Fake News - Kannada
 

ಈ ವೈರಲ್ ವೀಡಿಯೊ ಮಾರ್ಚ್ 2024 ರಲ್ಲಿ ಗುಂತಕಲ್ ಶಾಸಕ ಅಭ್ಯರ್ಥಿಯ ಆಯ್ಕೆಗೆ ಟಿಡಿಪಿ ಫಾಲ್ಲೋರ್ಸ್ ಪ್ರತಿಭಟನೆ ನಡೆಸುತ್ತಿರುವುದನ್ನು ತೋರಿಸುತ್ತದೆ

0

2024 ರ ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್  4, 2024 ರಂದು ಪ್ರಕಟಿಸಲಾಗಿದೆ. ಬಿಜೆಪಿಯು ಕೇವಲ 240 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ, ಬಹುಮತದ ಕೊರತೆಯಿಂದ ಪಾರಾಗಿ, ತನ್ನದೇ ಸರ್ಕಾರವನ್ನು ರಚಿಸಲು ಅಗತ್ಯವಿರುವ 272 ಸ್ಥಾನಗಳನ್ನು ಪಡೆಯಲು ಮೈತ್ರಿ ಪಾಲುದಾರರ ಮೇಲೆ ಅವಲಂಬಿತವಾಗಿದೆ. ಜೂನ್ 5, 2024 ರಂದು, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಎನ್‌ಡಿಎ ಸಭೆಯಲ್ಲಿ ಭಾಗವಹಿಸುವ ಮೂಲಕ ಎನ್‌ಡಿಎಗೆ ಲಿಖಿತ ಬೆಂಬಲ ನೀಡುವುದರ ಮೂಲಕ ಎನ್‌ಡಿಎಯೊಂದಿಗೆ ಜೊತೆಗೆ ನಿಲುವನ್ನು ನೀಡುವುದನ್ನು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಕೆಲವರು ಚಂದ್ರಬಾಬು ನಾಯ್ಡು ಅವರ ಭಾವಚಿತ್ರಕ್ಕೆ ಪಾದರಕ್ಷೆಯಿಂದ ಹೊಡೆದು ಬೆಂಕಿಗೆ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಆಂಧ್ರಪ್ರದೇಶದ ಜನರು ಅಸಮಾಧಾನಗೊಂಡಿದ್ದಾರೆ. ನರೇಂದ್ರ ಮೋದಿಯನ್ನು ಬೆಂಬಲಿಸುವ ಚಂದ್ರಬಾಬು ಅವರ ನಿರ್ಧಾರದೊಂದಿಗೆ ಮತ್ತು ಚಂದ್ರಬಾಬು ನಾಯ್ಡು ಅವರ ಫೋಟೋಗಳನ್ನು ಸುಡುತ್ತಿದ್ದಾರೆ. ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೈಮ್ ಅನ್ನು ವಾಸ್ತವವಾಗಿ ಪರಿಶೀಲಿಸೋಣ.

ಕ್ಲೇಮ್: ಆಂಧ್ರಪ್ರದೇಶದ ಜನರು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ನರೇಂದ್ರ ಮೋದಿ ಅವರ ಸರ್ಕಾರ ರಚಿಸಲು ಬೆಂಬಲಿಸಿದ್ದಕ್ಕಾಗಿ  ಅವರ ಭಾವಚಿತ್ರವನ್ನು ಸುಟ್ಟು ಹಾಕುತ್ತಿರುವ ದೃಶ್ಯಗಳು.

ಫ್ಯಾಕ್ಟ್: 2024 ಮಾರ್ಚ್ ನಲ್ಲಿ ಗುಂತಕಲ್ ಶಾಸಕ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದಂತೆ ಟಿಡಿಪಿ ಫೆಲ್ಲೋರ್ಸ್ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳನ್ನು ಈ ವೈರಲ್ ವೀಡಿಯೊ ತೋರಿಸುತ್ತದೆ. ಟಿಡಿಪಿ ಗುಮ್ಮನೂರು ಜಯರಾಮ್ ಅವರನ್ನು ಗುಂತಕಲ್‌ನ ಶಾಸಕ ಅಭ್ಯರ್ಥಿ ಎಂದು ಘೋಷಿಸಿತು. ಶಾಸಕ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಜಿತೇಂದರ್‌ ಗೌಡ್‌ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು. ಗುಂತಕಲ್‌ನಲ್ಲಿರುವ ಟಿಡಿಪಿ ಕಚೇರಿ ಮೇಲೆ ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಚಂದ್ರಬಾಬು ನಾಯ್ಡು ಅವರ ಫೋಟೋಗಳನ್ನು ಸುಟ್ಟುಹಾಕಿ ಅವರ ಫೆಲ್ಲೋರ್ಸ್ ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.

ಸರ್ಕಾರ ರಚಿಸಲು ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಕ್ಕಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿರುದ್ಧ ಆಂಧ್ರಪ್ರದೇಶದ ಜನರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಈ ವೈರಲ್ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು, ನಾವು ವೀಡಿಯೊದಿಂದ ಪ್ರಮುಖ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು  30 ಮಾರ್ಚ್ 2024 ರಂದು ತೆಲುಗು ಸುದ್ದಿ ಚಾನೆಲ್ ಎನ್ ಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ಅನಂತಪುರ ಟಿಡಿಪಿ ನಾಯಕರ ಅಂತಿಮ ಪಟ್ಟಿಗೆ ಪ್ರತಿಭಟನೆ” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾದ ಇದೇ ರೀತಿಯ ದೃಶ್ಯಗಳನ್ನು ಒಳಗೊಂಡಿರುವ ಸುದ್ದಿ ವರದಿಯ ವೀಡಿಯೊ (ಆರ್ಕೈವ್ ಮಾಡಿದ ಲಿಂಕ್) ಗೆ ನಮ್ಮನ್ನು ಕರೆದೊಯ್ಯಿತು. ಈ ಮಾಧ್ಯಮದ ವರದಿ ಪ್ರಕಾರ ಗುಮ್ಮನೂರು ಜಯರಾಮ್ ಅವರನ್ನು ಗುಂತಕಲ್ ಶಾಸಕ ಅಭ್ಯರ್ಥಿ ಎಂದು ಟಿಡಿಪಿ ಘೋಷಿಸಿದೆ. ಶಾಸಕ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಜಿತೇಂದರ್‌ ಗೌಡ್‌ ಅವರಿಗೆ ಈ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಜಿತೇಂದರ್ ಗೌಡ್ ಅವರ ಫಾಲ್ಲೋರ್ಸ್ ಟಿಡಿಪಿಯ ಗುಂತಕಲ್ ಕಚೇರಿ ಮೇಲೆ ದಾಳಿ ಮಾಡಿ, ಅಲ್ಲಿದ್ದ ಪೀಠೋಪಕರಣಗಳು ಮತ್ತು ಕಿಟಕಿಗಳನ್ನು ನಾಶಗೊಳಿಸುವುದರ ಜೊತೆಗೆ ಚಂದ್ರಬಾಬು ನಾಯ್ಡು ಅವರ ಬ್ಯಾನರ್ ಮತ್ತು ಫೋಟೋಗಳನ್ನು ಸುಟ್ಟು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಪ್ರತಿಭಟನೆಗೆ ಸಂಬಂಧಿಸಿದ ಹೆಚ್ಚುವರಿ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆ ಸಮಯದಲ್ಲಿ ಅನಂತಪುರದಲ್ಲಿ ಟಿಡಿಪಿ ಕಾರ್ಯಕರ್ತರಿಂದ ಇದೇ ರೀತಿಯ ವಿಧ್ವಂಸಕ ಘಟನೆ ವರದಿಯಾಗಿದೆ ಎಂದು ಸುದ್ದಿ ವರದಿಗಳು ತಿಳಿಸಿವೆ.

ವೈರಲ್ ವೀಡಿಯೊವನ್ನು ಸುದ್ದಿ ವಾಹಿನಿಯ ವೀಡಿಯೊದೊಂದಿಗೆ ಹೋಲಿಸಿದಾಗ, ವೈರಲ್ ವೀಡಿಯೊದಲ್ಲಿನ ದೃಶ್ಯಗಳು 2024 ರ ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಮುನ್ನ ಅಂದರೆ 2024 ರ ಮಾರ್ಚ್‌ನಲ್ಲಿ ಗುಂತಕಲ್ ಕ್ಷೇತ್ರದ ಶಾಸಕ ಅಭ್ಯರ್ಥಿಯ ಆಯ್ಕೆಯ ವಿರುದ್ಧ ಅಲ್ಲಿನ ಟಿಡಿಪಿ ನಾಯಕರು ಪ್ರತಿಭಟಿಸುತ್ತಿರುವುದು ಸ್ಪಷ್ಟವಾಗುತ್ತದೆ. ಇದರ ಕುರಿತಿರುವ  ಸುದ್ದಿ ವಾಹಿನಿಯ ವೀಡಿಯೊದೊಂದಿಗೆ ವೈರಲ್ ವೀಡಿಯೊದ ಹೋಲಿಕೆಯನ್ನು ಇಲ್ಲಿ ನೋಡಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾರ್ಚ್ 2024 ರಲ್ಲಿ ಗುಂತಕಲ್ ಅಭ್ಯರ್ಥಿಯ ಆಯ್ಕೆಯ ಕುರಿತು ಟಿಡಿಪಿ ಫಾಲ್ಲೋರ್ಸ್ ಪ್ರತಿಭಟನೆ ನಡೆಸುತ್ತಿರುವುದನ್ನು ಈ ವೈರಲ್ ವೀಡಿಯೊ ತೋರಿಸುತ್ತಿದೆ.

Share.

Comments are closed.

scroll