Fake News - Kannada
 

ಈ ವೈರಲ್ ವಿಡಿಯೋದಲ್ಲಿ ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಆವರಣದಲ್ಲಿ ಕಣ್ಣನ್ ಎಂಬ ಬಾಲಕ ತಿರುಗಾಡುತ್ತಿರುವುದನ್ನು ತೋರಿಸುತ್ತಿದೆ

0

ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಅದ್ಬುತವೆಂಬಂತೆ, ದೇವಸ್ಥಾನವನ್ನು ಮುಚ್ಚಿದ ನಂತರ ದೇವಾಲಯದೊಳಗೆ ಸಣ್ಣ ಹುಡುಗ ಆಟವಾಡುತ್ತಿರುವುದು ಕಂಡುಬಂದಿದೆ. ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಕಣ್ಣಿಗೆ ಬಾಲಕ ಕಂಡಿಲ್ಲ. ಆದರೆ ಇದು ದೇವಸ್ಥಾನದ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ದೇವಸ್ಥಾನ ತೆರೆದಾಗ ಬಾಲಕ ಎಲ್ಲಿಯೂ ಕಾಣಲಿಲ್ಲ. ಹುಡುಗ ಕಾಣೆಯಾಗಿರುವ ಬಗ್ಗೆ ಯಾರಿಂದಲೂ ದೂರು ಸಹ ಬಂದಿಲ್ಲ. ಇದು ಬಾಲಕನ ರೂಪದಲ್ಲಿರುವ ಸ್ವಾಮಿಯ ಲೀಲೆ ಎಂದು ಭಕ್ತರು ಭಾವಿಸಿದ್ದಾರೆ” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್ : ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಸ್ವಾಮಿ (ಶ್ರೀಕೃಷ್ಣ) ಬಾಲಕನ ರೂಪದಲ್ಲಿ ಕಾಣಿಸಿಕೊಂಡರು. ಅದಕ್ಕೆ ಸಂಬಂಧಿಸಿದ ದೃಶ್ಯಗಳು.

ಫ್ಯಾಕ್ಟ್ : ವಾಗ್ಮಿನ್ ಜೆಬಿ ಇವ್ಯಾವನ್ ಅಲಿಯಾಸ್ ಕಣ್ಣನ್ ಎಂಬ ಹುಡುಗನನ್ನು ವೀಡಿಯೊ ತೋರಿಸುತ್ತಿದೆ. ಅವನು ಹುಡುಗನ ರೂಪದಲ್ಲಿರುವ ದೇವರಲ್ಲ (ಶ್ರೀಕೃಷ್ಣ). ವಿವಿಧ ಸುದ್ದಿ ವರದಿಗಳ ಪ್ರಕಾರ, ಮಾರ್ಚ್ 2022 ರಲ್ಲಿ ಕೇರಳದ ಗುರುವಾಯೂರ್ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ಕಣ್ಣನ್ ತಿರುಗಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಈ ವಿಡಿಯೋವನ್ನು ಕಣ್ಣನ್ ತಂದೆ ಜೆಮಿಶ್ ತೆಗೆದಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪು.

ಈ ವೈರಲ್ ವೀಡಿಯೊಗೆ ಸಂಬಂದಿಸಿದ ಮಾಹಿತಿಗಾಗಿ, ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸುವಾಗ, ಮೇ 2022 ರಲ್ಲಿ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ಅನೇಕ ಜನರು ಅದೇ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಈ ವೈರಲ್ ವೀಡಿಯೊ ಜೊತೆಗೆ, ಮಲಯಾಳಂ ಸುದ್ದಿ ಸಂಸ್ಥೆ ಜನ್ಮಭೂಮಿ ಈ ವೀಡಿಯೊಗೆ ಸಂಬಂಧಿಸಿದ ಲೇಖನವನ್ನು ಪೋಸ್ಟ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗಳ ವಿವರಣೆ ಮತ್ತು ಈ ಸುದ್ದಿಯ ಪ್ರಕಾರ, ವೈರಲ್ ವೀಡಿಯೊದಲ್ಲಿ ಕಂಡುಬರುವ ಹುಡುಗನ ಹೆಸರು ವಾಗ್ಮಿನ್ ಜೆಬಿ ಐವ್ಯಾವಾನ್ ಅಲಿಯಾಸ್ ಕಣ್ಣನ್.

ಸಂಬಂಧಿತ ಮಲಯಾಳಂ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಅನ್ನು ಮತ್ತಷ್ಟು ಹುಡುಕಿದಾಗ, ಈ ವೀಡಿಯೊಗೆ ಸಂಬಂಧಿಸಿದಂತೆ ಮಲಯಾಳಂ ಮಾಧ್ಯಮ ಸಂಸ್ಥೆ ಜನ್ಮಭೂಮಿಯು ಮೇ 2022 ರಲ್ಲಿ ಪ್ರಕಟಿಸಿದ ಸುದ್ದಿ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಈ ಲೇಖನದ ಪ್ರಕಾರ, ವೈರಲ್ ವೀಡಿಯೊದಲ್ಲಿ ವಾಗ್ಮಿನ್ ಜೆಬಿ ಇವ್ಯಾವನ್ ಅಲಿಯಾಸ್ ಕಣ್ಣನ್ ಎಂಬ ಮೂರೂವರೆ ವರ್ಷದ ಹುಡುಗ. ಈ ಬಾಲಕ ದುಬೈನಲ್ಲಿ ನೆಲೆಸಿರುವ ಕೋಯಿಕೋಡ್ ನ ಚೆಮಂಚೇರಿಯ ನಿವಾಸಿಗಳಾದ ಜೆಮಿಶ್ ಮತ್ತು ಬ್ಯೂಲಾ ದಂಪತಿಯ ಪುತ್ರ. ಕಣ್ಣನ್ ಹುಟ್ಟಿನಿಂದಲೇ ಮೂಕನಾಗಿದ್ದು, ಆತನ ಪೋಷಕರು ಅನೇಕ ತಜ್ಞ ವೈದ್ಯರನ್ನು ಸಂಪರ್ಕಿಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಈ ಸಲುವಾಗಿ, ದೇವರ ಮೊರೆ ಹೋದ ಅವರು   ಕಣ್ಣನ್ ಗೆ ಮಾತು ಬರುವಂತೆ ಗುರುವಾಯೂರ್ ಶ್ರೀಕೃಷ್ಣನನ್ನು ಪ್ರಾರ್ಥಿಸಿ, ಭಾರತಕ್ಕೆ ಆಗಮಿಸಿದ ಗುರುವಾಯೂರಪ್ಪನ್ (ಗುರವಾಯೂರ್ ಶ್ರೀಕೃಷ್ಣ) ನೆಚ್ಚಿನ ಕೃಷ್ಣನಾಟಂನ್ನು ಅರ್ಪಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು. ಈ ರೀತಿ ಹರೆಕೆ ಹೊತ್ತ 3 ನೇ ವಾರದಲ್ಲಿ ಕಣ್ಣನ್ ತನ್ನ ತಾಯಿ ಬ್ಯೂಲಾಳನ್ನು “ಅಮ್ಮ” ಎಂದು ಕರೆದನು, ಆದ್ದರಿಂದ ಕಣ್ಣನ್ ಮತ್ತು ಅವರ ಪೋಷಕರು ಮಾರ್ಚ್ 2022 ರಲ್ಲಿ ಗುರುವಾಯೂರಪ್ಪನವರಿಗೆ ಮುಂಜಾನೆ 2 ಗಂಟೆ ಸುಮಾರಿಗೆ ಗುರುವಾಯೂರಪ್ಪನವರಿಗೆ ಕೃಷ್ಣನಾಟಂ ಕಾಳಿಯಮರ್ದನಂ ಕಥಾ (ಕೃಷ್ಣನಾಟಂ) ಅರ್ಪಿಸಿದ ನಂತರ ಗುರುವಾಯೂರಪ್ಪನಿಗೆ ಚಿಚ್ಚಿ ಕೃಷ್ಣನಾಟಂ ಅರ್ಪಿಸಿದ್ದಾರೆ ಎಂದು ಕಣ್ಣನ್ ತಂದೆ ಜೆಮಿಶ್ ಹೇಳಿದ್ದಾರೆ. ಆ ನಂತರ ಈ ವಿಡಿಯೋ ತೆಗೆದಿದ್ದು, ಈ ವಿಡಿಯೋ ವೈರಲ್ ಆಗಿದೆ ಎಂದು ಕಣ್ಣನ್ ತಾಯಿ ಬ್ಯೂಲಾ ಜನ್ಮಭೂಮಿ ಪತ್ರಿಕೆಗೆ ತಿಳಿಸಿದ್ದಾರೆ. ಇದನ್ನು ಒಳಗೊಂಡ ಹೆಚ್ಚಿನ ಸುದ್ದಿ ಲೇಖನಗಳನ್ನು ಇಲ್ಲಿ ಕಾಣಬಹುದು.

ಕೃಷ್ಣನಾಟಂ ಎನ್ನುವುದು ಶ್ರೀಕೃಷ್ಣನ ಜೀವನದ ವಿವಿಧ  ನೃತ್ಯದ ರೂಪದಲ್ಲಿ ಪ್ರದರ್ಶಿಸುತ್ತದೆ. ಕೃಷ್ಣನಾಟ್ಟಂ ಅರ್ಪಣೆಯ ಈ ಕಲಾ ಪ್ರಕಾರವು ಗುರವಾಯೂರು ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ  ಅರ್ಪಣೆಗಳ ಪ್ರಮುಖ ಭಾಗವಾಗಿದೆ. ಶ್ರೀಕೃಷ್ಣನ ಜೀವನದ ಎಂಟು ಕಥೆಗಳನ್ನು ದೇವಾಲಯದಲ್ಲಿ ವಿವಿಧ ಉದ್ದೇಶಗಳಿಗಾಗಿ ಕಾಣಿಕೆಯಾಗಿ ಪ್ರದರ್ಶಿಸಲಾಗುತ್ತದೆ. ಅವುಗಳಲ್ಲಿ ಸಂತಾನಕ್ಕಾಗಿ ‘ಅವತಾರ’, ವಿಷಕಾರಿ ಪರಿಣಾಮಗಳನ್ನು ತೊಡೆದುಹಾಕಲು ‘ಕಾಳಿಯಮರ್ದನ’, ಅವಿವಾಹಿತ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ‘ರಾಸಕ್ರೀಡೆ’, ದಂಪತಿಗಳ ನಡುವಿನ ವಿವಾದಗಳನ್ನು ಕೊನೆಗೊಳಿಸಲು ಮತ್ತು ಶತ್ರುಗಳನ್ನು ತೊಡೆದುಹಾಕಲು ‘ಸ್ವಯಂವರಂ’ ಮತ್ತು ‘ಕಂಸವಧಂ’. ಸುಖ ಸಂಸಾರದ ಕಥೆಗಳು, ವಚನಗಳ ನೆರವೇರಿಕೆಗಾಗಿ ‘ಬಾನಾಯುಧ’, ಬಡತನವನ್ನು ತೊಡೆದುಹಾಕಲು ಮತ್ತು ಹೊಲಗಳಲ್ಲಿ ಇಳುವರಿಯನ್ನು ಹೆಚ್ಚಿಸಲು ‘ವಿಧವಾದ’ ಮತ್ತು ಅಗಲಿದ ಆತ್ಮದ ಮೋಕ್ಷಕ್ಕಾಗಿ ‘ಸ್ವರ್ಗಾರೋಹಣ’ಗಳನ್ನು ಕೃಷ್ಣನಿಗೆ ಸಮರ್ಪಿಸಲಾಗುತ್ತದೆ (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ). 

ಅಂತಿಮವಾಗಿ, ಈ ವೈರಲ್ ವೀಡಿಯೊದಲ್ಲಿರುವ ಬಾಲಕ ಕಣ್ಣನ್ ಆಗಿದ್ದು, ಕೇರಳದ ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನದ ಆವರಣದಲ್ಲಿ ಸುತ್ತಾಡುತ್ತಿರುವುದನ್ನು ತೋರಿಸುತ್ತದೆ.

Share.

Comments are closed.

scroll