Fake News - Kannada
 

ಭೀಕರ ಸ್ಥಿತಿಯಲ್ಲಿ ಒಬ್ಬಂಟಿಯಾಗಿ ಕೂತಿರುವ ಈ ಮಗುವಿನ ದೃಶ್ಯಗಳು ಗಾಜಾದಾಗಿದೆ

0

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಗಳ ನಡುವೆಯೂ (ಇಲ್ಲಿ, ಇಲ್ಲಿ), ಗಾಬರಿಗೊಂಡ ಮತ್ತು ಅಸಹಾಯಕವಾಗಿ ಅವಶೇಷಗಳ ನಡುವೆ ಒಂಟಿಯಾಗಿ ಕುಳಿತಿರುವ  ಮಗುವಿನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯಗಳು ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿರುವ ಅಸಹಾಯಕ ಹಿಂದೂ ಮಗುವನ್ನು ತೋರಿಸುತ್ತವೆ ಎಂದು ಹೇಳಿಕೊಳ್ಳಲಾಗಿದೆ . ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಪ್ರಸ್ತುತ 2024 ರಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಹಿಂದೂ ಮಗುವಿನ ಭಯಾನಕ ಸ್ಥಿತಿಯನ್ನು ತೋರಿಸುವ ದೃಶ್ಯಗಳು.

ಫ್ಯಾಕ್ಟ್: ಒಂಟಿಯಾಗಿ ಕೂತಿರುವ ಮಗುವಿನ ದೃಶ್ಯಗಳು ಗಾಜಾ ದೇಶಕ್ಕೆ ಸೇರಿದ್ದಾಗಿದೆ. ಅದೇ ವೈರಲ್ ವೀಡಿಯೊವನ್ನು ಅಲ್ ಜಜೀರಾ ತಮ್ಮ ಅಧಿಕೃತ X (ಹಿಂದೆ ಟ್ವಿಟರ್) ಅಕೌಂಟ್ ನಲ್ಲಿ 14 ಜುಲೈ 2024 ರಂದು ಅಪ್‌ಲೋಡ್ ಮಾಡಿದ್ದಾರೆ. ವರದಿಗಳ ಪ್ರಕಾರ, ಜುಲೈ 2024 ರಂದು ಗಾಜಾದಲ್ಲಿರುವ ನುಸಿರಾತ್ ಕ್ಯಾಂಪ್‌ನಲ್ಲಿರುವ UNRWA ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ಮಗು ಒಂಟಿಯಾಗಿ ಕುಳಿತಿರುವುದನ್ನು ದೃಶ್ಯಗಳು ತೋರಿಸುತ್ತವೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಬಾಂಗ್ಲಾದೇಶದಲ್ಲಿ ಕೋಟಾ ವಿರೋಧಿ ಪ್ರತಿಭಟನೆಗಳು ಜೂನ್ 2024 ರಲ್ಲಿ ಪ್ರಾರಂಭವಾಗಿ ಅನೇಕ ಮಾರಣಾಂತಿಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಇತ್ತೀಚಿಗೆ, ನಡೆದ ಈ ಸಾಮೂಹಿಕ ಪ್ರತಿಭಟನೆಗಳು  ಸರ್ಕಾರದ ವಿರೋಧಿ ಪ್ರತಿಘಟನೆಗಳಾಗಿ ಮಾರ್ಪಾಡಾಗದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪರಾರಿಯಾದ ನಂತರದಿಂದ ಪರಿಸ್ಥಿತಿಗಳು ಮತ್ತಷ್ಟು ಉಲ್ಬಣಗೊಂಡಿತು. ಪ್ರತಿಭಟನಾಕಾರರು ಢಾಕಾದಲ್ಲಿರುವ  ಪ್ರಧಾನಿ ಅಧಿಕೃತ ನಿವಾಸವನ್ನು ವಶವಾದಿಸಿಕೊಂಡು  ಲೂಟಿ ಮಾಡಿದಲ್ಲದೆ ಅಲ್ಲಿನ ಸರಕು ಸಾಮಾನುಗಳನ್ನು  ಧ್ವಂಸಗೊಳಿಸಿದ್ದಾರೆ (ಇಲ್ಲಿ, ಇಲ್ಲಿ).

ಇಲ್ಲಿನ ಕೆಲ ಗುಂಪುಗಳು ಅಲ್ಪಸಂಖ್ಯಾತರ ಮನೆಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡಿದೆ, ವಿಶೇಷವಾಗಿ ಹಿಂದೂಗಳ ಬೆಲೆಬಾಳುವ ವಸ್ತುಗಳನ್ನು (ಇಲ್ಲಿ) ಲೂಟಿ ಮಾಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ವರದಿಗಳೂ ಇವೆ (ಇಲ್ಲಿ). ಇತ್ತೀಚಿನ ವರದಿಗಳ ಪ್ರಕಾರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 09 ಆಗಸ್ಟ್ 2024 ರಿಂದ ಪ್ರಾರಂಭವಾಗಿ, ಮಾಜಿ ಪ್ರಧಾನಿ ಶೇಖ್ ಹಸೀನಾ 05 ಆಗಸ್ಟ್ 2024 ರಂದು ಪರಾರಿಯಾದ ನಂತರದಿಂದ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ದೇಶದ ಇತರ ಭಾಗಗಳಲ್ಲಿ ಹಿಂಸಾಚಾರದ ವಿರುದ್ಧ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ವೈರಲ್ ವೀಡಿಯೊವನ್ನು ಸರಿಯಾಗಿ ಗಮನಿಸಿದ ನಂತರ, ಮೇಲಿನ ಎಡ ಮೂಲೆಯಲ್ಲಿ ಅಲ್ ಜಜೀರಾ ಲೋಗೋ ಮತ್ತು ಮೇಲಿನ ಬಲ ಮೂಲೆಯಲ್ಲಿ ಅರೇಬಿಕ್ ಭಾಷೆಯಲ್ಲಿ ಉಲ್ಲೇಖಿಸಲಾದ ಸ್ಥಳ ‘ನುಸೆರಾತ್ ಕ್ಯಾಂಪ್ – ಗಾಜಾ’ ಅನ್ನು ನಾವು ಗಮನಿಸಿದ್ದೇವೆ. ಇದರಿಂದ ವೈರಲ್ ಆಗಿರುವ ದೃಶ್ಯಗಳು ಗಾಜಾಕ್ಕೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗಿದೆ.

ವೈರಲ್ ದೃಶ್ಯದಲ್ಲಿ ರಿವರ್ಸ್ ಇಮೇಜ್ ಹುಡುಕಾಟವು 14 ಜುಲೈ 2024 ರಂದು ಅಲ್ ಜಜೀರಾ ಅವರ ಅಧಿಕೃತ X (ಹಿಂದೆ ಟ್ವಿಟರ್) ಖಾತೆಯಲ್ಲಿ ಅಪ್‌ಲೋಡ್ ಮಾಡಿದ ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೊಗೆ ಸಂಬಂಧಿಸಿದ ಕ್ಯಾಪ್ಶನ್ ನಲ್ಲಿ ಮಗುವಿನ ದೃಶ್ಯಗಳು ಗಾಜಾಗೆ ಸೇರಿದಾಗದೆ ಎಂದು ಸೂಚಿಸುತ್ತದೆ. ಈ ಪೋಸ್ಟ್ ನಲ್ಲಿ ಈ ರೀತಿ ಬರೆಯಲಾಗಿದೆ: “Fear and panic of a child sitting alone after an Israeli bombardment targeted a shelter for displaced people in the #Abu_Urayban school affiliated with UNRWA in the Nuseirat camp” (ಅರೇಬಿಕ್‌ನಿಂದ ಇಂಗ್ಲಿಷ್‌ಗೆ ಅನುವಾದಿಸಲಾಗಿದೆ). 14 ಜುಲೈ 2024 ರಂದು ಅಲ್ ಜಜೀರಾ ಮುಬಾಶರ್ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ವೈರಲ್ ಫೋಟೋವನ್ನು ಸಹ  ಇಲ್ಲಿ ತೋರಿಸಲಾಗಿದೆ.

ಈ ಕುರಿತು ಮತ್ತಷ್ಟು ಹುಡುಕಾಡಿದಾಗ, 20 ಜುಲೈ 2024 ರಂದು ಸಿಬಿಎಸ್ ನ್ಯೂಸ್ ಅಪ್‌ಲೋಡ್ ಮಾಡಿದ ಯೂಟ್ಯೂಬ್‌ ವಿಡಿಯೋದಲ್ಲಿ ಗಾಜಾದಿಂದ ಬಂದ ಅದೇ ಮಗುವನ್ನು ಒಳಗೊಂಡಿರುವ  ದೃಶ್ಯಗಳು ನಮಗೆ ದೊರಕಿದೆ. ಇಲ್ಲಿ ‘Video Captures Aftermath of Israeli Airstrike in Gaza’ ಎಂಬ ಕ್ಯಾಪ್ಶನ್ ಅನ್ನು ನೀಡಲಾಗಿದೆ. ಇನ್ನು ಹೆಚ್ಚಿಗೆ ಹುಡುಕಾಡಿದಾಗ, ‘‘Humanitarian Relief’  ಎಂಬ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ 14 ಜುಲೈ 2024 ರಂದು ಅದೇ ಮಗುವನ್ನು ಒಳಗೊಂಡಿರುವ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ, ಇದು ಇಸ್ರೇಲಿ ಬಾಂಬ್ ದಾಳಿಯ ನಂತರದ ಪರಿಣಾಮವನ್ನು ತೋರಿಸುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ. ಗಾಜಾದ ನುಸಿರಾತ್ ಶಿಬಿರದಲ್ಲಿರುವ UNRWA ಶಾಲೆಯ ನಾಗರಿಕರು ಆಶ್ರಯ ಪಡೆದಿದ್ದರು. ಅರೇಬಿಕ್ ವೆಬ್‌ಸೈಟ್‌ನಲ್ಲಿ ಅದೇ ಮಗುವನ್ನು ಒಳಗೊಂಡಿರುವ ‘daily massacres of the occupation in the Gaza Strip,’  ಎಂಬ ಲೇಖನವನ್ನು ಕಂಡುಕೊಂಡಿದ್ದೇವೆ. ಈ ಎಲ್ಲಾ ಆಧಾರಗಳ ಮೂಲಕ ವೈರಲ್ ಆಗಿರುವ ಕ್ಲಿಪ್ಸ್ ಗಾಜಾದ ಮಗುವನ್ನು ತೋರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚಿಗೆ ಅಂದರೆ 2024ರಲ್ಲಿ ಬಾಂಗ್ಲಾದೇಶದಲ್ಲಿನಡೆಯುತ್ತಿರುವ ಗಲಭೆಯಲ್ಲಿ ಸಂಬಂಧವಿಲ್ಲದ ಬಾಂಗ್ಲಾದೇಶಿ ಹಿಂದೂ ಮಗುವಿನ ಭೀಕರ ಸ್ಥಿತಿಯನ್ನು ತೋರಿಸುವಂತೆ ಗಾಜಾದ ದೃಶ್ಯಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. 

Share.

Comments are closed.

scroll