Fake News - Kannada
 

ಮೆಟಾ AI ವಾಟ್ಸಾಪ್ ಗುಂಪುಗಳಲ್ಲಿನ ಸಂದೇಶಗಳ ಎಕ್ಸ್ಸ್ ಪಡೆದಿಲ್ಲ ; ಈ ಕ್ಲೇಮ್ ಸುಳ್ಳು

0

ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಇತ್ತೀಚಿನ ಸೆಟ್ಟಿಂಗ್‌ನಿಂದಾಗಿ, ಮೆಟಾ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಎಲ್ಲಾ ವಾಟ್ಸಾಪ್ ಗ್ರೂಪ್ ಚಾಟ್‌ಗಳನ್ನು ಓದುತ್ತಿದೆ ಮತ್ತು ಅದನ್ನು ತಪ್ಪಿಸಲು, ಅಡ್ವಾನ್ಸ್ ಚಾಟ್ ಪ್ರೈವಸಿ ಎಂಬ ಸೆಟ್ಟಿಂಗ್ ಅನ್ನು ಆನ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಈ ವೀಡಿಯೊದಲ್ಲಿ, ಅಡ್ವಾನ್ಸ್ ಚಾಟ್ ಪ್ರೈವಸಿಯನ್ನು ಆನ್ ಮಾಡುವ ಮೂಲಕ, ಮೆಟಾ ಎಐ ವಾಟ್ಸಾಪ್ ಚಾಟ್‌ಗಳನ್ನು ಓದುವುದನ್ನು ತಡೆಯಬಹುದು ಎಂದು ಆ  ವ್ಯಕ್ತಿ ತಿಳಿಸಿದ್ದಾನೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಅಡ್ವಾನ್ಸ್ ಚಾಟ್ ಪ್ರೈವಸಿ ಸೆಟ್ಟಿಂಗ್ ಅನ್ನು ಆನ್ ಮಾಡದಿದ್ದರೆ ಮೆಟಾ AI WhatsApp ಗ್ರೂಪ್ ಚಾಟ್‌ಗಳನ್ನು ಪ್ರವೇಶಿಸಬಹುದು (ಓದಬಹುದು).

ಫ್ಯಾಕ್ಟ್: ಮೆಟಾ AI @Meta AI ಅನ್ನು ನಮೂದಿಸುವ ಮೂಲಕ ಹಂಚಿಕೊಂಡ ವಾಟ್ಸಪ್ಪ್ ಸಂದೇಶಗಳನ್ನು ಮಾತ್ರ ಪ್ರವೇಶಿಸಬಹುದು ಹೊರತು  ಸಂಪೂರ್ಣ ಗ್ರೂಪ್ ಚಾಟ್‌ಗಳನ್ನು ಅಲ್ಲ. ವಾಟ್ಸಪ್ಪ್ ನಲ್ಲಿರುವ ಎಲ್ಲಾ ವೈಯಕ್ತಿಕ ಮತ್ತು ಗುಂಪು ಸಂದೇಶಗಳನ್ನು ಎಂಡ್ ಟು ಎಂಡ್  ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸಲಾಗಿದೆ.  ಅಂದರೆ ನೀವು ಮತ್ತು ನೀವು ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಹೊರತುಪಡಿಸಿ ಯಾರೂ ಈ ಸಂದೇಶಗಳನ್ನು ಓದಲು ಸಾಧ್ಯವಿಲ್ಲ. ಅಡ್ವಾನ್ಸ್  ಚಾಟ್ ಪ್ರೈವಸಿ ವೈಶಿಷ್ಟ್ಯವು ಇತರರು ನಿಮ್ಮ ಸಂದೇಶಗಳನ್ನು ಬಳಸುವುದನ್ನು, ಚಾಟ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ಅಥವಾ ಮೆಟಾ AI ನೊಂದಿಗೆ ಮಾಧ್ಯಮವನ್ನು ಸೆಲ್ಫ್ -ಡೌನ್‌ಲೋಡ್ ಮಾಡುವುದನ್ನು ತಡೆಯುತ್ತದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್  ಸುಳ್ಳು.

ಮೆಟಾ AI ಅನ್ನು ಏಪ್ರಿಲ್ 2025 ರಲ್ಲಿ ಮೆಟಾ ವಾಟ್ಸಾಪ್‌ಗೆ ಪರಿಚಯಿಸಿತು. ಈ ಓಪ್ಟಿನಲ್ ಸೇವೆಯು ಮೆಟಾ ಅಭಿವೃದ್ಧಿಪಡಿಸಿದ ಜನರೇಟಿವ್ AI ತಂತ್ರಜ್ಞಾನವನ್ನು ಬಳಸುತ್ತದೆ. ಇದನ್ನು ಬಳಸಿಕೊಂಡು, ಬಳಕೆದಾರರು ಮೆಟಾ AI ನೊಂದಿಗೆ ನೇರವಾಗಿ ಚಾಟ್ ಮಾಡಬಹುದು ಅಥವಾ ಗುಂಪು ಚಾಟ್‌ಗಳಲ್ಲಿ ಚಾಟ್ ಮಾಡಲು ಸಹ ಇದನ್ನು ಬಳಸಬಹುದು. ಬಳಕೆದಾರರು ಪ್ರಶ್ನೆಗಳನ್ನು ಕೇಳಲು, ಸಲಹೆಗಳನ್ನು ಪಡೆಯಲು ಮತ್ತು AI-ರಚಿತ ಚಿತ್ರಗಳನ್ನು ರಚಿಸಲು ಮೆಟಾ AI ಅನ್ನು ಬಳಸಬಹುದು. ಮೆಟಾ AI ಬಳಕೆದಾರರು ಕಳುಹಿಸಿದ ಪ್ರಾಂಪ್ಟ್‌ಗಳು ಮತ್ತು ಸಂದೇಶಗಳ ಆಧಾರದ ಮೇಲೆ ಪ್ರತಿಕ್ರಿಯೆಗಳನ್ನು ನೀಡುತ್ತದೆ. ಬಳಕೆದಾರರು ಮೆಟಾ AI ಅನ್ನು ಬಳಸಿದಾಗ, ಪ್ರತ್ಯುತ್ತರಿಸಲು ನಾವು ಬರೆಯುವ ಪ್ರಾಂಪ್ಟ್‌ಗಳು, ಸಂದೇಶಗಳು ಮತ್ತು ಪ್ರತಿಕ್ರಿಯೆಯನ್ನು ಮೆಟಾ ಸ್ವೀಕರಿಸುತ್ತದೆ.

ವಾಟ್ಸಾಪ್ ಸಹಾಯ ಕೇಂದ್ರದಲ್ಲಿನ ಮಾಹಿತಿಯ ಪ್ರಕಾರ, ಮೆಟಾ AI ಕಳುಹಿಸಿದ ಪ್ರತಿಕ್ರಿಯೆಗಳನ್ನು ಬಳಕೆದಾರರು ಮೆಟಾ AI ಗೆ ನೀಡಿದ ಪ್ರಾಂಪ್ಟ್‌ಗಳ ಆಧಾರದ ಮೇಲೆ ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗುತ್ತದೆ. @Meta AI ಅನ್ನು ಉಲ್ಲೇಖಿಸುವ ಅಥವಾ ನಾವು ಉದ್ದೇಶಪೂರ್ವಕವಾಗಿ ಅದಕ್ಕೆ ಕಳುಹಿಸಿದ ಸಂದೇಶಗಳನ್ನು ಮಾತ್ರ ಮೆಟಾ ಪ್ರವೇಶಿಸಬಹುದು, ಆದರೆ ಇತರ ವಿಷಯವನ್ನು ಅಲ್ಲ. ಇದು ಸಂಪೂರ್ಣ ಗುಂಪು ಚಾಟ್‌ಗಳನ್ನು ಪ್ರವೇಶಿಸಲಿಲ್ಲ.

WhatsApp ನಲ್ಲಿನ ವೈಯಕ್ತಿಕ ಸಂದೇಶಗಳು ಮತ್ತು ಕರೆಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸಲಾಗಿದೆ.  ಅಂದರೆ ಚಾಟ್‌ನ ಹೊರಗಿನ ಯಾರೂ ಅವುಗಳನ್ನು ಓದಲು ಸಾಧ್ಯವಿಲ್ಲ. WhatsApp ಅಥವಾ Meta ಅವುಗಳನ್ನು ಓದಲು, ಕೇಳಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ.

ಅಡ್ವಾನ್ಸ್  ಚಾಟ್ ಪ್ರೈವಸಿ  ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ, ಇದು ವೈಯಕ್ತಿಕ ಮತ್ತು ಗುಂಪು ಚಾಟ್‌ಗಳಿಗೆ ಹೊಸ ಸೆಟ್ಟಿಂಗ್ ಆಗಿದೆ. ಈ ಸೆಟ್ಟಿಂಗ್ ಅನ್ನು ಆನ್ ಮಾಡುವ ಮೂಲಕ, ನಿಮ್ಮ ಸಂದೇಶಗಳನ್ನು ಓದಲು, ಚಾಟ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ಸೆಲ್ಫ್ -ಡೌನ್‌ಲೋಡ್ ಮಾಧ್ಯಮವನ್ನು ಇತರರು ಮೆಟಾ AI ಬಳಸುವುದನ್ನು ನೀವು ತಡೆಯಬಹುದು. ವೈರಲ್ ಪೋಸ್ಟ್ ಸೂಚಿಸುವಂತೆ, ಮೆಟಾ AI ನಿಮ್ಮ ಗುಂಪು ಚಾಟ್‌ಗಳನ್ನು ಎಲ್ಲರೂ ಓದುವುದನ್ನು ತಡೆಯುವ ವೈಶಿಷ್ಟ್ಯವಲ್ಲ.

ಹೆಚ್ಚುವರಿಯಾಗಿ, ವಾಟ್ಸಾಪ್ ತನ್ನ ಅಫೀಷಿಯಲ್  ‘X’ ಖಾತೆಯ ಮೂಲಕ ಈ ಹೇಳಿಕೆಯನ್ನು ನೀಡುವ ‘X’ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಇದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಮೆಟಾ AI ಬಳಕೆದಾರರು ಅದರೊಂದಿಗೆ ಹಂಚಿಕೊಳ್ಳಲು ಆಯ್ಕೆ ಮಾಡಿದ ಸಂದೇಶಗಳನ್ನು ಮಾತ್ರ ಓದಬಹುದು ಎಂದು 19 ಆಗಸ್ಟ್ 2025 ರಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ದುರುದ್ದೇಶಪೂರಿತ ಬ್ರೌಸರ್ ವಿಸ್ತರಣೆಯನ್ನು ಸ್ಥಾಪಿಸಿದ್ದರೆ, ಅದು WhatsApp ವೆಬ್ ಡೇಟಾವನ್ನು ಸ್ಕ್ರ್ಯಾಪ್ ಮಾಡುತ್ತಿರಬಹುದು. ಆದರೆ, ಇದು Meta AI ವೈಶಿಷ್ಟ್ಯ ಅಥವಾ ಅಡ್ವಾನ್ಸ್ ಚಾಟ್ ಪ್ರೈವಸಿ ವೈಶಿಷ್ಟ್ಯಕ್ಕೆ ಸಂಬಂಧಿಸಿಲ್ಲ.

ಕೊನೆಯದಾಗಿ ಹೇಳುವುದಾದರೆ,  Meta AI ನಿಮ್ಮ WhatsApp ಗುಂಪುಗಳಲ್ಲಿ ಸಂದೇಶಗಳನ್ನು ಪ್ರವೇಶಿಸುವುದಿಲ್ಲ; ಈ ಕ್ಲೇಮ್ ಸುಳ್ಳು. 

Share.

Comments are closed.

scroll