Fake News - Kannada
 

ಹಸುವೊಂದು ಸ್ಕೂಟರ್‌ನಲ್ಲಿ ಕುಳಿತು ಸವಾರಿ ಮಾಡುತ್ತಿರುವ ಈ ವೀಡಿಯೊ AI- ರಚಿತವಾಗಿದೆ

0

ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ (ಇಲ್ಲಿ) ವೈರಲ್ ಆಗುತ್ತಿದೆ, ಅದರಲ್ಲಿ ಒಂದು ಹಸು ಸ್ಕೂಟರ್ ಮೇಲೆ ಕುಳಿತು ಚಲಾಯಿಸುತ್ತಿರುವುದನ್ನು ತೋರಿಸುತ್ತಿದೆ. ತದನಂತರದ ಕ್ಲಿಪ್‌ನಲ್ಲಿ, ಹಸು ಭಾರತೀಯ ಬೀದಿಯಲ್ಲಿ ಸವಾರಿ ಮಾಡುತ್ತಿರುವಂತೆ ತೋರಿಸಲಾಗಿದೆ. ಈ ಪೋಸ್ಟ್ ನಲ್ಲಿ ಇದು ನಿಜವೆಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಭಾರತದ ಬೀದಿಯಲ್ಲಿ ಹಸುವೊಂದು ಸ್ಕೂಟರ್‌ನಲ್ಲಿ ಕುಳಿತು ಸವಾರಿ ಮಾಡುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ. 

ಫ್ಯಾಕ್ಟ್: ಈ ವೀಡಿಯೊ AI-ರಚಿತವಾಗಿದ್ದು, ಇಲ್ಲಿ ಅನೇಕ  ಅಸಂಗತತೆಯನ್ನು ಹೊಂದಿದೆ ಮತ್ತು ಪತ್ತೆ ಸಾಧನಗಳು ಇದನ್ನು AI-ರಚಿತ ಎಂದು ಫ್ಲ್ಯಾಗ್ ಮಾಡಿವೆ. ಹೈವ್ AI ಉಪಕರಣವು ಇದನ್ನು 95.5% AI-ರಚಿತ ಎಂದು ಫ್ಲ್ಯಾಗ್ ಮಾಡಿದೆ. ಹೃಷಿಕೇಶದಲ್ಲಿ ನಡೆದ ಇದೇ ರೀತಿಯ ಘಟನೆಯ ವೀಡಿಯೊ ಈ ಹಿಂದೆ ವೈರಲ್ ಆಗಿದ್ದರೂ, ಈ ಕ್ಲಿಪ್‌ಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಈ ಕ್ಲೇಮ್ ಸುಳ್ಳು.

ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ನಾವು ಹಲವಾರು ಅಸಂಗತತೆಗಳನ್ನು ಗಮನಿಸಿದ್ದೇವೆ. ಉದಾಹರಣೆಗೆ, ವಾಹನದ ನಂಬರ್ ಪ್ಲೇಟ್ ಮತ್ತು ಅಂಗಡಿಯ ಹೆಸರಿನ ಫಲಕಗಳು ಗುರುತಿಸಲಾಗದ ಮತ್ತು ಅರ್ಥಹೀನ ಲಿಪಿಯಲ್ಲಿ ಗೋಚರಿಸುತ್ತವೆ. ಹೆಚ್ಚುವರಿಯಾಗಿ, ಹಸು ಸ್ಕೂಟರ್ ಮೇಲೆ ಹೆಜ್ಜೆ ಹಾಕುವಾಗ ಮತ್ತು ನಂತರ ಅದರ ದೇಹದ ಮೇಲೆ ಗಮನಾರ್ಹ ಬಣ್ಣ ಬದಲಾವಣೆಗಳಿವೆ. ಈ ದೋಷಗಳು ವೀಡಿಯೊ AI-ರಚಿತವಾಗಿದೆ ಎಂದು  ಸೂಚಿಸುತ್ತವೆ.

ವೀಡಿಯೊ AI-ರಚಿತವಾಗಿದೆಯೇ ಎಂದು ಪರಿಶೀಲಿಸಲು, ನಾವು ಅದನ್ನು ಹೈವ್ AI ಪತ್ತೆ ಉಪಕರಣದ ಮೂಲಕ ರನ್ ಮಾಡಿದ್ದೇವೆ, ಅದು ಅದನ್ನು 95.5% AI-ರಚಿತ ಎಂದು ಫ್ಲ್ಯಾಗ್ ಮಾಡಿದೆ. ವೀಡಿಯೊದ ಮೂಲವನ್ನು ನಾವು ಪತ್ತೆಹಚ್ಚಲು ಸಾಧ್ಯವಾಗದಿದ್ದರೂ, ಅಸಂಗತತೆಗಳು ವೀಡಿಯೊ ನಿಜವಾಗಿಯೂ AI-ರಚಿತವಾಗಿದೆ ಎಂದು ಖಚಿತಪಡಿಸುತ್ತದೆ.

ಇದಲ್ಲದೆ, ಮೇ ತಿಂಗಳಲ್ಲಿ ಇದೇ ರೀತಿಯ ವೀಡಿಯೊ ವೈರಲ್ ಆಗಿತ್ತು, ಇದು ಹೃಷಿಕೇಶದಲ್ಲಿ ಹಸುವೊಂದು ಸ್ಕೂಟರ್ ಮೇಲೆ ಹತ್ತುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡಿತ್ತು. ಸಿಸಿಟಿವಿ ದೃಶ್ಯಾವಳಿಗಳು ಹಸುವಿನ ತೂಕದಿಂದಾಗಿ ಸ್ಕೂಟರ್ ಮುಂದೆ ಚಲಿಸುತ್ತಿರುವುದನ್ನು ತೋರಿಸಿವೆ. ಆದರೆ  ಪ್ರಸ್ತುತ ವೈರಲ್ ಆಗಿರುವ ವೀಡಿಯೊಗೆ ಆ ಘಟನೆಗೂ ಯಾವುದೇ ಸಂಬಂಧವಿಲ್ಲ. 

ಒಟ್ಟಾರೆಯಾಗಿ ಹೇಳುವುದಾದರೆ, ಹಸುವೊಂದು ಸ್ಕೂಟರ್‌ನಲ್ಲಿ ಕುಳಿತು ಸವಾರಿ ಮಾಡುವುದನ್ನು ತೋರಿಸುವ ಈ ವೀಡಿಯೊ AI- ರಚಿತವಾಗಿದ್ದು, ನಿಜವಲ್ಲ.

Share.

Comments are closed.

scroll