Fake News - Kannada
 

ಹಿಜ್ಬುಲ್ಲಾ ನಾಯಕರನ್ನು ಕೊಂದ ನೆತನ್ಯಾಹುವನ್ನು ಅಭಿನಂದಿಸುತ್ತಿರುವ ಸೌದಿ ಶೇಖ್ ಎಂದು ತಪ್ಪಾಗಿ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ

0

ಯಾಹ್ಯಾ ಸಿನ್ವಾರ್, ಹಮಾಸ್ ನಾಯಕನ ಸಾವಿನ ಹಿನ್ನೆಲೆಯಲ್ಲಿ, ಇಸ್ರೇಲ್ ಪ್ರಧಾನಿ, ಅರಬ್‌ನೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೆಜ್ಬುಲ್ಲಾ ಭಯೋತ್ಪಾದಕರನ್ನು ಕೊಂದಿದ್ದಕ್ಕಾಗಿ ಸೌದಿ ಶೇಖ್, ಅವರನ್ನು ವೀಡಿಯೊ ಕರೆ ಮೂಲಕ ಅಭಿನಂದಿಸಿದ್ದಾರೆ ಎಂದು ಜನರು ಈ ವಿಡಿಯೋದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಈ ಹೇಳಿಕೆಯ ಹಿಂದಿನ ಸತ್ಯವನ್ನು ಪರಿಶೀಲಿಸೋಣ.

ಕ್ಲೇಮ್: ಹೆಜ್ಬುಲ್ಲಾ ನಾಯಕನನ್ನು ಕೊಂದಿದ್ದಕ್ಕಾಗಿ ಸೌದಿ ಶೇಖ್ ವೀಡಿಯೊ ಕಾಲ್ ಮೂಲಕ ನೆತನ್ಯಾಹುವನ್ನು ಅಭಿನಂದಿಸುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: 2019 ರ ವೀಡಿಯೊ ಇದಾಗಿದ್ದು, ಬೆಂಜಮಿನ್ ನೆತನ್ಯಾಹು ಮತ್ತು ಸೌದಿ ಬ್ಲಾಗರ್ ಮೊಹಮ್ಮದ್ ಸೌದ್ ನಡುವಿನ ಸಂಭಾಷಣೆಯಾಗಿದೆ.  ಲಿಕುಡ್ ಪಕ್ಷದ ನಾಯಕತ್ವದ ಚುನಾವಣೆಯ ಸಮಯದಲ್ಲಿ ನೆತನ್ಯಾಹುಗೆ ಬೆಂಬಲವನ್ನು ಇಲ್ಲಿ ಚರ್ಚಿಸಲಾಗಿದೆ. ಇದಕ್ಕೂ ಇತ್ತೀಚಿನ ಇಸ್ರೇಲಿ ದಾಳಿಗೆ ಹಿಜ್ಬೊಲ್ಲಾಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೀಡಿಯೊದಲ್ಲಿನ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ನಾವು ಮೂಲ ವರ್ಷನ್ ಅನ್ನು ಪತ್ತೆಹಚ್ಚಿದ್ದು, ಅದು ಈ ವಿಡಿಯೋ 2019 ರದ್ದು ಎಂದು ತಿಳಿಸಿದೆ. ಅಲ್ ಮಯದೀನ್ ಮತ್ತು TRT ಅರೇಬಿಕ್ ಸುದ್ದಿ ಮಾಧ್ಯಮಗಳು ಈ ವೀಡಿಯೊವನ್ನು 27 ಡಿಸೆಂಬರ್ 2019 ರಂದು : “ಸೌದಿ ಬ್ಲಾಗರ್ ಮೊಹಮ್ಮದ್ ಸೌದ್ ಲಿಕುಡ್ ಪಕ್ಷದ ಮತದಾನ ಪ್ರಕ್ರಿಯೆಯಲ್ಲಿ ರಿಯಾದ್‌ನಿಂದ ನೆತನ್ಯಾಹುಗೆ ಬೆಂಬಲವನ್ನು ನೀಡಲು ಕರೆಡಿದ್ದು, ಅವರು ನೆತನ್ಯಾಹುಗೆ ವೋಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ” ಎನ್ನುವ ಕ್ಯಾಪ್ಶನ್ನೊಂದಿಗೆ ತಮ್ಮ ಅಫೀಷಿಯಲ್ ಯುಟ್ಯೂಬ್ ಚಾನಲ್‌ಗಳಿಗೆ ಅಪ್‌ಲೋಡ್ ಮಾಡಿದ್ದಾರೆ. 

ಡಿಸೆಂಬರ್ 2019 ರ ಲಿಕುಡ್ ಪಕ್ಷದ ನಾಯಕತ್ವದ ಚುನಾವಣೆಯ ಸಮಯದಲ್ಲಿ ನಡೆದ  ಕರೆಯಲ್ಲಿ ಸೌದಿ ಬ್ಲಾಗರ್ ಮೊಹಮ್ಮದ್ ಸೌದ್ ನೆತನ್ಯಾಹು ಅವರೊಂದಿಗೆ ಮಾತನಾಡುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೆಚ್ಚಿನ ಸಂಶೋಧನೆಯು ದೃಢಪಡಿಸಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಸೌದ್ ಅವರು ಪ್ರಧಾನ ಮಂತ್ರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು, ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ತಮ್ಮ ಭರವಸೆಯನ್ನು ಒತ್ತಿ ಹೇಳಿದರು. ಜೆರುಸಲೆಮ್‌ನಲ್ಲಿ ಹಗೆತನವನ್ನು ಎದುರಿಸುತ್ತಿದ್ದರೂ, ಸೌದ್ ಇಸ್ರೇಲ್‌ನ ಧ್ವನಿಯ ಬೆಂಬಲಿಗರಾಗಿ, ಎರಡು ರಾಷ್ಟ್ರಗಳ ನಡುವೆ ನಿಕಟ ಸಂಬಂಧಗಳನ್ನು ಉತ್ತೇಜಿಸಿದರು.

ಸುದ್ದಿ ವರದಿಗಳ ಪ್ರಕಾರ, ಮೊಹಮ್ಮದ್ ಸೌದ್ ಅವರು ನೆತನ್ಯಾಹು ಅವರೊಂದಿಗಿನ ವೀಡಿಯೊ ಕರೆ ಕುರಿತು ಟ್ವೀಟ್ ಮಾಡಿದ್ದಾರೆ. ಆದರೆ  ಅವರ ಒರಿಜಿನಲ್ ಅಕೌಂಟ್ ಲಿಂಕ್ ಅನ್ನು ಸ್ಥಗಿತಗೊಳಿಸಿರುವುದರಿಂದ ಅದು ಕಾರ್ಯನಿರ್ವಹಿಸುತ್ತಿಲ್ಲ; ಅವರ ಹೊಸ ಖಾತೆಯನ್ನು ಇಲ್ಲಿ ಕಾಣಬಹುದು.

ಈ ಟ್ವೀಟ್‌ನ ಆರ್ಕೈವ್ ಮಾಡಿದ ವರ್ಷನ್ ಇಲ್ಲಿದೆ. ಇದರಲ್ಲಿ ಸೌದ್ ವೀಡಿಯೊವನ್ನು ಪೋಸ್ಟ್ ಮಾಡಿ ನೆತನ್ಯಾಹು ತನ್ನನ್ನು ಕರೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ನೆತನ್ಯಾಹು ಮಧ್ಯಪ್ರಾಚ್ಯ ದೇಶಗಳಲ್ಲಿ ಶಾಂತಿಯನ್ನು ತರುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಇನ್ನು ಹೆಚ್ಚಾಗಿ ನಾವು  ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನ ಹುಡುಕಾಡಿದಾಗ ಅದು ಸೌದಿ ಅರೇಬಿಯಾದ ರಾಜ ಅಥವಾ ಯಾವುದೇ ಇತರ ಅಧಿಕಾರಿಗಳು ಇತ್ತೀಚೆಗೆ ಇಸ್ರೇಲ್‌ನ ಪ್ರಧಾನಿ ನೆತನ್ಯಾಹು ಅವರೊಂದಿಗೆ ವೀಡಿಯೊ ಕರೆಯನ್ನು ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಸೌದಿ ಬ್ಲಾಗರ್ ಮೊಹಮ್ಮದ್ ಸೌದ್ ಅವರೊಂದಿಗಿನ ನೆತನ್ಯಾಹು ಅವರ ಕರೆಯ 2019 ರ ವೀಡಿಯೊವನ್ನು ಹೆಜ್ಬೊಲ್ಲಾ ನಾಯಕನನ್ನು ಕೊಂದ ನೆತನ್ಯಾಹು ಅವರನ್ನು ಅಭಿನಂದಿಸುತ್ತಿರುವ ಸೌದಿ ಶೇಖ್ ಅವರ ಇತ್ತೀಚಿನ ಕಾಲ್ ಕ್ಲಿಪಿಂಗ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll