Fake News - Kannada
 

ಮಾಜಿ ಕ್ರಿಕೆಟಿಗ ಅಜರುದ್ದೀನ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರಲಿಲ್ಲ

0

ಮಾಜಿ ಕ್ರಿಕೆಟಿಗ ಅಜರುದ್ದೀನ್ ತನ್ನ ಪತ್ನಿ ಮತ್ತು ಮಗನೊಂದಿಗೆ ಕಾಶಿಯಲ್ಲಿ ಇಸ್ಲಾಂ ಧರ್ಮವನ್ನು ತ್ಯಜಿಸಿದ್ದಾರೆ ಎನ್ನುವ ಪೋಸ್ಟ್ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಜರುದ್ದೀನ್ ಕುಟುಂಬ ಸಮೇತ ಸನಾತನ ಧರ್ಮವನ್ನು ಸೇರಿಕೊಂಡಿದ್ದಾರೆ ಮತ್ತು ಅವರು ತಮ್ಮ ಹೆಸರನ್ನು ‘ಡಬ್ಲ್ಯೂ ಸಿಂಗ್’ ಎಂದು ಬದಲಾಯಿಸಿದ್ದಾರೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು  ಪರಿಶೀಲಿಸೋಣ.

ಕ್ಲೇಮ್: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರು ತಮ್ಮ ಪತ್ನಿ ಮತ್ತು ಪುತ್ರನೊಂದಿಗೆ ಕಾಶಿಯಲ್ಲಿ ಇಸ್ಲಾಂ ಧರ್ಮವನ್ನು ತ್ಯಜಿಸಿ, ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ.

ಫ್ಯಾಕ್ಟ್: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಇಸ್ಲಾಂ ಧರ್ಮವನ್ನು ತ್ಯಜಿಸಿ ಸನಾತನ ಧರ್ಮವನ್ನು ಸ್ವೀಕರಿಸಿದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಉತ್ತರ ಪ್ರದೇಶದ “ಮುಹಮ್ಮದ್ ಅಜರುದ್ದೀನ್” ಎಂಬ ವ್ಯಕ್ತಿ ಇಸ್ಲಾಂ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿಯನ್ನು ಮಾಜಿ ಕ್ರಿಕೆಟಿಗನೆಂದು ತಪ್ಪಾಗಿ ಅರ್ಥೈಸಲಾಗಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಮೊದಲನೆಯದಾಗಿ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಇಸ್ಲಾಂ ಧರ್ಮವನ್ನು ತ್ಯಜಿಸಿ ಸನಾತನ ಧರ್ಮವನ್ನು ಸ್ವೀಕರಿಸಿದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಆ ರೀತಿ ಏನಾದರು ನಡೆದಿದ್ದರೆ ಮೊದಲು ಮಾಧ್ಯಮಗಳಲ್ಲಿ ತಿಳಿಯುತ್ತಿತ್ತು. ಆದರೆ ಅಂತಹ ವರದಿಗಳು ನಮಗೆ ಕಂಡುಬಂದಿಲ್ಲ.

ಇದಲ್ಲದೆ, ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವೈರಲ್ ಫೋಟೋದ ಕೊಲಾಜ್‌ನಲ್ಲಿ ಹುಡುಕಾಡಿದಾಗ,  ಅದೇ ಚಿತ್ರವನ್ನು ಒಳಗೊಂಡಿರುವ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು. ಈ ವರದಿಯ ಪ್ರಕಾರ, ಚಂದೌಲಿ ಜಿಲ್ಲೆಯ ಬಿಚಿಯಾ ಗ್ರಾಮದ ನಿವಾಸಿ ಮುಹಮ್ಮದ್ ಅಜರುದ್ದೀನ್ ಅವರು ಸನಾತನ ಧರ್ಮವನ್ನು ಸ್ವೀಕರಿಸಿ, ತಮ್ಮ ಹೆಸರನ್ನು ಡಬ್ಲ್ಯೂ ಸಿಂಗ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ ತನ್ನ ಮಡದಿ  ಮತ್ತು ಮಗನ ಜೊತೆಯಲ್ಲಿ ಶುದ್ಧೀಕರಣದ ಆಚರಣೆಗಳನ್ನು ಮಾಡಿ ವೇದ ಮಂತ್ರಗಳನ್ನು ಪಠಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನೊಂದು ವರದಿಯ ಪ್ರಕಾರ, ಈ ವೈರಲ್ ಚಿತ್ರವನ್ನು ಇರುವ ವ್ಯಕ್ತಿ ಮೊಹಮ್ಮದ್ ಅಜರುದ್ದೀನ್ ಎಂದು ಗುರುತಿಸಿದೆ, ಆತ  ಇಸ್ಲಾಂ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ  ಎಂದು ಹೇಳುಲಾಗಿದೆ. ಮುಹಮ್ಮದ್ ಅಜರುದ್ದೀನ್ ಎಂಬ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಸುದ್ದಿಯನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರಿಗೆ ತುಲನೆ ಮಾಡಿ  ತಪ್ಪಾಗಿ ಅರ್ಥೈಸಲಾಗಿದೆ ಎಂಬುವುದು ಇಲ್ಲಿ ಸ್ಪಷ್ಟಾಗಿ ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಯುಪಿಯಲ್ಲಿ”ಮುಹಮ್ಮದ್ ಅಜರುದ್ದೀನ್” ಎಂಬ ವ್ಯಕ್ತಿ  ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವ ಚಿತ್ರವನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಎಂದು ತಪ್ಪಾಗಿ ಅರ್ಥೈಸಲಾಗಿದೆ.

Share.

Comments are closed.

scroll