ಒಬ್ಬ ಕಳ್ಳನು ದರೋಡೆ ಮಾಡಲು ಅಂಗಡಿಯೊಳಗೆ ಪ್ರವೇಶಿಸುತ್ತಿರುವ CCTV ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವನು ಕದಿಯಲು ಪ್ರಯತ್ನಿಸುತ್ತಿರುವಾಗ, ಅಂಗಡಿಯೊಳಗಿದ್ದ ಒಂದು ಮಗು ಅವನಿಗೆ ಲಾಲಿಪಾಪ್ ನೀಡುತ್ತದೆ. ಇದರಿಂದ ಪ್ರೇರಿತನಾದ ಕಳ್ಳನು ತನ್ನ ಯೋಜನೆಯನ್ನು ಕೈಬಿಟ್ಟು, ಕದ್ದ ಹಣವನ್ನು ಹಿಂದಿರುಗಿಸಿ, ಮಗುವಿಗೆ ಮುತ್ತು ನೀಡಿ ಹೊರಟು ಹೋಗುತ್ತಾನೆ. ಈ ವೀಡಿಯೊವನ್ನು ನಿಜವಾದ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲದ ಕ್ಲೇಮನ್ನು ಪರಿಶೀಲಿಸೋಣ.

ಕ್ಲೇಮ್: ಅಂಗಡಿಯೊಳಗೆ ಒಂದು ಮಗು ಲಾಲಿಪಾಪ್ ನೀಡಿದ ನಂತರ ಕಳ್ಳನು ದರೋಡೆಯನ್ನು ಕೈಬಿಟ್ಟು ಹಣವನ್ನು ಹಿಂದಿರುಗಿಸುವುದನ್ನು CCTV ವೀಡಿಯೊ ತೋರಿಸುತ್ತದೆ.
ಫ್ಯಾಕ್ಟ್: ಈ ವೀಡಿಯೊ ಸ್ಕ್ರಿಪ್ಟೆಡ್. ಇದನ್ನು ಪಾಕಿಸ್ತಾನದ ಚಾನೆಲ್ ‘ಕಾಮ್ರಾನ್ ಟೀಮ್ ಆಫೀಸಿಯಲ್’ ಅಪ್‌ಲೋಡ್ ಮಾಡಿದ್ದು, ದೃಶ್ಯಗಳು ಕಲ್ಪಿತ ಮತ್ತು ಬಳಸಿದ ಶಸ್ತ್ರಾಸ್ತ್ರಗಳು ನಕಲಿ ಎಂದು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.
ಈ ಕ್ಲೇಮನ್ನು ಪರಿಶೀಲಿಸಲು, ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಇದು ನಮಗೆ ನವೆಂಬರ್ 16, 2025 ರಂದು ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ ಕಾಮ್ರಾನ್ ಟೀಮ್ ಆಫೀಸಿಯಲ್ ನಲ್ಲಿ ಅಪ್‌ಲೋಡ್ ಮಾಡಿದ ಒರಿಜಿನಲ್ ವೀಡಿಯೊಗೆ ಕರೆದೊಯ್ಯಿತು. ವೀಡಿಯೊದ ವಿವರಣೆಯಲ್ಲಿ, ಈ ಕ್ಲಿಪ್ ಸ್ಕ್ರಿಪ್ಟೆಡ್ (ಕಲ್ಪಿತ) ಆಗಿದ್ದು, ಇದರಲ್ಲಿ ತೋರಿಸಿರುವ ವ್ಯಕ್ತಿಗಳು ನಟರು, ಮತ್ತು ತೋರಿಸಿರುವ ಶಸ್ತ್ರಾಸ್ತ್ರಗಳು ನಕಲಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ನಾವು ಇದೇ ವೀಡಿಯೊವನ್ನು ಕಾಮ್ರಾನ್ ಟೀಮ್ ನ ಫೇಸ್‌ಬುಕ್ ಪುಟದಲ್ಲಿಯೂ ಕಂಡುಕೊಂಡಿದ್ದೇವೆ, ಅಲ್ಲಿ ಕ್ಯಾಪ್ಷನಲ್ಲಿ ವೀಡಿಯೊ ಸ್ಕ್ರಿಪ್ಟೆಡ್ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ನಾವು ಇದೇ ಯೂಟ್ಯೂಬ್ ಚಾನೆಲ್‌ನಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಅಂತಹ ಹಲವು ಸ್ಕ್ರಿಪ್ಟೆಡ್ ವೀಡಿಯೊಗಳನ್ನು ಸಹ ಕಂಡುಕೊಂಡಿದ್ದೇವೆ. ಈ ಎಲ್ಲಾ ಪುರಾವೆಗಳು ವೈರಲ್ ಆಗಿರುವ ಈ ಕ್ಲಿಪ್ ನಿಜವಾದ ಘಟನೆಯಲ್ಲ ಎಂದು ದೃಢಪಡಿಸುತ್ತವೆ.
ಕೊನೆಯದಾಗಿ ಹೇಳುವುದಾದರೆ, ಒಂದು ಮಗು ಲಾಲಿಪಾಪ್ ನೀಡಿದ ನಂತರ ಕಳ್ಳನು ತನ್ನ ದರೋಡೆ ಮಾಡುವುದನ್ನು ಕೈಬಿಡುವ ವೀಡಿಯೊ ಸ್ಕ್ರಿಪ್ಟೆಡ್ ಆಗಿದ್ದು ನಿಜವಾದದಲ್ಲ.

