Fake News - Kannada
 

ಚೀನಾ ಮ್ಯೂಸಿಯಂನಲ್ಲಿರುವ ಈ ರಥದ ಚಕ್ರಗಳು ಮಹಾಭಾರತದ ರಥಗಳದ್ದಲ್ಲ; 3300 ವರ್ಷಗಳ ಹಿಂದಿನ ಸಾಂಗ್ ರಾಜವಂಶಕ್ಕೆ ಸೇರಿದೆ

0

ವಿದೇಶದಲ್ಲಿ ನಡೆದ ಉತ್ಖನನದ ವೇಳೆ ಮಹಾಭಾರತದ ರಥ ಪತ್ತೆಯಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಪೋಸ್ಟ್‌ನಲ್ಲಿ ಎಷ್ಟು ಸತ್ಯವಿದೆ ಎಂದು ಈಗ ನೋಡೋಣ.

ಪ್ರತಿಪಾದನೆ: ವಿದೇಶದಲ್ಲಿ ಉತ್ಖನನ ನಡೆಸಿದಾಗ ಮಹಾಭಾರತದ ರಥದ ದೃಶ್ಯಗಳು ಪತ್ತೆಯಾಗಿವೆ.

ಸತ್ಯ: ವೀಡಿಯೊದಲ್ಲಿನ ದೃಶ್ಯಗಳು ಚೀನಾದ ಆನ್ ಯಾಂಗ್ ನಗರದ ಸಮೀಪವಿರುವ “ಯಿನ್ ಕ್ಸು” ವಸ್ತುಸಂಗ್ರಹಾಲಯದ್ದಾಗಿದೆ. ಇಲ್ಲಿನ ಪುರಾತನ ಸಮಾಧಿಗಳಲ್ಲಿ ಮಾನವ ಮೂಳೆಗಳ ಜೊತೆಗೆ ರಥದ ಚಕ್ರಗಳು, ವಿವಿಧ ಆಭರಣಗಳು ಮತ್ತು ಪಾತ್ರೆಗಳು ಸಹ ಕಂಡುಬಂದಿವೆ. ಇವುಗಳು 3300 ವರ್ಷಗಳಷ್ಟು ಹಳೆಯದಾದ ಶಾಂಗ್ ರಾಜವಂಶಕ್ಕೆ ಸೇರಿದವು ಎಂದು ಯುನೆಸ್ಕೋ ಗುರುತಿಸಿದೆ. ಜೊತೆಗೆ ಈ ವಸ್ತುಸಂಗ್ರಹಾಲಯದಲ್ಲಿ ಅನೇಕ ಪುರಾತನ ರಥಗಳನ್ನು ಸಹ ಕಾಣಬಹುದು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ಈ ವೈರಲ್ ವೀಡಿಯೊದಲ್ಲಿನ ದೃಶ್ಯಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಚೀನಾದ ಆನ್ ಯಾಂಗ್ ನಗರದ ಸಮೀಪವಿರುವ ‘‘ಯಿನ್ ಕ್ಸು” ಮ್ಯೂಸಿಯಂನದ್ದು ಎಂದು ನಾವು ಕಂಡುಕೊಂಡಿದ್ದೇವೆ. ಇದರ ಕುರಿತು ಹೆಚ್ಚಿನ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಚೀನೀ ಸರ್ಕಾರದ ಅಧಿಕೃತ ವೆಬ್‌ಸೈಟ್ ಪ್ರಕಾರ, “ಯಿನ್ ಕ್ಸು” ಪ್ರದೇಶವು ಚೀನಾದ ಅತ್ಯಂತ ಹಳೆಯ ಪುರಾತನ ತಾಣಗಳಲ್ಲಿ ಒಂದಾಗಿದೆ. 19ನೇ ಶತಮಾನದಿಂದಲೂ ಇಲ್ಲಿ ಉತ್ಖನನ ನಡೆಸಲಾಗುತ್ತಿದೆ. ಸುಮಾರು 3300 ವರ್ಷಗಳಷ್ಟು ಹಳೆಯದಾದ ವಸ್ತುಗಳು, ಮೂಳೆಗಳು, ಆಭರಣಗಳು ಮತ್ತು ರಥಗಳನ್ನು ಇಲ್ಲಿನ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು. ಇದು ‘ಶಾಂಗ್(ಇನ್)’ ರಾಜವಂಶದ ಪಳೆಯುಳಿಕೆಗಳಾಗಿದ್ದು, ಅವರ ಆಳ್ವಿಕೆ ಕ್ರಿಸ್ತಪೂರ್ವ 16 ರಿಂದ 11 ನೇ ಶತಮಾನದ ಮಧ್ಯದವರೆಗೆ ಇತ್ತು. ಈ ತಾಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ಇಲ್ಲಿನ ಪುರಾತನ ಸಮಾಧಿಗಳಲ್ಲಿ ಮಾನವ ಮೂಳೆಗಳ ಜೊತೆಗೆ ರಥದ ಚಕ್ರಗಳು, ವಿವಿಧ ಆಭರಣಗಳು ಮತ್ತು ಪಾತ್ರೆಗಳು ಸಹ ಕಂಡುಬಂದಿವೆ.

ಈ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾದ ರಥಗಳ ಹೆಚ್ಚಿನ ಫೋಟೋಗಳನ್ನು ಇಲ್ಲಿ ಕಾಣಬಹುದು.

ಒಟ್ಟಿನಲ್ಲಿ, ಚೀನಾದ ವಸ್ತುಸಂಗ್ರಹಾಲಯದಲ್ಲಿರುವ 3300 ವರ್ಷಗಳಷ್ಟು ಹಳೆಯದಾದ ಶಾಂಗ್ ರಾಜವಂಶದ ರಥದ ಚಕ್ರವನ್ನು ಮಹಾಭಾರತದ ರಥ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ.

Share.

Comments are closed.

scroll