Fake News - Kannada
 

ಥೈಲ್ಯಾಂಡ್ನ ಅಯುತ್ತಾಯ ಖೋನ್ ಉತ್ಸವದ ಈ ದೃಶ್ಯಗಳಲ್ಲಿ ತೋರಿಸಿರುವ ಆನೆಗೆ ನಿಜವಾಗಿಯೂ ಮೂರು ತಲೆಯಿಲ್ಲ

0

ಮೆರವಣಿಗೆಯಲ್ಲಿ ಮಾವುತನೊಬ್ಬ ಮೂರು ತಲೆಯ ಆನೆಯ ಮೇಲೆ ಸವಾರಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಕೆಲವರು ಇದು ನಿಜ ಆನೆ ಎಂದು ಹೇಳಿದ್ದಾರೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಆನೆಗೆ ಮೂರು ತಲೆಯಿರುವ ವಿಡಿಯೋ.

ಫ್ಯಾಕ್ಟ್: ಈ ದೃಶ್ಯಗಳು ಥೈಲ್ಯಾಂಡ್ನ ಅಯುತ್ತಾಯ ಖೋನ್ ಉತ್ಸವದಾಗಿದ್ದು, ಅಲ್ಲಿ ಮೂರು ತಲೆಯ ಆನೆಯನ್ನು ದೈವಿಕ ಸ್ವರೂಪಿ ಐರಾವತ, ಥಾಯ್ ಹೆಸರಾದ ಎರವಾನ್ ಅನ್ನು ಬಿಂಬಿಸುವ ಮೆರವಣಿಗೆ ಇದಾಗಿದೆ. ಆನೆಯ ಮೇಲಿನ ಇನ್ನೆರಡು ತಲೆಗಳು ಪ್ರಾಸ್ಥೆಟಿಕ್ ಆಗಿದ್ದು, ಅದು ನಿಜವಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದಲ್ಲಿ ಮಾವುತನು ಮೂರು ತಲೆಯ ಆನೆಯ ಮೇಲೆ ಸವಾರಿ ಮಾಡುತ್ತಿರುವುದನ್ನು ತೋರಿಸುತ್ತದೆ, ಆದರೆ ಹೆಚ್ಚುವರಿ ಎರಡು ತಲೆಗಳು ಪ್ರಾಸ್ಥೆಟಿಕ್ ಆಗಿದ್ದು, ಅದು ನಿಜವಲ್ಲ. ವೀಡಿಯೊದ ರಿವರ್ಸ್ ಇಮೇಜ್ ಹುಡುಕಾಟವು ಥಾಯ್ ವ್ಲಾಗರ್ ಪೋಸ್ಟ್ ಮಾಡಿದ ಯೂಟ್ಯೂಬ್ನಲ್ಲಿ ಅದೇ ಕ್ಲಿಪಿಂಗ್ ಗೆ ನಮ್ಮನ್ನು ಕರೆದೊಯ್ಯಿತು. ವಿವರಣೆಯ ಪ್ರಕಾರ, ಥೈಲ್ಯಾಂಡ್ನ ಅಯುತ್ತಾಯ ಜನರ ಸಂಸ್ಕೃತಿಯ ಪ್ರಕಾರ ‘5 ನೇ ಅಯುತ್ತಾಯ ಖೋನ್ ಉತ್ಸವ’ದ ಸಿದ್ಧತೆಗಳನ್ನು ವೀಡಿಯೊ ಚಿತ್ರಿಸುತ್ತದೆ.

ಇದರ ಆಧಾರದ ಮೇಲೆ, ಮತ್ತಷ್ಟು ಹುಡುಕಾಡಿದಾಗ, ವಾಟ್ ಮಹತ್ ನಲ್ಲಿ  ನಡೆದ ಅಯುತ್ತಾಯ ಖೋನ್ ಉತ್ಸವದ ಮೆರವಣಿಗೆಯಲ್ಲಿಇದೇ ರೀತಿಯ ಮೂರು ತಲೆಯ ಆನೆಗಳ ವೀಡಿಯೊಗಳನ್ನುಕಂಡುಕೊಂಡಿದ್ದೇವೆ. ಈ ವರ್ಷದ ಫೂಟೇಜ್ ಮತ್ತು ಹಿಂದಿನ ಉತ್ಸವಗಳ ಫೂಟೇಜ್ ನಲ್ಲಿ ಇದೇ ರೀತಿಯ ಕ್ಲಿಪಿಂಗ್ಸ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದಾಗಿದೆ. ಆನೆಯ ಹೆಚ್ಚುವರಿ ಎರಡು ತಲೆಗಳು ಪ್ರಾಸ್ಥೆಟಿಕ್ ಎಂದು ಈ ದೃಶ್ಯಗಳು ಸ್ಪಷ್ಟವಾಗಿ ತೋರಿಸುತ್ತವೆ.

ಈ ಹಬ್ಬವು  ಥೈಲ್ಯಾಂಡ್ನನ ಪೂರ್ವಜರಾದ ಅಯುತ್ತಾಯದ ಆದುನಿಕ ಸಂಸ್ಕೃತನ್ನು ಬಿಂಬಿಸುವ  ವಾರ್ಷಿಕ ಕಾರ್ಯಕ್ರಮವಾಗಿದೆ. ಥಾಯ್ ಪುರಾಣದಲ್ಲಿ, ಎರವಾನ್ (ಐರಾವತ, ದೈವ ಸ್ವರೂಪಿ ಆನೆಯ ಥಾಯ್ ಹೆಸರು) ಮೂರು ಅಥವಾ ಕೆಲವೊಮ್ಮೆ ಮೂವತ್ತಮೂರು ತಲೆಗಳನ್ನು ಹೊಂದಿರುವ ಬೃಹತ್ ಆನೆಯಾಗಿ ಚಿತ್ರಿಸಲಾಗಿದೆ, ಇದನ್ನು ಹೆಚ್ಚಾಗಿ ಅನೇಕ ದಂತಗಳೊಂದಿಗೆ ತೋರ್ಪಡಿಸಲಾಗುತ್ತದೆ. ಥೈಲ್ಯಾಂಡ್ ನ ಅನೇಕ ದೇವಾಲಯಗಳು ಮೂರು ತಲೆಯ ಆನೆಯಾದ ಎರವನ್ ಮೇಲೆ ಸವಾರಿ ಮಾಡುವ ಇಂದ್ರನ ಶಿಲ್ಪಗಳನ್ನು ಹೊಂದಿವೆ. ಇನ್ನು ಹೆಚ್ಚಾಗಿ ಇಲ್ಲಿ  ಎರವಾನ್ಗೆ ಸೀಮಿತವಾದ  ವಸ್ತುಸಂಗ್ರಹಾಲಯವಿದೆ.

ಈ ಮೂಲಕ, ವೈರಲ್ ವೀಡಿಯೊದಲ್ಲಿ ತೋರಿಸಲಾದ ಮೂರು ತಲೆಯ ವೀಡಿಯೊ ನಿಜವಲ್ಲ ಬದಲಾಗಿ ಥಾಯ್ ಪುರಾಣದಲ್ಲಿಕಾಣಿಸುವ ದೈವ ಸ್ವರೂಪಿ ಸ್ಥಾನಮಾನವನ್ನು ಹೊಂದಿರುವ ಎರವಾನ್ ನ ಚಿತ್ರಣವಾಗಿದೆ ಎಂದು ಈ ಎಲ್ಲಾ ವಿವರಗಳು ದೃಢಪಡಿಸುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಥೈಲ್ಯಾಂಡ್ನ ಅಯುತ್ತಾಯ ಖೋನ್ ಉತ್ಸವದ ಈ ದೃಶ್ಯಗಳಲ್ಲಿನ ಆನೆ ನಿಜವಲ್ಲ. 

Share.

Comments are closed.

scroll