Fake News - Kannada
 

ಟ್ರಂಪ್ ವಿಜಯೋತ್ಸವ ಭಾಷಣದ ಸಮಯದಲ್ಲಿ ಜನರು ‘ಮೋದಿ’ ಎಂದು ಘೋಷಣೆ ಕೂಗಲಿಲ್ಲ; ರಾಬರ್ಟ್ ಕೆನಡಿ ಜೂನಿಯರನ್ನು ಉದ್ದೇಶಿಸಿ ‘ಬಾಬಿ, ಬಾಬಿ’ ಎಂದು ಹೇಳಿದ್ದಾರೆ

0

ಇತ್ತೀಚೆಗೆ ಮುಕ್ತಾಯಗೊಂಡ 2024 ರ US ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆದ್ದು, US ನ 47 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ). ಈ ಹಿನ್ನೆಲೆಯಲ್ಲಿ ‘‘2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ಡೊನಾಲ್ಡ್ ಟ್ರಂಪ್ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ಟ್ರಂಪ್ ಮಾತನಾಡುತ್ತಿದ್ದಾಗ ವಿಧಾನಸಭೆಯ ಜಾಗದಲ್ಲಿ ‘ಮೋದಿ ಮೋದಿ ಮೋದಿ’ ಎಂಬ ಘೋಷಣೆಗಳಿಂದ ಪ್ರತಿಧ್ವನಿಸಿತು. ಮೋದಿ ಒಬ್ಬ ಮಹಾನ್ ವ್ಯಕ್ತಿ ಎಂದು ಟ್ರಂಪ್ ಕೂಡ ಹೇಳಿದ್ದಾರೆ” ಎಂದು ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ). ಅದು ಎಷ್ಟರಮಟ್ಟಿಗೆ ನಿಜ ಎಂದು ಈ  ಲೇಖನದ ಮೂಲಕ ನೋಡೋಣ. 

ಕ್ಲೇಮ್: 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಡೊನಾಲ್ಡ್ ಟ್ರಂಪ್ ನಂತರ ತನ್ನ ವಿಜಯೋತ್ಸವದ ದೃಶ್ಯಗಳಲ್ಲಿ ‘ಮೋದಿ ಮೋದಿ ಮೋದಿ’ ಎಂಬ ಘೋಷಣೆಗಳು ಕೇಳಿಬಂದಿದೆ. 

ಫ್ಯಾಕ್ಟ್: ಟ್ರಂಪ್ ಅವರ ವಿಜಯೋತ್ಸವ ಭಾಷಣದಲ್ಲಿ ಜನರು ‘ಮೋದಿ’ ಎಂದು ಕೂಗಲಿಲ್ಲ. ಈ ವೈರಲ್ ವೀಡಿಯೊ ಕ್ಲಿಪ್ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ 06 ನವೆಂಬರ್ 2024 ರಂದು ಫ್ಲೋರಿಡಾದ ಪಾಮ್ ಬೀಚ್ ಕನ್ವೆನ್ಷನ್ ಸೆಂಟರ್‌ನಲ್ಲಿ ಟ್ರಂಪ್ ಮಾಡಿದ ವಿಜಯ ಭಾಷಣದ ಕ್ಲಿಪಿಂಗ್ ತೋರಿಸುತ್ತದೆ. ಈ ಭಾಷಣದಲ್ಲಿ ಟ್ರಂಪ್ ಭಾರತದ ಪ್ರಧಾನಿ ಮೋದಿಯನ್ನು ಪ್ರಸ್ತಾಪಿಸಲಿಲ್ಲ. ವಾಸ್ತವವಾಗಿ, ಈ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ ಟ್ರಂಪ್ ರಾಬರ್ಟ್ ಎಫ್ ಕೆನಡಿ ಜೂನಿಯರ್ ಬಗ್ಗೆ ಮಾತನಾಡುವಾಗ,ಅಲ್ಲಿದ್ದವರು ‘ಬಾಬಿ, ಬಾಬಿ, ಬಾಬಿ’ ಎಂಬ ಕೂಗಿದ್ದಾರೆ. ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರನ್ನು ‘ಬಾಬಿ’ ಎಂದೂ ಕರೆಯುತ್ತಾರೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪು.

ಈ ವೈರಲ್ ವೀಡಿಯೊವನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ವೀಡಿಯೊದಲ್ಲಿ ನಾವು ‘PBS NEWS’ ಲೋಗೋವನ್ನು ನೋಡಬಹುದು. PBS NEWS ಅಮೇರಿಕನ್ ಸುದ್ದಿ ಸಂಸ್ಥೆಯಾಗಿದೆ. 

ಇದರ ಆಧಾರದ ಮೇಲೆ, ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿ ಇಂಟರ್ನೆಟ್ ಅನ್ನು ಹುಡುಕಿದಾಗ, ಈ ವೈರಲ್ ವೀಡಿಯೊದ ಫುಲ್ ಲೆಂಥ್ ವೀಡಿಯೊವನ್ನು ನಾವು ‘PBS NEWS’ ನ ಅಫೀಷಿಯಲ್ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಿದ್ದೇವೆ. ಈ ವೀಡಿಯೊವನ್ನು ‘PBS NEWS’ 06 ನವೆಂಬರ್ 2024 ರಂದು “WATCH LIVE: Trump hosts election night watch party in West Palm Beach, Florida” ಎಂಬ ಶೀರ್ಷಿಕೆಯಡಿಯಲ್ಲಿ ನೇರ ಪ್ರಸಾರ ಮಾಡಿದೆ. ವೀಡಿಯೊ ವಿವರಣೆಯ ಪ್ರಕಾರ, ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ 06 ನವೆಂಬರ್ 2024 ರಂದು ಫ್ಲೋರಿಡಾದ ಪಾಮ್ ಬೀಚ್ ಕನ್ವೆನ್ಷನ್ ಸೆಂಟರ್‌ನಲ್ಲಿ ಟ್ರಂಪ್ ಅವರ ವಿಜಯ ಭಾಷಣದ ಕ್ಲಿಪಿಂಗ್ ಅನ್ನು ಈ ವೀಡಿಯೊ ತೋರಿಸುತ್ತದೆ.

    ವೀಡಿಯೊವನ್ನು ಪೂರ್ತಿಯಾಗಿ ಪರಿಶೀಲಿಸಿದಾಗ ವೈರಲ್ ವೀಡಿಯೊ ಕ್ಲಿಪ್ 7:52:22 ಟೈಮ್‌ಸ್ಟ್ಯಾಂಪ್‌ನಲ್ಲಿ ಪ್ರಾರಂಭವಾಗುತ್ತದೆ ಎಂದು ತಿಳಿಸುತ್ತದೆ. ಅಲ್ಲದೆ, ಈ ಭಾಷಣದಲ್ಲಿ ಭಾರತದ ಪ್ರಧಾನಿ ಮೋದಿ ಬಗ್ಗೆ ಟ್ರಂಪ್ ಎಲ್ಲಿ ಮಾತನಾಡಿಲ್ಲ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ, ಈ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ ಟ್ರಂಪ್ ರಾಬರ್ಟ್ ಎಫ್ ಕೆನಡಿ ಜೂನಿಯರ್ ಬಗ್ಗೆ ಮಾತನಾಡುವಾಗ, ಅಲ್ಲಿದ್ದ ಜನ ‘ಬಾಬಿ, ಬಾಬಿ, ಬಾಬಿ’ ಎಂದು ಕೂಗಿದ್ದಾರೆ. ರಾಬರ್ಟ್ ಎಫ್ ಕೆನಡಿ ಜೂನಿಯರ್ ಅನ್ನು ‘ಬಾಬಿ’ (ಇಲ್ಲಿ) ಎಂದೂ ಕರೆಯುತ್ತಾರೆ. ಘೋಷಣೆಗಳ ನಡುವೆ, ಟ್ರಂಪ್ ರಾಬರ್ಟ್ ಎಫ್ ಕೆನಡಿ ಜೂನಿಯರ್ ಬಗ್ಗೆ ಮಾತನಾಡಿದ ಟ್ರಂಪ್, “ಅವರು ಒಬ್ಬ ಮಹಾನ್ ವ್ಯಕ್ತಿ ಮತ್ತು ಅವರು ನಿಜವಾಗಿಯೂ ಅದನ್ನು ಹಾಗೆಯೇ ಅರ್ಥೈಸಿಕೊಂಡಿದ್ದಾರೆ. ಅವರು ಕೆಲವು ಕೆಲಸಗಳನ್ನು ಮಾಡ ಬಯಸುತ್ತಾರೆ, ನಾನು ಅವರನ್ನು ಮುಂದೆ ಹೋಗಲು ಬಿಡುತ್ತೇವೆ (ಪ್ರೋತ್ಸಹಿಸುತ್ತೇನೆ)” (ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ) ಎಂದು ಹೇಳಿದ್ದಾರೆ. ಈ ವೈರಲ್ ವೀಡಿಯೊದಲ್ಲಿ ಕೇಳಿಬರುತ್ತಿರುವ ಘೋಷಣೆಗಳು ‘ಮೋದಿ, ಮೋದಿ’ ಅಲ್ಲ ‘ಬಾಬಿ ಬಾಬಿ’ ಎಂದು ಸ್ಪಷ್ಟವಾಗಿ ಹೇಳಬಹುದು. ಹಾಗಾಗಿ ಟ್ರಂಪ್ ರಾಬರ್ಟ್ ಎಫ್ ಕೆನಡಿ ಜೂನಿಯರ್ ಬಗ್ಗೆ ಮಾತನಾಡಿದ್ದಾರೆ ಎಂದು ತೀರ್ಮಾನಿಸಬಹುದು.

ರಾಬರ್ಟ್ ಎಫ್ ಕೆನಡಿ ಜೂನಿಯರ್ ಮೊದಲು 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ, ನಂತರ ಅವರು ಯುಎಸ್ ಅಧ್ಯಕ್ಷೀಯ ರೇಸ್‌ನಿಂದ ಹೊರಬಂದು ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದರು. ರಾಬರ್ಟ್ ಎಫ್ ಕೆನಡಿ ಜೂನಿಯರ್ ಬಗ್ಗೆ ಮಾಹಿತಿಯನ್ನು ಇಲ್ಲಿ ಕಾಣಬಹುದು.

ಕೊನೆಯದಾಗಿ ಹೇಳುವುದಾದರೆ, ಟ್ರಂಪ್ ಅವರ ವಿಜಯೋತ್ಸವದ ಭಾಷಣದಲ್ಲಿ ಜನರು ‘ಮೋದಿ’ ಘೋಷಣೆಗಳನ್ನು ಹೇಳಿದ್ದಾರೆ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ. ಇಲ್ಲಿ ನಿಜವಾಗಿಯೂ, ರಾಬರ್ಟ್ ಎಫ್ ಕೆನಡಿ ಜೂನಿಯರ್‌ ನನ್ನು ‘ಬಾಬಿ, ಬಾಬಿ’ ಎಂದು ಹೇಳಿದ್ದಾರೆ. 

Share.

Comments are closed.

scroll