Fake News - Kannada
 

ಬಾಂಗ್ಲಾದೇಶದಲ್ಲಿ ನಿವೃತ್ತ ವೈದ್ಯ ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊವನ್ನು ಸುಳ್ಳು ಕೋಮುವಾದ ಆರೋಪದೊಂದಿಗೆ ಹಂಚಿಕೊಳ್ಳಲಾಗಿದೆ

0

 ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕನಾಗಿರುವ  ವ್ಯಕ್ತಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೂ ಮುಸ್ಲಿಮರು ಶೂ ಹಾರದಿಂದ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಸರಿಯಾಗಿ ವ್ಯಕ್ತಿಯೋರ್ವ ತನ್ನ ಕುತ್ತಿಗೆಗೆ ಶೂ ಮಾಲೆ ಧರಿಸಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ). ಹಾಗಾದರೆ ಈ  ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯೊಬ್ಬರ ಮೇಲೆ ಮುಸ್ಲಿಮರು ಶೂ ಮಾಲೆ  ಹಾಕಿ ಹಲ್ಲೆ ನಡೆಸುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯೊಬ್ಬರ ಮೇಲೆ ಮುಸ್ಲಿಮರು ಶೂ ಮಾಲೆ  ಹಾಕಿ ಹಲ್ಲೆ ನಡೆಸುತ್ತಿರುವುದನ್ನು ಈ ವೀಡಿಯೊ ತೋರಿಸುವುತ್ತಿಲ್ಲ. ಜೂನ್ 15, 2025 ರಂದು ರಾಜ್‌ಬರಿಯ ಬೆರುಲಿ ಬಜಾರ್‌ನಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಟೆಕಾಟಿ ಗ್ರಾಮದ ನಿವೃತ್ತ ಸಮುದಾಯ ವೈದ್ಯಾಧಿಕಾರಿ ಡಾ. ಅಹ್ಮದ್ ಅಲಿ ಎಂಬ ಮುಸ್ಲಿಂ ವ್ಯಕ್ತಿಯನ್ನು ಹಲ್ಲೆ ನಡೆಸಿ ಶೂ ಹಾರದಿಂದ ಮೆರವಣಿಗೆ ನಡೆಸಲಾದ ವಿಡಿಯೋವನ್ನು ತೋರಿಸುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪು.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ವೈರಲ್ ಕ್ಲಿಪ್‌ನ ಅದೇ ದೃಶ್ಯಗಳನ್ನು ಒಳಗೊಂಡ ಹಲವಾರು ಬಾಂಗ್ಲಾದೇಶಿ ಮಾಧ್ಯಮ ವರದಿಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮ್ಮನ್ನು ಕರೆದೊಯ್ಯಿತು. ಈ ವರದಿಗಳ ಪ್ರಕಾರ, ಈ ಘಟನೆ ಜೂನ್ 15, 2025 ರಂದು ಬಾಂಗ್ಲಾದೇಶದ ರಾಜ್‌ಬರಿಯ ಬಲಿಯಕಂಡಿ ಉಪಜಿಲ್ಲಾದಲ್ಲಿರುವ ಬೆರುಲಿ ಬಜಾರ್‌ನಲ್ಲಿ ಸಂಭವಿಸಿದೆ. ಟೆಕಾಟಿ ಗ್ರಾಮದ ನಿವೃತ್ತ ವೈದ್ಯಾಧಿಕಾರಿ ಅಹ್ಮದ್ ಅಲಿ ಅವರನ್ನು ಸ್ಥಳೀಯ ಚಹಾ ಅಂಗಡಿಯಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ನಂತರ ಅವರನ್ನು ಶೂ ಮಾಲೆ ಹಾಕಿ ಮೆರವಣಿಗೆ ಮಾಡಲಾಯಿತು. ಪೊಲೀಸರು ಮತ್ತು ಸೇನಾ ಸಿಬ್ಬಂದಿ ಮಧ್ಯಪ್ರವೇಶಿಸಿ, ಅವರನ್ನು ರಕ್ಷಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಅಹ್ಮದ್ ಅಲಿ ಪೊಲೀಸ್ ಕಸ್ಟಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 

ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರರ ​​ಪತ್ರಿಕಾ ವಿಭಾಗವು ಜೂನ್ 29, 2025 ರಂದು ಪೋಸ್ಟ್ ಮಾಡಿದ ಫೇಸ್‌ಬುಕ್ ಪೋಸ್ಟ್ (ಆರ್ಕೈವ್ ಮಾಡಲಾಗಿದೆ) ನಮಗೆ ಕಂಡುಬಂದಿದೆ. ವೈರಲ್ ಪೋಸ್ಟ್ ಅನ್ನು ತಳ್ಳಿಹಾಕಿದ , ಹಿಂದೂ ಶಿಕ್ಷಕಿಯ ಮೇಲೆ ಮುಸ್ಲಿಮರು ಶೂ ಹಾರದಿಂದ ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆ ತಪ್ಪಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ಘಟನೆಯು ಹಿಂದೂ ಸಮುದಾಯದ ವಿರುದ್ಧದ ಧಾರ್ಮಿಕ ಕಿರುಕುಳದ ಕೃತ್ಯವಲ್ಲ, ಬದಲಾಗಿ ಧಾರ್ಮಿಕ ಮಾನನಷ್ಟ ಆರೋಪಗಳಿಂದ ಉಂಟಾದ ಸ್ಥಳೀಯ ಸಮಸ್ಯೆಯಾಗಿದೆ ಎಂದು ತಿಳಿಸಲಾಗಿದೆ. ಇದನ್ನು ನಂತರ ಆನ್‌ಲೈನ್‌ನಲ್ಲಿ ಕೋಮು ಹಿಂಸಾಚಾರ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ. 

ಬಾಂಗ್ಲಾದೇಶದ ಫ್ಯಾಕ್ಟ್ ಚೆಕರ್ ಶೋಹನೂರ್ ರೆಹಮಾನ್ ಅವರು ಜೂನ್ 27, 2025 ರಂದು ಬರೆದಿರುವ X ಪೋಸ್ಟ್ (ಆರ್ಕೈವ್ ಮಾಡಲಾಗಿದೆ) ನಮಗೆ ಸಿಕ್ಕಿದೆ, ಅವರು ವೈರಲ್ ಫೋಟೋವನ್ನು ಹಂಚಿಕೊಂಡಿದ್ದು, ಈ ಕ್ಲೇಮ್ ಫೇಕ್  ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಬಾಂಗ್ಲಾದೇಶದಲ್ಲಿ ನಿವೃತ್ತ ವೈದ್ಯಕೀಯ ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.

Share.

Comments are closed.

scroll