Fake News - Kannada
 

ಚೀನಾ ವಸ್ತುಗಳನ್ನು 90 ದಿನಗಳವರೆಗೆ ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಜನರನ್ನು ಒತ್ತಾಯಿಸಿರುವ ಈ ಪೋಸ್ಟ್ ನಕಲಿಯಾಗಿದೆ

0

ಭಾರತದ ಪ್ರಧಾನಿ ನರೇಂದ್ರ ಮೋದಿ 90 ದಿನಗಳವರೆಗೆ ವಿದೇಶಿ ವಸ್ತುಗಳನ್ನು, ವಿಶೇಷವಾಗಿ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಖರೀದಿಸದಂತೆ ಭಾರತದ ಜನರನ್ನು ಒತ್ತಾಯಿಸಿದ್ದಾರೆ ಎನ್ನುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನ ಪ್ರಕಾರ, ಎಲ್ಲಾ ಭಾರತೀಯರು ಇದನ್ನು ಮಾಡಿದರೆ, ಭಾರತವು ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರವಾಗಬಹುದು ಮತ್ತು ಅದೇ ಸಮಯದೊಳಗೆ ಭಾರತೀಯ ರೂಪಾಯಿ ಮೌಲ್ಯವು 2 ರೂಪಾಯಿಗೆ ಒಂದು ಯುಎಸ್ ಡಾಲರ್‌ಗೆ ತಲುಪಬಹುದು ಎಂದು ಹೇಳಲಾಗಿದೆ. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಸ್ಥಳೀಯ ವಸ್ತುಗಳನ್ನು ಖರೀದಿಸುವುದರಿಂದ ಚೀನೀ ಉತ್ಪನ್ನಗಳ ಬಳಕೆಯಲ್ಲಿ 20% ಇಳಿಕೆಯಾಗಿದೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: 90 ದಿನಗಳ ಕಾಲ ಚೀನಾದ ವಸ್ತುಗಳನ್ನು ಖರೀದಿಸಬಾರದೆಂದು ಪ್ರಧಾನಿ ನರೇಂದ್ರ ಮೋದಿ ಭಾರತದ ಜನರನ್ನು ಒತ್ತಾಯಿಸಿದ್ದಾರೆ.

ಫ್ಯಾಕ್ಟ್: ಅನೇಕ ಸಂದರ್ಭಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮ ಮತ್ತು ಇತರ ಮಾಧ್ಯಮಗಳ ಮೂಲಕ ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವಂತೆ ಜನರನ್ನು ಪ್ರೋತ್ಸಾಹಿಸಿದ್ದಾರೆ. ತಮ್ಮ ಸ್ವದೇಶಿ ವಸ್ತುಗಳ ಪ್ರಚಾರವು ಯಾವುದೇ ನಿರ್ದಿಷ್ಟ ದೇಶದ ವಿರುದ್ಧ ನಿರ್ದೇಶಿಸಲ್ಪಟ್ಟಿಲ್ಲ ಆದರೆ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. 90 ದಿನಗಳ ವಿದೇಶಿ ವಸ್ತುಗಳ ಬಹಿಷ್ಕಾರವು ಭಾರತವನ್ನು ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರವನ್ನಾಗಿ ಮಾಡುತ್ತದೆ ಅಥವಾ ರೂಪಾಯಿ ಎರಡು ರೂಪಾಯಿಗೆ ಒಂದು ಡಾಲರ್‌ಗೆ ಸಮಾನವಾಗಿರುತ್ತದೆ ಎಂದು ಮೋದಿಯಿಂದ ಯಾವುದೇ ಹೇಳಿಕೆ ಬಂದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಗೂಗಲ್ ಕೀವರ್ಡ್‌ಗಳೊಂದಿಗೆ ತನಿಖೆ ನಡೆಸಿದಾಗ, ಪ್ರಧಾನಿ ಮೋದಿ ಅಥವಾ ಸರ್ಕಾರ 90 ದಿನಗಳ ವಿದೇಶಿ ಸರಕುಗಳನ್ನು, ಅದರಲ್ಲೂ ವಿಶೇಷವಾಗಿ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸುವ ಯಾವುದೇ ಅಧಿಕೃತ ಹೇಳಿಕೆಗಳು ನಮಗೆ ಕಂಡುಬಂದಿಲ್ಲ. ನ್ಯೂಸ್ ಮೀಡಿಯಾಗಳು ಸಹ ಮೋದಿಯವ ಈ ಹೇಳಿಕೆಯನ್ನು ವರದಿ ಮಾಡಿಲ್ಲ. ಹೀಗೆ ಮಾಡಿದರೆ  ಭಾರತವನ್ನು ಎರಡನೇ ಶ್ರೀಮಂತ ರಾಷ್ಟ್ರವನ್ನಾಗಿ ಮಾಡುತ್ತದೆ ಅಥವಾ ರೂಪಾಯಿಯು ಪ್ರತಿ ಡಾಲರ್‌ಗೆ ಎರಡು ರೂಪಾಯಿಗಳಿಗೆ ಸಮಾನವಾಗಿರುತ್ತದೆ ಎಂದು ಹೇಳಲಿಲ್ಲ.

ನಮ್ಮ ತನಿಖೆಯ ಸಮಯದಲ್ಲಿ, ನಾವು 1 ನವೆಂಬರ್ 2021 ರಂದು ನ್ಯೂಸ್ 18 ಹಿಂದಿಗೆ ಸಂಬಂಧಿತ ಸುದ್ದಿ ಲೇಖನವನ್ನು ಕಂಡುಕೊಂಡಿದ್ದೇವೆ. ಈ ಲೇಖನವು ಪ್ರಧಾನಿ ಮೋದಿಯವರು ಸ್ವದೇಶಿ ವಸ್ತುಗಳನ್ನು ಖರೀದಿಸಲು ಮತ್ತು ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಪ್ರೋತ್ಸಾಹಿಸಿದ್ದಾರೆ ಎಂದು ವರದಿ ಮಾಡಿದೆ. ಅಲ್ಲಿ ಹೆಡ್ಲೈನ್ ಅನ್ನು ಈ ರೀತಿ ನೀಡಲಾಗಿದೆ :  “ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ದೀಪಾವಳಿಗೆ ಮನವಿ ಮಾಡಿದ್ದು, ‘ಚೀನಾ 50 ಸಾವಿರ ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ. ‘” ಮೋದಿ ಆಗಾಗ ಸ್ವದೇಶಿ ಉತ್ಪನ್ನಗಳನ್ನು ಬಳಸುವುದನ್ನು ಮತ್ತು “ಲೋಕಲ್ ಫಾರ್ ವೋಕಲ್” ಬೆಂಬಲಿಸುತ್ತಾರೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ, ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ ಈ ಮನವಿಯು ಯಾವುದೇ ನಿರ್ದಿಷ್ಟ ದೇಶದ ವಿರುದ್ಧವಾಗಿಲ್ಲ.

ಲೇಖನದ ಪ್ರಕಾರ, ಮೋದಿ ಮತ್ತು ಹಲವಾರು ಮಂತ್ರಿಗಳು “ಸ್ವದೇಶಿ” ಮತ್ತು “ಲೋಕಲ್ ಫಾರ್ ವೋಕಲ್” ಅಭಿಯಾನವು ಭಾರತದ ಸ್ವಾವಲಂಬನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಯಾವುದೇ ನಿರ್ದಿಷ್ಟ ರಾಷ್ಟ್ರವನ್ನು ವಿರೋಧಿಸಲು ಅಲ್ಲ ಎಂದು ತಿಳಿಸಿದ್ದಾರೆ. 

2023 ರ ದೀಪಾವಳಿ ಸಂದರ್ಭದಲ್ಲಿ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಜನರನ್ನು ಒತ್ತಾಯಿಸುವ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನ ಪತ್ರವೊಂದು ವೈರಲ್ ಆಗಿದೆ. ಆದರೆ, ಮೋದಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪತ್ರಗಳು ನಕಲಿ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿದೆ. ಇನ್ನು ಹೆಚ್ಚಾಗಿ ಹೇಳಬೇಕಾದರೆ, ನ್ಯೂಸ್ ಮೀಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಹಬ್ಬುತ್ತಿರುವ ಈ ಮಾಹಿತಿ ಸುಳ್ಳು ಎಂದು ಆರ್ಟಿಕಲ್ಸ್ ನಲ್ಲಿ  ತಿಳಿಸಿದೆ. 

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು 90 ದಿನಗಳವರೆಗೆ ಚೀನಾದ ವಸ್ತುಗಳನ್ನು ಖರೀದಿಸದಂತೆ ಭಾರತದ ಜನರಿಗೆ ಮನವಿ ಮಾಡಿದ್ದಾರೆ ಎಂದು ಹೇಳುವ ಈ ಪೋಸ್ಟ್ ಸುಳ್ಳು. 

Share.

Comments are closed.

scroll