Fake News - Kannada
 

ಇರಾನಿನ ಮಿಸ್ಸೇಲ್ ದಾಳಿಯ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಂಕರ್‌ನಲ್ಲಿ ಅಡಗಿಕೊಳ್ಳಲು ಓಡುತ್ತಿದ್ದಾರೆ ಎನ್ನುವ ಸಂಬಂಧವಿಲ್ಲದ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ

0

01 ಅಕ್ಟೋಬರ್ 2024 ರಂದು ಇಸ್ರೇಲ್‌ನಲ್ಲಿ ನಡೆದ ಇರಾನಿನ ಮಿಸೈಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಕಾರಿಡಾರ್‌ ಮತ್ತು ಬಂಕರ್‌ಗೆ ಓಡುತ್ತಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ವೀಡಿಯೋದ ಹಿಂದಿನ ಸತ್ಯವನ್ನು ಕಂಡುಹಿಡಿಯೋಣ.

ಕ್ಲೇಮ್: 01 ಅಕ್ಟೋಬರ್ 2024 ರಂದು ಮಧ್ಯರಾತ್ರಿ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ/ ಮಿಸೈಲ್ ದಾಳಿಯಿಂದ ತಪ್ಪಿಸಿ, ಅಡಗಿಕೊಳ್ಳಲು ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಓಡುತ್ತಿರುವ ವೀಡಿಯೊ.

ಫ್ಯಾಕ್ಟ್ : ಇದು ಮೂರು ವರ್ಷಗಳ ಹಳೆಯ ವೀಡಿಯೊವಾಗಿದ್ದು, ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್‌ನ ಸಂಸತ್ತಿನ ನೆಸೆಟ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿ ಮತ ಚಲಾಯಿಸಲು ಧಾವಿಸುತ್ತಿದ್ದರು. ನೆತನ್ಯಾಹು 14 ಡಿಸೆಂಬರ್ 2021 ರಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ, “I am always proud to run for you. This was taken half an hour ago in the Knesset”. ಆದರೆ  ಅಕ್ಟೋಬರ್ 1, 2024 ರ ಇತ್ತೀಚಿನ ಇರಾನ್ ಕ್ಷಿಪಣಿ ದಾಳಿಯ ಸಮಯದಲ್ಲಿ, ನೆತನ್ಯಾಹು ಅವರು ಜೆರುಸಲೆಮ್ ಪರ್ವತಗಳಲ್ಲಿನ ಬಂಕರ್‌ನಲ್ಲಿದ್ದರು ಎಂದು ರಿಪೋರ್ಟ್ ಹೇಳಿದೆ. ಆದ್ದರಿಂದ, ಈ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಈ ವೀಡಿಯೊದ ಹಿಂದಿನ ರಹಸ್ಯವನ್ನು ತಿಳಿಯಲು ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ.  ಇದು ಮೂರು ವರ್ಷಗಳ ಹಿಂದೆ  ಅಂದರೆ 14 ಡಿಸೆಂಬರ್ 2021 ರಂದು ಬೆಂಜಮಿನ್ ನೆತನ್ಯಾಹು ಅವರ ಇನ್ಸ್ಟಾಗ್ರಾಮ್ ಮತ್ತು X ಖಾತೆಗಳಲ್ಲಿ ಹಂಚಿಕೊಂಡ ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ಪೋಸ್ಟ್‌ನಲ್ಲಿ, ಅವರು ನೆಸ್ಸೆಟ್‌ನಲ್ಲಿ ಓಡುತ್ತಿದ್ದು, ಇಸ್ರೇಲ್ ಸಂಸತ್ತಿನ ನೆತನ್ಯಾಹು ಹೀಬ್ರೂ ಭಾಷೆಯಲ್ಲಿ ಈ ರೀತಿ ಬರೆದಿದ್ದಾರೆ, ‘I am always proud to run for you. This was taken half an hour ago in the Knesset.’

ಈ ಕುರಿತಾದ ಹೆಚ್ಚಿನ ಸಂಶೋಧನೆಯು ನಮ್ಮನ್ನು ಇಸ್ರೇಲಿ ಮಾಧ್ಯಮದ ಕಿಕಾರ್‌ನ ರಿಪೋರ್ಟ್ಗೆ ಕರೆಯೊಯ್ಯಿತು.  14 ಡಿಸೆಂಬರ್ 2021 ರ ವರದಿ ಮಾಡಿದ ಪ್ರಕಾರ, ಆ ಸಮಯದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ನೆತನ್ಯಾಹು ಅವರು ಸ್ಫೋಟಕ ಕಾನೂನಿನ ಮೇಲೆ ಮತ ಚಲಾಯಿಸಲು ಓಡುತ್ತಿದ್ದರು. ನೆತನ್ಯಾಹು ಅವರು ನೆಸ್ಸೆಟ್‌ನಲ್ಲಿರುವ ತಮ್ಮ ರೂಮ್ ನಲ್ಲಿದ್ದು, ರಾತ್ರಿಯಲ್ಲಿ ಮತದಾನ ಮಾಡಲು ಅವರನ್ನು ಕರೆದಾಗ, ಓಡಿಹೋಗಿ ಮತ ಚಲಾಯಿಸಿದರು ಎಂದು ತಿಳಿಸಿದೆ. 

ಇದಲ್ಲದೆ, 02 ಅಕ್ಟೋಬರ್ 2024 ರಂದು ಇಸ್ರೇಲಿ Ynet ಔಟ್ಲೆಟ್ ವರದಿಯ ಪ್ರಕಾರ, ಇರಾನಿನ ಕ್ಷಿಪಣಿ ದಾಳಿಯ ಸಮಯದಲ್ಲಿ ನೆತನ್ಯಾಹು, ರಕ್ಷಣಾ ಸಚಿವರು ಮತ್ತು ಮುಖ್ಯಸ್ಥರ ಜೊತೆಗೆ ನ್ಯಾಶನಲ್‌ನಲ್ಲಿ ಮಿಸೈಲ್ ದಾಳಿಯ ಪ್ರತಿಕ್ರಿಯೆಯನ್ನು ಚರ್ಚಿಸಲು ವೀಡಿಯೊ ಕರೆ ಸಭೆಯಲ್ಲಿದ್ದರು. ಕ್ರೈಸಿಸ್ ಸೆಂಟರ್ (NCL), ಇದು ಜೆರುಸಲೆಮ್ ಪರ್ವತಗಳಲ್ಲಿನ ಕೋಟೆಯ ಬಂಕರ್‌ನಲ್ಲಿದೆ. ಇರಾನ್‌ನ ಕ್ಷಿಪಣಿ ಘಟನೆಗೆ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ್ದು, ಇದು ಇರಾನ್‌ನ ಕಡೆಯಿಂದ ನಡೆದ ತಪ್ಪಾಗಿದ್ದು, ಇದಕ್ಕಾಗಿ ಅವರು ಬೆಲೆತೆರಬೇಕಾಗಿದೆ ಎಂದು ಹೇಳಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, 2021 ರಲ್ಲಿ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲಿ ಸಂಸತ್ತಿನಲ್ಲಿ ಮತ ಚಲಾಯಿಸಲು ಓಡುತ್ತಿರುವ ವೀಡಿಯೊವನ್ನು ಅವರು ಇತ್ತೀಚಿನ ಇರಾನ್ ಕ್ಷಿಪಣಿ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿರುವ ವಿಡಿಯೋ ಎಂದು ಹಂಚಿಕೊಳ್ಳಲಾಗಿದೆ.

Share.

Comments are closed.

scroll