Fake News - Kannada
 

ಜುಲೈ 2020 ರಲ್ಲಿ ಜಮ್ಮು ಕಾಶ್ಮೀರ್‌ನಲ್ಲಿನ ಸೋಪೋರ್‌ನಲ್ಲಿ ನಡೆದ ಓ ಉಗ್ರದಾಟಕ್ಕೆ ಸಂಬಂಧಿಸಿದ ವೀಡಿಯೊವನ್ನು ಏಪ್ರಿಲ್ 2025 ರಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಲಿಂಕ್ ಮಾಡಲಾಗಿದೆ

0

22 ಏಪ್ರಿಲ್ 2025 ರಂದು, ಶ್ರೀನಗರಕ್ಕೆ ದಕ್ಷಿಣವಾಗಿ ಸುಮಾರು 100 ಕಿ.ಮೀ. ದೂರದಲ್ಲಿರುವ ಪಹಲ್ಗಾಮ್‌ನ ಬೈಸರನ್ ವಾಲಿಯಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ 26 ಮಂದಿ ಮೃತಪಟ್ಟಿದ್ದಾರೆ (ಇಲ್ಲಿ, ಇಲ್ಲಿ). ಈ ಸಮಯದಲ್ಲಿ, “ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಅಸುನೀಗಿದ ತಂದೆಯ ಮೃತದೇಹದ ಪಕ್ಕದಲ್ಲಿಯೇ ಒಬ್ಬ ಹಿಂದೂ ಬಾಲಕ ಅಳುತ್ತಿರುವ ದೃಶ್ಯಗಳು” ಎಂಬ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. (ಇಲ್ಲಿ). ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: 22 ಏಪ್ರಿಲ್ 2025 ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಮೃತಪಟ್ಟ ತಂದೆಯ ಮೃತದೇಹದ ಪಕ್ಕದಲ್ಲಿ ಒಬ್ಬ ಹಿಂದೂ  ಬಾಲಕ ಅಳುತ್ತಿರುವ ದೃಶ್ಯ. 

ಫ್ಯಾಕ್ಟ್: ವೈರಲ್ ವೀಡಿಯೊ 22 ಏಪ್ರಿಲ್ 2025 ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರದಾಳಿಗೆ ಸಂಬಂಧವಿಲ್ಲ. ಈ ಘಟನೆ 01 ಜುಲೈ 2020 ರಂದು ಜಮ್ಮು ಕಾಶ್ಮೀರದಲ್ಲಿರುವ ಸೋಪೋರ್‌ನಲ್ಲಿ ಉಗ್ರಗಾಮಿಗಳ ಗುಂಡಿನ ದಾಳಿಯನ್ನು ತನ್ನ ಅಜ್ಜನ ಮೃತದೇಹದ ಪಕ್ಕದಲ್ಲಿ ಮೂರ್ನಾಲ್ಕು ಬಾಲಕರು ಕುಳಿತ ಸಮಯದಲ್ಲಿ ಚಿತ್ರಿಕರಿಸಲಾಗಿದ್ದು, ತದನಂತರ ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸುತ್ತಾರೆ. ನಂತರ ಅವರನ್ನು CRPF ಸಿಬ್ಬಂದಿ ಗುರುತಿಸಿ, ತಾಯಿಗೆ ಒಪ್ಪಿಸಿದ್ದಾರೆ. ಹಾಗಾಗಿ ಈ ಪೋಸ್ಟ್ ನಲ್ಲಿ ಮಾಡಿರುವ ಕ್ಲೇಮ್ ಸುಳ್ಳಾಗಿದೆ. 

ಈ ವೈರಲ್ ವೀಡಿಯೊಗೆ ಸಂಬಂಧಿಸಿದ ಮಾಹಿತಿಗಾಗಿ, ನಾವು ಈ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಜುಲೈ 01, 2020 ರಂದು ಪ್ರಕಟವಾದ ಅದೇ ದೃಶ್ಯಗಳನ್ನು ವರದಿ ಮಾಡುವ ಹಲವಾರು ಸುದ್ದಿ ಲೇಖನಗಳನ್ನು (ಇಲ್ಲಿ, ಇಲ್ಲಿ) ಕಂಡುಕೊಂಡಿದ್ದೇವೆ. ಈ ಲೇಖನಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ತನ್ನ ಅಜ್ಜನ ದೇಹದ ಪಕ್ಕದಲ್ಲಿ ಕುಳಿತಿದ್ದ ಮೂರು ವರ್ಷದ ಬಾಲಕನನ್ನು ಭದ್ರತಾ ಪಡೆಗಳು ರಕ್ಷಿಸಿವೆ. ನಂತರ ಸಿಆರ್‌ಪಿಎಫ್ ಸಿಬ್ಬಂದಿ ಬಾಲಕನನ್ನು ಗುರುತಿಸಿ ಅವನ ತಾಯಿಗೆ ಹಸ್ತಾಂತರಿಸಿದರು.

.ಜುಲೈ 01, 2020 ರಂದು, ಕಾಶ್ಮೀರ ವಲಯ ಪೊಲೀಸರ ಅಧಿಕೃತ X ಹ್ಯಾಂಡಲ್ ಸಹ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಬಾಲಕನನ್ನು ಹೊತ್ತೊಯ್ಯುತ್ತಿರುವ ಫೋಟೋದೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದೆ, ಅದು “ಸೋಪೋರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಮಯದಲ್ಲಿ ಜೆಕೆಪಿ ಮೂರು ವರ್ಷದ ಬಾಲಕನನ್ನು ಗುಂಡುಗಳಿಂದ ರಕ್ಷಿಸಿತು” ಎಂದು ಹೇಳಿದೆ.

ಈ ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಜುಲೈ 2020 ರಲ್ಲಿ ಪ್ರಕಟವಾದ ಹಲವಾರು ಸುದ್ದಿ ಲೇಖನಗಳು (ಇಲ್ಲಿ, ಇಲ್ಲಿ) ನಮಗೆ ಕಂಡುಬಂದವು. ಈ ಲೇಖನಗಳ ಪ್ರಕಾರ, ಜುಲೈ 01, 2020 ರಂದು, ಕಾಶ್ಮೀರದ ಸೋಪೋರ್‌ನಲ್ಲಿ ಮೂರು ವರ್ಷದ ಬಾಲಕನೊಬ್ಬ ತನ್ನ ಅಜ್ಜನ ಸಾವನ್ನು ನೋಡಿದ್ದಾನೆ. ಭಯೋತ್ಪಾದಕರು ಮತ್ತು ಸಿಆರ್‌ಪಿಎಫ್ ನಡುವಿನ ಗುಂಡಿನ ಚಕಮಕಿಯಲ್ಲಿ ಬಾಲಕನ ಅಜ್ಜ ಬಶೀರ್ ಅಹ್ಮದ್ ಖಾನ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸುದ್ದಿ ಲೇಖನಗಳಿಂದ, ಆ ಹುಡುಗ ಮುಸ್ಲಿಂ ಕುಟುಂಬಕ್ಕೆ ಸೇರಿದವನು ಎಂಬುದು ಸ್ಪಷ್ಟವಾಗಿದೆ. ಇದರ ಆಧಾರದ ಮೇಲೆ, ವೈರಲ್ ಕ್ಲೈಮ್‌ನಲ್ಲಿ ಬಲಿಯಾದವರನ್ನು ಮತ್ತು ಘಟನೆಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂಬುದು ನಮಗೆ ಸ್ಪಷ್ಟವಾಗಿದೆ.

ಕೊನೆಯದಾಗಿ ಹೇಳುವುದಾದರೆ, ಜುಲೈ 2020 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ತನ್ನ ಅಜ್ಜನ ದೇಹದ ಪಕ್ಕದಲ್ಲಿ ಅಳುತ್ತಿರುವ ಬಾಲಕನ ವೀಡಿಯೊವನ್ನು 2025 ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ತಪ್ಪಾಗಿ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll