ಬುರ್ಖಾ ಧರಿಸಿದ ಮಹಿಳೆಯನ್ನು ಮೂವರು ಪುರುಷರು ಅಪಹರಿಸುತ್ತಿರುವ ವೀಡಿಯೊವನ್ನು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಂಕಿತ್ ತಿವಾರಿ, ಅಭಿನವ್ ಮತ್ತು ರಾಜು ಎಂಬ ಮೂವರು ಹಿಂದೂ ಪುರುಷರು ರಾಜಸ್ಥಾನದಲ್ಲಿ ಗುಲ್ಫಿಶಾ ಎಂಬ ಮುಸ್ಲಿಂ ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಈ ಪೋಸ್ಟ್‌ನಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಾಗಾದರೆ ಈ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ರಾಜಸ್ಥಾನದಲ್ಲಿ ಮೂವರು ಹಿಂದೂ ಹುಡುಗರು ಮುಸ್ಲಿಂ ಹುಡುಗಿಯನ್ನು ಅಪಹರಿಸುವ ವಿಡಿಯೋ.
ಫ್ಯಾಕ್ಟ್: ಇದು ಬಾಂಗ್ಲಾದೇಶದ ಸ್ಕ್ರಿಪ್ಟೆಡ್ ವೀಡಿಯೊ. ರಾಜಸ್ಥಾನದಲ್ಲಿ ಇಂತಹ ಯಾವುದೇ ಘಟನೆಯು ನಡೆದಿಲ್ಲ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ಮೊದಲಿಗೆ, ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಹೆಸರುಗಳನ್ನು ಬಳಸಿಕೊಂಡು ರಾಜಸ್ಥಾನದಲ್ಲಿ ಇತ್ತೀಚೆಗೆ ಅಂತಹ ಯಾವುದೇ ಘಟನೆ ನಡೆದಿದೆಯೇ ಎಂದು ಪರಿಶೀಲಿಸಲು ನಾವು ಇಂಟರ್ನೆಟ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ, ಇದರ ಬಗ್ಗೆ ಯಾವುದೇ ವರದಿಗಳು ನಮಗೆ ಸಿಗಲಿಲ್ಲ.
ಮುಂದೆ, ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಜನವರಿ 2025 ರ ಹಿಂದೆ ಬಾಂಗ್ಲಾದೇಶಿ ಉಸೆರ್ಸ್ (ಇಲ್ಲಿ ಮತ್ತು ಇಲ್ಲಿ) ಅದೇ ದೃಶ್ಯಗಳ ಹಿಂದಿನ ಅಪ್‌ಲೋಡ್‌ಗಳನ್ನು ನಾವು ಕಂಡುಕೊಂಡಿದ್ದೇವೆ. ನಾವು ಬಾಂಗ್ಲಾದೇಶದ ಫ್ಯಾಕ್ಟ್-ಚೆಕರ್ ತೌಸಿಫ್ ಅಕ್ಬರ್ ಅವರನ್ನು ಸಂಪರ್ಕಿಸಿದ್ದೇವೆ, ಅವರು ವೀಡಿಯೊದ ಒರಿಜಿನಲ್ ಅಪ್‌ಲೋಡರ್ ಅನ್ನು ಗುರುತಿಸುವಲ್ಲಿ ನಮಗೆ ಸಹಾಯ ಮಾಡಿದರು. ಬಾಂಗ್ಲಾದೇಶದ ಗಾಜಿಪುರದಲ್ಲಿರುವ ಲಾಫಿಂಗ್ ಚಾಟ್ 2 ಎಂಬ ಫೇಸ್‌ಬುಕ್ ಪೇಜ್ ಮೂಲತಃ ವೀಡಿಯೊವನ್ನು (ಆರ್ಕೈವ್) 21 ಜನವರಿ 2025 ರಂದು ಅಪ್‌ಲೋಡ್ ಮಾಡಿದೆ. ಅದೇ ಸ್ಥಳದಲ್ಲಿ ಚಿತ್ರೀಕರಿಸಲಾದ ಮತ್ತೊಂದು ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದನ್ನು ಜನವರಿ 17, 2025 ರಂದು ಅವರ ಪೇಜ್ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಹೆಚ್ಚುವರಿಯಾಗಿ, ಫೇಸ್‌ಬುಕ್ ಪೇಜ್ ಇಂಟ್ರೋವು ಅವರ ವೀಡಿಯೊಗಳನ್ನು ಮನರಂಜನಾ ಉದ್ದೇಶಗಳಿಗಾಗಿ ರಚಿಸಲಾಗಿದ್ದು, ಅವುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದೆ. ಈ ಮೂಲಕ ಇವು ಸ್ಕ್ರಿಪ್ಟ್ ಮಾಡಿದ ವೀಡಿಯೊಗಳು ಎಂದು ಸೂಚಿಸುತ್ತದೆ.

ನಂತರ ನಾವು ಈ ಪೇಜ್ ನಲ್ಲಿರುವ ಇತರ ವೀಡಿಯೊಗಳನ್ನು ಪರಿಶೀಲಿಸಿದಾಗ ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಗಳಲ್ಲಿ ಒಬ್ಬರು ಇತರ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಇರುವುದನ್ನು ಕಾಣಬಹುದು. ನಾವು ಪೇಜ್ ಅಡ್ಮಿನ್ ಅನ್ನು ಸಂಪರ್ಕಿಸಿದಾಗ, ಅವರು ವೀಡಿಯೊ ಸ್ಕ್ರಿಪ್ಟೆಡ್ ಮತ್ತು ನಿಜವಾದ ಘಟನೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಸ್ಕ್ರಿಪ್ಟೆಡ್ ವೀಡಿಯೊವನ್ನು ರಾಜಸ್ಥಾನದಲ್ಲಿ ಹಿಂದೂಗಳು ಮುಸ್ಲಿಂ ಮಹಿಳೆಯನ್ನು ಅಪಹರಿಸಿದ ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.