ನೆಲಸಮವಾದ ವಸಾಹತುಗಳ ದೃಶ್ಯಗಳನ್ನು ತೋರಿಸಿ ಇದು ಬಹ್ರೈಚ್‌ನ ಮಹಾರಾಜ್‌ಗಂಜ್‌ನಿಂದ ಇತ್ತೀಚಿನ ದೃಶ್ಯಗಳು ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ‘ಬುಲ್ಡೋಜರ್ ನ್ಯಾಯ’ವನ್ನು ಚಿತ್ರಿಸುತ್ತದೆ ಎಂದು ಪೋಸ್ಟ್ ಆರೋಪಿಸಿದೆ, ಇದಲ್ಲದೆ ಪಟ್ಟಣದಲ್ಲಿ ಕೋಮುವಾದದ ಹಿಂಸಾಚಾರದ ಸಂದರ್ಭದಲ್ಲಿ ರಾಮ್ ಗೋಪಾಲ್ ಮಿಶ್ರಾ ಅವರ ಹತ್ಯೆಗೆ ಪ್ರತೀಕಾರವಾಗಿ ಇದನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಅಕ್ಟೋಬರ್ 2024 ರಲ್ಲಿ ರಾಮ್ ಗೋಪಾಲ್ ಮಿಶ್ರಾ ಅವರ ಹತ್ಯೆಗೆ ಪ್ರತೀಕಾರವಾಗಿ ಪ್ರಮುಖ ಆರೋಪಿಯ ಆಸ್ತಿಯನ್ನು ಗುರಿಯಾಗಿಟ್ಟುಕೊಂಡು ಬಹ್ರೈಚ್‌ನ ಮಹಾರಾಜ್‌ಗಂಜ್‌ನಲ್ಲಿ ಕೆಡವಲಾದ ಕಟ್ಟಡಗಳನ್ನು ವೀಡಿಯೊ ತೋರಿಸುತ್ತದೆ.
ಫ್ಯಾಕ್ಟ್: ವೈರಲ್ ವೀಡಿಯೊವು 25 ಸೆಪ್ಟೆಂಬರ್ 2024 ರಂದು ಬಹ್ರೈಚ್‌ನ ಫಖರ್‌ಪುರದಲ್ಲಿ ನ್ಯಾಯಾಲಯದ ಆದೇಶದ ಅತಿಕ್ರಮಣ-ವಿರೋಧಿ ಡ್ರೈವ್ ಅನ್ನು ತೋರಿಸುತ್ತದೆ, ಅಲ್ಲಿ ಸರಾಯಿ ಜಗ್ನಾ ಗ್ರಾಮದಲ್ಲಿ ಅಕ್ರಮ ನಿರ್ಮಾಣಗಳನ್ನು ಮೇ 2023 ರಿಂದ ಹೈಕೋರ್ಟ್ ಆದೇಶದ ನಂತರ ಬುಲ್‌ಡೋಜರ್‌ನಿಂದ ಕೆಡವಲಾಯಿತು. ನೆಲಸಂಗೊಳಿಸುತ್ತಿರುವ ಈ ವೀಡಿಯೊಗೂ ಇತ್ತೀಚಿನ ನಡೆದ ಕೋಮು ಹಿಂಸಾಚಾರದ ಸಂದರ್ಭದಲ್ಲಿ ರಾಮ್ ಗೋಪಾಲ್ ಮಿಶ್ರಾ ಹತ್ಯೆಯನ್ನು ಒಳಗೊಂಡ ಮಹಾರಾಜ್‌ಗಂಜ್‌ನಲ್ಲಿನ ವಿಡಿಯೋಗೂ ಯಾವುದೇ ಸಂಬಂಧವಿಲ್ಲ. ಇದರ ಮದ್ಯೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರದಿಂದ ನೆಲಸಂಗೊಳಿಸುವಿಕೆಯ ನೋಟಿಸ್‌ಗಳಿಗೆ ಪ್ರತಿಕ್ರಿಯಿಸಲು ಬಹ್ರೈಚ್‌ನಲ್ಲಿರುವ ಆರೋಪಿಗಳಿಗೆ 15 ದಿನಗಳ ವಿಸ್ತರಣೆಯನ್ನು ನೀಡಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು 26 ಸೆಪ್ಟೆಂಬರ್ 2024 ರಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾದ ಉತ್ತರ ಪ್ರದೇಶದ ವಜೀರ್‌ಗಂಜ್‌ನಿಂದ ಬಂದ ದೃಶ್ಯಗಳು ಎಂದು ಹೇಳುವ ರೀತಿಯ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು.

ಫೇಸ್‌ಬುಕ್ ಪೋಸ್ಟ್‌ನ ವಿವರಣೆಯಿಂದ ಸುಳಿವನ್ನು ತೆಗೆದುಕೊಂಡು ಗೂಗಲ್ ಕೀವರ್ಡ್ ಹುಡುಕಾಟವು ನಮ್ಮನ್ನು ವಿವಿಧ ಮಾಧ್ಯಮ ವರದಿಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕರೆದೊಯ್ಯಿತು. ಈ ವರದಿಗಳ ಪ್ರಕಾರ, 25 ಸೆಪ್ಟೆಂಬರ್ 2024 ರಂದು, ಬಹ್ರೈಚ್ ಜಿಲ್ಲೆಯ ಫಖರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸರೈ ಜಗ್ನಾ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮ ನಿರ್ಮಾಣಗಳನ್ನು ಬುಲ್ಡೋಜರ್ ಬಳಸಿ ಕೆಡವಲಾಯಿತು. ಮೇ 2023 ರಂದು ನೀಡಲಾದ ಹೈಕೋರ್ಟ್ ಆದೇಶದ ಆಧಾರದ ಮೇಲೆ ಇಲ್ಲಿನ 23 ಮನೆಗಳನ್ನು ಗುರಿಯಾಗಿಸಿ ಕೆಡವಲಾಗಿದೆ.

25 ಸೆಪ್ಟೆಂಬರ್ 2024 ರಂದು ಬಹ್ರೈಚ್ ಜಿಲ್ಲೆಯ ಫಖರ್‌ಪುರ್ ಪ್ರದೇಶದಲ್ಲಿ ನ್ಯಾಯಾಲಯದ ಆದೇಶದ ಅತಿಕ್ರಮಣ ವಿರೋಧಿ ಡ್ರೈವ್‌ನ ದೃಶ್ಯಗಳು ಮಹಾರಾಜಗಂಜ್ ನ ಇತ್ತೀಚಿನ ಘಟನೆಗೆ ಸಂಬಂಧಿಸಿಲ್ಲ ಎಂದು ಹೇಳುವ ಮೂಲಕ ಬಹ್ರೈಚ್ ಪೊಲೀಸರ ಅಧಿಕೃತ X ಖಾತೆಯು ವೈರಲ್ ಕ್ಲೇಮ್ ಅನ್ನು ತಳ್ಳಿಹಾಕಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ತಪ್ಪು ಮಾಹಿತಿ ಹರಡುವ ಮತ್ತು ಸಾಮರಸ್ಯವನ್ನು ಕದಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ಪೋಸ್ಟ್ ನಲ್ಲಿ ಎಚ್ಚರಿಸಿದೆ.
ಆದರೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ಪ್ರದೇಶದಲ್ಲಿ ಇತ್ತೀಚಿನ ಹಿಂಸಾಚಾರದ ನಂತರ ಬಹ್ರೈಚ್‌ನಲ್ಲಿನ ಆರೋಪಿಗಳಿಗೆ ಉತ್ತರ ಪ್ರದೇಶ ಸರ್ಕಾರದ ಧ್ವಂಸ ನೋಟೀಸ್‌ಗೆ ಪ್ರತಿಕ್ರಿಯಿಸಲು 15 ದಿನಗಳ ವಿಸ್ತರಣೆಯನ್ನು ನೀಡಿದೆ. ಅಕ್ರಮ ನಿರ್ಮಾಣಗಳ ವಿರುದ್ಧ ಸರ್ಕಾರದ ಕ್ರಮಗಳನ್ನು ಪರಿಹರಿಸುವಲ್ಲಿ ಸರಿಯಾದ ಪ್ರಕ್ರಿಯೆ ಮತ್ತು ನ್ಯಾಯಸಮ್ಮತತೆಯ ಅಗತ್ಯವನ್ನು ನ್ಯಾಯಾಲಯ ಒತ್ತಿಹೇಳಿತು.
ಒಟ್ಟಾರೆಯಾಗಿ ಹೇಳುವುದಾದರೆ, ಬುಲ್ಡೋಜರ್ ವೀಡಿಯೊವು ಬಹ್ರೈಚ್ ಹಿಂಸಾಚಾರಕ್ಕೂ ಹಳೆಯದಾಗಿದ್ದು, ರಾಮ್ ಗೋಪಾಲ್ ಮಿಶ್ರಾ ಅವರ ಹತ್ಯೆಯ ಆರೋಪಿಗಳಿಗೂ ಇದನ್ನು ಯಾವುದೇ ಸಂಬಂಧಿಸಿಲ್ಲ.