Fake News - Kannada
 

ಪಿಎಂ ಮೋದಿ ಅವರು 2025 ರ ದಸರಾ-ದೀಪಾವಳಿ ಹಬ್ಬದ ಸಮಯದಲ್ಲಿ ಭಾರತೀಯ ಉತ್ಪನ್ನಗಳನ್ನು ಬಳಸುವಂತೆ ಜನರನ್ನು ಒತ್ತಾಯಿಸಿದ್ದರು; ಆದರೂ, ಅವರಿಗೆ ಸಂಬಂಧಿಸಿದ ಈ ವೈರಲ್ ಪತ್ರವು ನಕಲಿಯಾಗಿದೆ

0

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬರೆದಿದ್ದಾರೆ ಎನ್ನಲಾದ ಒಂದು ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಅದರಲ್ಲಿ 2025 ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇವಲ ಸ್ವದೇಶಿ (ಭಾರತದಲ್ಲಿ ತಯಾರಿಸಿದ) ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. ಈ ಪತ್ರವು ಪ್ರಧಾನಿ ಮೋದಿಯವರ ಸಹಿಯನ್ನು ಹೊಂದಿದೆ. ಈ ಲೇಖನದಲ್ಲಿ, ನಾವು ಅದರ ಸತ್ಯಾಸತ್ಯತೆಯನ್ನು  ಪರಿಶೀಲಿಸೋಣ.

ಕ್ಲೇಮ್: 2025ರ ದೀಪಾವಳಿ ಹಬ್ಬದ ಸಮಯದಲ್ಲಿ ಕೇವಲ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ನಾಗರಿಕರಿಗೆ ಪ್ರಧಾನಿ ಮೋದಿ ಬರೆದ ಪತ್ರ.

ಫ್ಯಾಕ್ಟ್: 2025ರ ಸೆಪ್ಟೆಂಬರ್ 28 ರಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಭಾಷಣದಲ್ಲಿ, ನವರಾತ್ರಿ, ದಸರಾ, ದೀಪಾವಳಿ, ಛತ್ ಮತ್ತು ಇತರ ಆಚರಣೆಗಳನ್ನು ಒಳಗೊಂಡಿರುವ ಮುಂಬರುವ 2025 ರ ಹಬ್ಬದ ಸಮಯದಲ್ಲಿ ಸ್ವದೇಶಿ (ಭಾರತದಲ್ಲಿ ತಯಾರಿಸಿದ) ಉತ್ಪನ್ನಗಳನ್ನು ಬಳಸುವಂತೆ ಜನರಿಗೆ ಮನವಿ ಮಾಡಿದರು. ಆದರೆ, ಅವರಿಗೆ ಸಂಬಂಧಿಸಿದ ವೈರಲ್ ಪತ್ರವು ನಕಲಿಯಾಗಿದೆ. ಇದೇ ಪತ್ರವು 2016 ರಿಂದಲೂ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. 2016 ರಲ್ಲಿ, ಪ್ರಧಾನ ಮಂತ್ರಿ ಕಚೇರಿಯ (PMO) ಅಧಿಕೃತ X (ಹಿಂದಿನ ಟ್ವಿಟರ್) ಹ್ಯಾಂಡಲ್, ಪ್ರಧಾನ ಮಂತ್ರಿಯವರ ಸಹಿ ಇರುವ ಕೆಲವು ಅಧಿಕೃತವಲ್ಲದ ದಾಖಲೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿತ್ತು. ಆದ್ದರಿಂದ ಪೋಸ್ಟ್‌ನಲ್ಲಿನ ಈ ಕ್ಲೇಮ್ ದಾರಿತಪ್ಪಿಸುವಂತಿದೆ.

ಇದೇ ಪತ್ರವು ಕನಿಷ್ಠ 2016 ರಿಂದಲೂ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ ಎಂಬುದನ್ನು ಗಮನಿಸಬೇಕು. ಇದು 2021 ರ ದೀಪಾವಳಿಗೆ ಮುಂಚೆ ವೈರಲ್ ಆದಾಗ, ‘Factly’ ಸಂಸ್ಥೆಯು ಇದರ ಬಗ್ಗೆ ಪಾರ್ಕ್ ಚೆಕ್ ಆರ್ಟಿಕಲ್ ಪ್ರಕಟಿಸಿತ್ತು. ಹಿಂದಕ್ಕೆ, ಆಗಸ್ಟ್ 2016 ರಲ್ಲಿ, ಪ್ರಧಾನ ಮಂತ್ರಿಗಳ ಕಾರ್ಯಾಲಯ (PMO), X (ಹಿಂದಿನ ಟ್ವಿಟರ್) ನಲ್ಲಿನ ಪೋಸ್ಟ್ ಮೂಲಕ, ಚಲಾವಣೆಯಲ್ಲಿರುವಂತೆಯೇ ಪ್ರಧಾನಿ ಮೋದಿಯವರ ಸಹಿಯನ್ನು ಹೊಂದಿರುವ ಕೆಲವು ಅಧಿಕೃತವಲ್ಲದ ದಾಖಲೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತ್ತು. PMO ನ X ಪೋಸ್ಟ್‌ನಲ್ಲಿರುವ ಪತ್ರದ ಪಠ್ಯವು ಮಸುಕಾಗಿದ್ದರೂ, ವೈರಲ್ ಪತ್ರದಲ್ಲಿನ ಪಠ್ಯವು ಅದರ ವಿನ್ಯಾಸಕ್ಕೆ ಹೋಲುತ್ತದೆ. ಉದಾಹರಣೆಗೆ, PMO ಟ್ವೀಟ್‌ನಲ್ಲಿನ ಮಸುಕಾದ ಪತ್ರ ಮತ್ತು ವೈರಲ್ ಪತ್ರ ಎರಡರ ಮೊದಲ ಸಾಲಿನಲ್ಲಿ ನಾಲ್ಕು ಪದಗಳಿದ್ದರೆ, ಎರಡರ ಐದನೇ ಸಾಲಿನಲ್ಲಿ ಎಂಟು ಪದಗಳಿವೆ. ಹೆಚ್ಚುವರಿಯಾಗಿ, “ವಂದೇ ಮಾತರಂ” ಮತ್ತು ನರೇಂದ್ರ ಮೋದಿಯವರ ಸಹಿಯ ವಿನ್ಯಾಸವು ಒಂದೇ ರೀತಿ ಇದೆ. ಇದರಿಂದ, ವೈರಲ್ ಪತ್ರವು ನಕಲಿ ಎಂಬುದು ಸ್ಪಷ್ಟವಾಗುತ್ತದೆ.

ಆದರೆ, 2025 ರ ಸೆಪ್ಟೆಂಬರ್ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ‘ಮನ್ ಕಿ ಬಾತ್’ ಭಾಷಣದಲ್ಲಿ, ನವರಾತ್ರಿ, ದಸರಾ, ದೀಪಾವಳಿ, ಛತ್ ಮತ್ತು ಇತರ ಆಚರಣೆಗಳನ್ನು ಒಳಗೊಂಡಿರುವ ಮುಂಬರುವ 2025 ರ ಹಬ್ಬದ ಸಮಯದಲ್ಲಿ ಸ್ವದೇಶಿ (ಭಾರತದಲ್ಲಿ ತಯಾರಿಸಿದ) ಉತ್ಪನ್ನಗಳನ್ನು ಬಳಸುವಂತೆ ಜನರಿಗೆ ಮನವಿ ಮಾಡಿದರು (ಇಲ್ಲಿ, ಇಲ್ಲಿ, ಮತ್ತು ಇಲ್ಲಿ). ಪ್ರಧಾನಿ ಮೋದಿ ಅವರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಳಸುವಂತೆ ನಾಗರಿಕರಿಗೆ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ಕೊನೆಯದಾಗಿ ಹೇಳುವುದಾದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2025 ರ ದಸರಾ–ದೀಪಾವಳಿ ಹಬ್ಬದ ಅವಧಿಯಲ್ಲಿ ಸ್ವದೇಶಿ ಉತ್ಪನ್ನಗಳನ್ನು ಬಳಸಲು ಭಾರತೀಯರಿಗೆ ಮನವಿ ಮಾಡಿದ್ದು ನಿಜ; ಆದರೆ, ಅವರಿಗೆ ಆರೋಪಿಸಲಾದ ಈ ವೈರಲ್ ಪತ್ರವು ನಕಲಿಯಾಗಿದೆ.

Share.

Comments are closed.

scroll