ರಸ್ತೆಗಳಲ್ಲಿ ನಮಾಜ್ ಸಲ್ಲಿಸುತ್ತಿದ್ದ ಮುಸ್ಲಿಮರನ್ನು ಉತ್ತರ ಪ್ರದೇಶ ಪೊಲೀಸರು ಹೊಡೆಯುತ್ತಿದ್ದಾರೆ ಎಂದು ಹೇಳುತ್ತಾ, ಕೆಲವು ಮುಸ್ಲಿಂ ಸಮುದಾಯದ ಜನರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುವ ವಿಡಿಯೊಗಳನ್ನು ಹಲವು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಈ ಲೇಖನದ ಮೂಲಕ ಆ ವೀಡಿಯೊಗಳ ಬಗ್ಗೆ ನಿಜಾಂಶವನ್ನು ಪರಿಶೀಲಿಸೋಣ.
ಪ್ರತಿಪಾದನೆ: ರಸ್ತೆಗಳಲ್ಲಿ ನಮಾಜ್ ಮಾಡಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಮುಸ್ಲಿಮರನ್ನು ಥಳಿಸುತ್ತಿರುವ ವಿಡಿಯೊಗಳು.
ನಿಜಾಂಶ: ಈ ವಿಡಿಯೋಗಳಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡುತ್ತಿರುವುದು ರಸ್ತೆಯಲ್ಲಿ ಪ್ರಾರ್ಥನೆ ಮಾಡಿರುವುದಕ್ಕಾಗಿ ಅಲ್ಲ. ಮಿಲಾದ್-ಉನ್-ನಬಿ ಮೆರವಣಿಗೆಯ ಸಂದರ್ಭದಲ್ಲಿ ಮಧ್ಯಪ್ರದೇಶದ ಜಬಲ್‌ಪುರ ಮತ್ತು ಬರ್ವಾನಿ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಸಂಬಂಧಿಸಿದ ವಿಡಿಯೊಗಳು ಇವು. ಇದರಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿ ಹಲವರನ್ನು ಬಂಧಿಸಿದ್ದಾರೆ. ಈ ಘಟನೆಗಳನ್ನು ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು. ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ನಮಾಜ್ ಸಲ್ಲಿಸಿದ್ದಕ್ಕೆ ಪೊಲೀಸರು ಥಳಿಸಿದ ಪ್ರಕರಣಗಳು ವರದಿಯಾಗಿಲ್ಲ. ಹಾಗಾಗಿ ಪೋಸ್ಟ್ ಮೂಲಕ ಹೇಳಿರುವುದು ತಪ್ಪಾಗಿದೆ.
ಈ ವಿಡಿಯೋ ಕುರಿತು ಮಾಹಿತಿಗಾಗಿ ಹುಡುಕುತ್ತಿರುವಾಗ ನಮಗೆ ಸ್ಥಳೀಯ ಸುದ್ದಿ ಸಂಸ್ಥೆ ‘ಡಿಎನ್‌ಎನ್ ನ್ಯೂಸ್’ ನ ವರದಿಯಲ್ಲಿ ವೈರಲ್ ವಿಡಿಯೋದ ಲೊಕೇಶನ್ ಮ್ಯಾಚ್ ಆಗುವ ವಿಡಿಯೋ ಕಾಣಿಸಿಕೊಂಡಿದೆ. ಈ ಸುದ್ದಿ ವರದಿಯ ವಿಡಿಯೊವನ್ನು 19 ಅಕ್ಟೋಬರ್ 2021 ರಂದು ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೈರಲ್ ವೀಡಿಯೋದಲ್ಲಿನ ಸುದ್ದಿ ವಿಡಿಯೋ ವೈರಲ್ ದೃಶ್ಯಗಳಲ್ಲಿನ ಕೆಲವು ದೃಶ್ಯಗಳಿಗೆ ಹೋಲಿಸಿದರೆ ಈ ಎರಡು ವಿಡಿಯೊ ಒಂದೇ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ ಎಂದು ಅರ್ಥವಾಗುತ್ತದೆ.
ವಿಡಿಯೋಗೆ ಸಂಬಂಧಿಸಿದ ಮಾಹಿತಿಯ ಪ್ರಕಾರ, ವಿಡಿಯೋದಲ್ಲಿ ಕಾಣುತ್ತಿರುವುದು ಮಧ್ಯಪ್ರದೇಶದ ಜಬಲ್‌ಪುರದ ಮೀನು ಮಾರುಕಟ್ಟೆ ಪ್ರದೇಶ. ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಟಿಯರ್ ಗ್ಯಾಸ್ ಬಳಸಿದರೆಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಸುದ್ದಿ ವಿಡಿಯೋದಲ್ಲಿ ‘एस दीन टेलर्स’ (S Deen Tailors) ಹೆಸರಿನ ಅಂಗಡಿಯು ಸ್ಪಷ್ಟವಾಗಿ ಗೋಚರಿಸುತ್ತದೆ, ಅದೇ ಅಂಗಡಿಯನ್ನು ವೈರಲ್ ವಿಡಿಯೊದಲ್ಲಿಯೂ ಕಾಣಬಹುದು. ಹೀಗಾಗಿ, ಸುದ್ದಿ ವಿಡಿಯೋದಲ್ಲಿರುವ ಮಾಹಿತಿ ಆಧರಿಸಿ ಗೂಗಲ್ ಮ್ಯಾಪ್ ನಲ್ಲಿ ಹುಡುಕಾಟ ನಡೆಸಿದಾಗ ಅಂಗಡಿ ಜಬಲ್ ಪುರದಲ್ಲಿ ಇರುವುದು ಪತ್ತೆಯಾಗಿದೆ.
ಇದೇ ರೀತಿಯ ಧಾಟಿಯಲ್ಲಿ, ಮೇಲಿನ ವಿವರಗಳನ್ನು ಆಧರಿಸಿ ಕೀವರ್ಡ್‌ಗಾಗಿ ಹುಡುಕುತ್ತಿರುವಾಗ, ವೈರಲ್ ವಿಡಿಯೊದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡುವ ದೃಶ್ಯಗಳನ್ನು ವಿಭಿನ್ನ ಕೋನದಲ್ಲಿ ಚಿತ್ರೀಕರಿಸುವ ದೀರ್ಘ ವಿಡಿಯೊಗಳು ಕಂಡುಬಂದಿವೆ. ಪೋಸ್ಟ್‌ಗಳ ಪ್ರಕಾರ, ಇತ್ತೀಚೆಗೆ ಮಿಲಾದ್ ಆನ್ ನಬಿ ಸಂದರ್ಭದಲ್ಲಿ ಜಬಲ್‌ಪುರದಲ್ಲಿ ಮುಸ್ಲಿಂ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಘರ್ಷಣೆಯ ಸಮಯದಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಈ ಘಟನೆಗಳಿಗೆ ಸಂಬಂಧಿಸಿದ ಸುದ್ದಿ ಲೇಖನಗಳನ್ನು ಹುಡುಕುತ್ತಿರುವಾಗ, ಮೇಲೆ ತಿಳಿಸಲಾದ ಫೇಸ್‌ಬುಕ್ ವಿಡಿಯೊಗಳಲ್ಲಿನ ದೃಶ್ಯಗಳಂತೆಯೇ ಫೋಟೋಗಳನ್ನು ಪ್ರಕಟಿಸಿದ ಸುದ್ದಿ ಲೇಖನವು ನಮಗೆ ಸಿಕ್ಕಿತು. ಈ ವಿಡಿಯೋ ಮಧ್ಯಪ್ರದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ ಎಂಬುದನ್ನು ಈ ಲೇಖನವೂ ದೃಢಪಡಿಸುತ್ತದೆ. ಜಬಲ್ಪುರದಲ್ಲಿ ಮಿಲಾದ್-ಉನ್-ನಬಿ ಸಂದರ್ಭದಲ್ಲಿ ನಡೆದ ಮೆರವಣಿಗೆಯ ಘರ್ಷಣೆ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ.
ಅಲ್ಲದೇ ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ಉತ್ತರ ಪ್ರದೇಶ ಅಥವಾ ಬೇರೆ ಕಡೆ ಪೊಲೀಸರು ಥಳಿಸಿರುವ ಬಗ್ಗೆ ವರದಿಯಾಗಿಲ್ಲ. ಹಾಗಾಗಿ ಈ ವೈರಲ್ ವಿಡಿಯೊಗೂ, ಉತ್ತರ ಪ್ರದೇಶಕ್ಕೂ, ರಸ್ತೆಯಲ್ಲಿ ನಮಾಜ್ ನಡೆದಿದ್ದಕ್ಕೂ ಯಾವುದೇ ಸಂಬಂಧವಿಲ್ಲ.
ಈ ವಿಡಿಯೊಗೆ ಸಂಬಂಧಿಸಿದಂತೆ ಮಾಹಿತಿಗಾಗಿ ಹುಡುಕುತ್ತಿರುವಾಗ, ಅದೇ ವಿಡಿಯೊದ ದೀರ್ಘ ಆವೃತ್ತಿಯನ್ನು ಹಂಚಿಕೊಂಡಿರುವ ಫೇಸ್‌ಬುಕ್ ಪೋಸ್ಟ್ ನಮಗೆ ಕಂಡುಬಂದಿದೆ. ವಿಡಿಯೊದಲ್ಲಿನ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಈ ಪೋಸ್ಟ್ ಹೇಳುತ್ತದೆ. ಆದರೂ ಈ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಿಡಿಯೊದಲ್ಲಿ ಕೆಲವರು ‘ಭಾರತ್ ಮೆಷಿನ್ ಸ್ಟೋರ್’ ಎಂಬ ಅಂಗಡಿಗೆ ಕಾಲಿಡುತ್ತಿರುವುದನ್ನು ಕಾಣಬಹುದು.
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ರಾಜ್‌ಪುರ ಪಟ್ಟಣದಲ್ಲಿ ಅಂಗಡಿ ಇರುವುದು ಗೂಗಲ್ ಮ್ಯಾಪ್‌ನಲ್ಲಿ ಹುಡುಕಾಟ ನಡೆಸಿದಾಗ ಪತ್ತೆಯಾಗಿದೆ. ಈ ಘಟನೆ ರಾಜಪುರದಲ್ಲಿ ನಡೆದಿರುವುದು ದೃಢಪಟ್ಟಿದೆ.
ಮೇಲಿನ ವಿವರಗಳ ಆಧಾರದ ಮೇಲೆ, Google ಹುಡುಕಾಟವು ಹಲವಾರು ಸುದ್ದಿ ಲೇಖನಗಳನ್ನು ಬಹಿರಂಗಪಡಿಸಿತು ಅವುಗಳನ್ನು ಇಲ್ಲಿ ಕಾಣಬಹುದು. ಅವುಗಳಲ್ಲಿ ಇತ್ತೀಚೆಗೆ ಅಕ್ಟೋಬರ್ 19 ರಂದು ರಾಜಪುರದಲ್ಲಿ ನಡೆದ ಪೊಲೀಸ್ ಲಾಠಿ ಚಾರ್ಜ್ ಘಟನೆಯನ್ನು ವರದಿ ಮಾಡಿವೆ. ವರದಿಗಳ ಪ್ರಕಾರ, ಅಕ್ಟೋಬರ್ 19 ರಂದು ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಒಂದು ಗುಂಪು ಮೆರವಣಿಗೆ ನಡೆಸಿತ್ತು. ಡಿಜೆಯಲ್ಲಿ ವಿವಾದಾತ್ಮಕ ಹಾಡನ್ನು ಪ್ಲೇ ಮಾಡುವಾಗ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎರಡೂ ಗುಂಪುಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ದಾಳಿಯಲ್ಲಿ ಪೊಲೀಸರು ಮತ್ತು ಎರಡು ಗುಂಪುಗಳ ಜನರು ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ ಮೆರವಣಿಗೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ.
ಸ್ಥಳೀಯ ಸುದ್ದಿ ಸಂಸ್ಥೆಗಳು ಘಟನೆಯ ಕೆಲವು ದೃಶ್ಯಗಳನ್ನು ವಿಡಿಯೋ ವರದಿ ಮಾಡಿವೆ. ಅಂತಹ ಒಂದು ವಿಡಿಯೊ ವರದಿಯನ್ನು ಇಲ್ಲಿ ಕಾಣಬಹುದು. ಸುದ್ದಿ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಭಟನಾಕಾರರು ‘ಸಾರಾ ಕಂಪ್ಯೂಟರ್ಸ್’ ಎಂಬ ಅಂಗಡಿಯ ಮುಂಭಾಗದಿಂದ ಓಡುತ್ತಿರುವುದನ್ನು ನೋಡಬಹುದು.
ಗೂಗಲ್ ಮ್ಯಾಪ್‌ನಲ್ಲಿ ಈ ಅಂಗಡಿಯನ್ನು ಹುಡುಕಿದಾಗ, ಇದು ಮೇಲೆ ತಿಳಿಸಿದ ‘ಭಾರತ್ ಮೆಷಿನ್ ಸ್ಟೋರ್’ ಅಂಗಡಿಯ ಸಮೀಪದಲ್ಲಿ ಕಂಡುಬಂದಿದೆ.
ಮೇಲೆ ತಿಳಿಸಿದ ವಿಡಿಯೋ ವರದಿಯಲ್ಲಿ ‘ಭಾರತ್ ಮೆಷಿನ್ ಸ್ಟೋರ್’ ಮತ್ತು ‘ಸಾರಾ ಕಂಪ್ಯೂಟರ್ಸ್’ ಅಂಗಡಿಗಳ ನಡುವಿನ ಫ್ಲೆಕ್ಸ್ ಮತ್ತು ಕರ್ಟನ್ ನೋಡಬಹುದು. ವೈರಲ್ ವಿಡಿಯೊದ ದೀರ್ಘ ಆವೃತ್ತಿಯಲ್ಲಿ ಅದೇ ಫ್ಲೆಕ್ಸ್ ಮತ್ತು ಪರದೆಯನ್ನು ಕಾಣಬಹುದು. ಅಂದರೆ ವೈರಲ್ ವಿಡಿಯೋ ಈ ಘಟನೆಗೆ ಸಂಬಂಧಿಸಿದೆ. ಮೇಲಾಗಿ ರಾಜಪುರದ ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಬಗ್ಗೆ ಮಾಹಿತಿ ಇಲ್ಲ.
ಬರ್ವಾನಿಯಲ್ಲಿ ನಡೆದ ಈ ಘಟನೆಯ ಇನ್ನೂ ಕೆಲವು ವಿಡಿಯೊ ವರದಿಗಳನ್ನು ಇಲ್ಲಿ ಕಾಣಬಹುದು. ಆದರೆ, ಇತ್ತೀಚೆಗೆ ಮಧ್ಯಪ್ರದೇಶದ ದಾರ್, ಜಬಲ್‌ಪುರ್ ಮತ್ತು ಬರ್ವಾನಿ ಪ್ರದೇಶಗಳಲ್ಲಿ ಮಿಲಾದ್-ಉನ್-ನಬಿ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಹಲವು ಸುದ್ದಿವಾಹಿನಿಗಳು ವರದಿ ಪ್ರಕಟಿಸಿದ್ದವು. ಆದರೆ, ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕಾಗಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ಯಾವ ಲೇಖನಗಳು ವರದಿ ಮಾಡಿಲ್ಲ.
ಒಟ್ಟಾರೆ, ಈ ವಿಡಿಯೋಗಳಲ್ಲಿ ಪೊಲೀಸರು ಗಲಭೆ ಹತ್ತಿಕ್ಕಲು ಲಾಠಿಚಾರ್ಜ್ ಮಾಡುತ್ತಿದ್ದಾರೆಯೇ ಹೊರತು ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡಿದಕ್ಕಾಗಿ ಅಲ್ಲ.