Fake News - Kannada
 

ಕಾಂಗೋದ ಕಿವು ಸರೋವರದಲ್ಲಿ ಬೋಟ್ ಮಗುಚಿದ ವಿಡಿಯೋವನ್ನು ಗೋವಾಕ್ಕೆ ಲಿಂಕ್ ಮಾಡಿ ತಪ್ಪಾಗಿ ಶೇರ್ ಮಾಡಲಾಗುತ್ತಿದೆ

0

ಬೋಟ್ವೊಂದರಲ್ಲಿ ಓವರ್ಲೋಡ್ ಜನರಿದ್ದ ಕಾರಣ ಬೋಟ್ ನೀರಿಗೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಇತ್ತೀಚೆಗೆ ಗೋವಾದಲ್ಲಿ ನಡೆದ ಬೋಟ್ ಅಪಘಾತವನ್ನು ಚಿತ್ರಿಸುತ್ತದೆ ಎಂದು ಹೇಳಲಾಗುತ್ತಿದೆ.  ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಗೋವಾದಲ್ಲಿ ಕಿಕ್ಕಿರಿದು ತುಂಬಿದ್ದ ಬೋಟ್ ಮಗುಚಿದ ವಿಡಿಯೋ.

ಫ್ಯಾಕ್ಟ್: ಈ ವೈರಲ್ ವೀಡಿಯೊ 03 ಅಕ್ಟೋಬರ್ 2024 ರಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಗೋಮಾ ಬಂದರಿನ ಸಮೀಪದಲ್ಲಿರುವ ಕಿವು ಸರೋವರದಲ್ಲಿ ಬೋಟ್ ಮುಳುಗುವುದನ್ನು ತೋರಿಸುತ್ತದೆ. ಈ ವೈರಲ್ ವೀಡಿಯೊ ಗೋವಾಕ್ಕೆ ಸಂಬಂಧಿಸಿಲ್ಲ, ಬದಲಾಗಿ ಆಫ್ರಿಕಾದ ಗೋಮಾ ಕಾಂಗೋದಲ್ಲಿ ಸಂಭವಿಸಿದೆ ಎಂದು ಗೋವಾ ರಾಜ್ಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.  ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದ ಕುರಿತು ವಿವರಗಳನ್ನು ಪರಿಶೀಲಿಸಲು, ನಾವು ವೀಡಿಯೊದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು 04 ಅಕ್ಟೋಬರ್ 2024 ರಂದು ‘ಅಸೋಸಿಯೇಟೆಡ್ ಪ್ರೆಸ್ (AP)’ ಶೇರ್ ಮಾಡಿದ ಯೂಟ್ಯೂಬ್ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೊದ ವಿವರಣೆಯ ಪ್ರಕಾರ, ಈ ದೃಶ್ಯಗಳು ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕ್ಯಾಂಗೋದ ಕಿವು ಸರೋವರದಲ್ಲಿ ಓವರ್ಲೋಡ್ ಆಗಿದ್ದ ಬೋಟ್ ಮುಳುಗಡೆಯಾದ ಘಟನೆಯಾಗಿದ್ದು, ಕನಿಷ್ಠ 78 ಜನರ ಸಾವನಪ್ಪಿದ್ದಾರೆ ಎಂದು ತಿಳಿಸಿದೆ.

ಇದನ್ನು ಕ್ಲೂ ಆಗಿ ಬಳಸಿಕೊಂಡು, ಬೋಟ್ ಅಪಘಾತದ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ನಮಗೆ ಹಲವಾರು ವರದಿಗಳಿಗೆ ಕಾರಣವಾಯಿತು (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ). ಈ ವರದಿಗಳ ಪ್ರಕಾರ, 03 ಅಕ್ಟೋಬರ್ 2024 ರಂದು ಕಾಂಗೋದ ಗೋಮಾ ಬಂದರಿನಲ್ಲಿರುವ ಕಿವು ಸರೋವರದಲ್ಲಿ ಬೋಟ್ ಅಪಘಾತ ಸಂಭವಿಸಿದೆ. ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್, ಅಪಘಾತದ ಸಮಯದಲ್ಲಿ ಸುಮಾರು 278 ಜನರು ಬೋಟ್ನಲಿದ್ದು, ಕನಿಷ್ಠ 78 ಜನರು ಮುಳುಗಿದ್ದಾರೆ ಎಂದು ಹೇಳಿದ್ದಾರೆ.

ಈ ಹುಡುಕಾಟದ ಸಮಯದಲ್ಲಿ, X (ಹಳೆಯ ಟ್ವಿಟರ್) ನಲ್ಲಿ ಗೋವಾ ಪೊಲೀಸರು ಈ ವೈರಲ್ ವೀಡಿಯೊದ ಕುರಿತು ಸ್ಪಷ್ಟೀಕರಣದ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ವೈರಲ್ ವಿಡಿಯೋ ಗೋವಾದಲ್ಲ, ಬದಲಾಗಿ ಆಫ್ರಿಕಾದ ಕಾಂಗೋ ಸಂಬಂಧಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗೋವಾ ಪೊಲೀಸ್ ಪೋಸ್ಟ್ ಹೀಗಿದೆ: ‘Official Clarification: A video circulating on social media claims a boat capsized near Goa’s shores. This is false. The incident occurred in Goma, Congo, Africa. Please refrain from sharing unverified news.’ — Goa Police’.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗೋದ ಕಿವು ಸರೋವರದಲ್ಲಿ ಮುಳುಗಿದ ಬೋಟ್ ಅನ್ನು ಗೋವಾದಲ್ಲಿ ಸಂಭವಿಸಿದ ಘಟನೆ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ.

Share.

Comments are closed.

scroll