲಿನ ಇತ್ತೀಚಿನ ಪ್ರವಾಹಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ. 

ಈ ಕ್ಲೈಮ್ ಅನ್ನು ಪರಿಶೀಲಿಸಲು, ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ನಮ್ಮನ್ನು 3 ಸೆಪ್ಟೆಂಬರ್ 2024 ರಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊಗೆ ಕರೆದೊಯ್ಯಿತು. ಈ ಪೋಸ್ಟ್‌ನ ಶೀರ್ಷಿಕೆಯು “ಜೆಡ್ಡಾ ನಗರದಲ್ಲಿ ಭಾರೀ ಮಳೆ” ಎಂದು ನೀಡಿದೆ. 

ಆದೇ ವಿಡಿಯೋ ಮತ್ತೊಂದು ಕಡೆಯ yahyafarsi1430 ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ ಯುಟ್ಯೂಬ್ ನಲ್ಲಿ ಅದೇ ವೀಡಿಯೊವನ್ನು ತೋರಿಸುತ್ತದೆ. ಇಲ್ಲಿಯೂ “ಸೆಪ್ಟೆಂಬರ್ 2 ರಂದು ಜೆಡ್ಡಾ ನಗರದಲ್ಲಿ ಭಾರೀ ಮಳೆ” ಎಂಬ ಕ್ಯಾಪ್ಶನ್ ಅನ್ನು ನೀಡಲಾಗಿದೆ. ಈ ವಿಡಿಯೋದಲ್ಲಿ ಸೌದಿ ಅರೇಬಿಯಾದ ಜೆಡ್ಡಾದ ದೃಶ್ಯಗಳನ್ನು ಚಿತ್ರಿಸಲಾಗಿದೆ ಎಂಬುದು ಮತ್ತಷ್ಟು ದೃಢಪಟ್ಟಿದೆ. 

ಯುಟ್ಯೂಬ್ ವೀಡಿಯೊದಿಂದ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಸಂಶೋಧನೆಯು ನಮ್ಮನ್ನು ಜೆಡ್ಡಾದಲ್ಲಿನ ಪ್ರವಾಹವನ್ನು ವಿವರಿಸುವ ಹಲವಾರು ವರದಿಗಳಿಗೆ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕರೆದೊಯ್ಯಿತು. 2 ಸೆಪ್ಟೆಂಬರ್ 2024 ರಂದು, ಜೆಡ್ಡಾ ಭಾರೀ ಮಳೆಯನ್ನು ಅನುಭವಿಸಿದ ಕಾರಣ ಅಚಾನಕ್ ಪ್ರವಾಹಕ್ಕೆ ಕಾರಣವಾಯಿತು. ಇದರಿಂದಾಗಿ ರಸ್ತೆಗಳು ಮುಳುಗಿದವು, ಶಾಲೆಗಳನ್ನು ಮುಚ್ಚಲಾಯಿತು, ಮತ್ತು ಅಧಿಕಾರಿಗಳು ಕಣಿವೆಗಳು ಮತ್ತು ಜಲಮಾರ್ಗಗಳನ್ನು ತಪ್ಪಿಸಲು ನಿವಾಸಿಗಳಿಗೆ ಎಚ್ಚರಿಕೆಗಳನ್ನು ನೀಡಿದರು. ಈ ಪ್ರವಾಹದ ಸಂದರ್ಭದಲ್ಲಿ ಕನಿಷ್ಠ 5 ಜನರು ಪ್ರಾಣ ಕಳೆದುಕೊಂಡಿರುವುದು ಪರಿಸ್ಥಿತಿಯ ತೀವ್ರತೆಯನ್ನು ತಿಳಿಸಿದೆ. 

ಫೆಂಗಲ್ ಚಂಡಮಾರುತವು 25 ನವೆಂಬರ್ 2024 ರಂದು ಬಂಗಾಳ ಕೊಲ್ಲಿಯಲ್ಲಿ ಹುಟ್ಟಿಕೊಂಡಿದ್ದು, ಅದು ಭಾರತದ ಕರಾವಳಿಯ ಕಡೆಗೆ ಚಲಿಸುತ್ತಿದ್ದಂತೆ ತೀವ್ರಗೊಂಡಿದೆ. ಇದು 25 ನವೆಂಬರ್ 2024 ರಂದು ತಮಿಳುನಾಡು ಮತ್ತು ಪುದುಚೇರಿ ನಡುವೆ ಭೂಕುಸಿತಕ್ಕೂ ಕಾರಣವಾಗಿದೆ. ಅಲ್ಲದೆ  ಭಾರೀ ಮಳೆ, ಬಲವಾದ ಗಾಳಿ ಮತ್ತು ತೀವ್ರ ಪ್ರವಾಹವನ್ನು ತಂದಿತು. ಚಂಡಮಾರುತವು ಚೆನ್ನೈನಲ್ಲಿ 5 ಸಾವುಗಳು ಸೇರಿದಂತೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕನಿಷ್ಠ 19 ಜೀವಗಳನ್ನು ಬಲಿತೆಗೆದುಕೊಳ್ಳುವುದರೊಂದಿಗೆ, ಜಲಾವೃತ ಮತ್ತು ರಸ್ತೆ ಮುಳುಗಡೆಯಂತಹ ಹಾನಿಗಳನ್ನು ಮಾಡಿದೆ. ಆದರೆ, ಸಾಮಾಜಿಕ ಮಾದ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ಇದಕ್ಕೂ ಯಾವುದೇ ಸಂಬಂಧವಿಲ್ಲ.

ಕೊನೆಯದಾಗಿ ಹೇಳುದಾದರೆ, ಜೆಡ್ಡಾದ ಪ್ರವಾಹವನ್ನು ಇತ್ತೀಚಿಗೆ ತಮಿಳಿನಾಡಿನ ಚೆನ್ನೈ ನಲ್ಲಿ ನಡೆದ ಜಲಪ್ರಳಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. 

Share.

Comments are closed.

scroll