ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಲಿಕಾಪ್ಟರ್ನಿಂದ ಇಳಿದು ಪ್ರಜೆಗಳಿಗೆ ಕೈ ಬೀಸುತ್ತಿರುವ ವಿಡಿಯೋವನ್ನು ಷೇರ್ ಮಾಡುತ್ತಾ, ಜನರೇ ಇಲ್ಲದ ಖಾಲಿ ಮೈದಾನಕ್ಕೆ ಮೋದಿ ಕೈ ಬೀಸುತ್ತಾ ಶುಭಾಶಯ ಕೋರುತ್ತಿದ್ದಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಷೇರ್ ಆಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಜನರೇ ಇಲ್ಲದ ಖಾಲಿ ಮೈದಾನಕ್ಕೆ ಕೈ ಬೀಸುತ್ತಾ ಮೋದಿ ಶುಭಾಶಯ ಕೋರುತ್ತಿರುವ ವಿಡಿಯೋ.
ನಿಜಾಂಶ: ಈ ವಿಡಿಯೋ ಪ್ರಧಾನಿ ಮೋದಿ ಪಶ್ಚಿಮ ಬಂಗಾಳದ ಜಯನಗರ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾಗಿದೆ. ಬಿಜೆಪಿ ತಮ್ಮ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಈ ಪ್ರಚಾರಕ್ಕೆ ಸಂಬಂಧಿದಿದ ಲೈವ್ ಸ್ಟ್ರೀಮಿಂಗ್ ಮಾಡಿದೆ. ಆದರೆ ಈ ವಿಡಿಯೋದಲ್ಲಿ ಮೋದಿ ದೊಡ್ಡ ಸಂಖೈಯಲ್ಲಿ ಬಂದ ಜನರಿಗೆ ಶುಭಾಶಯ ಕೋರುತ್ತಿರುವುದನ್ನು ಸ್ಪಷ್ಟವಾಗಿ ನೋಡಬಹುದು. ಅಲ್ಲದೇ ಈ ವಿಡಿಯೋದಲ್ಲಿ ಜನರ ಕೂಗಾಟವನ್ನು ಸಹ ಕೇಳಬಹುದು. ಆದ್ದರಿಂದ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ಈ ವಿಡಿಯೋ ಬಗೆಗಿನ ಮತ್ತಷ್ಟು ಮಾಹಿತಿಗಾಗಿ ಗೂಗಲ್ನಲ್ಲಿ ಹುಡುಕಿದಾಗ , ಬಿಜೆಪಿ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಬಂಗಾಳದಲ್ಲಿನ ಜಯನಗರದಲ್ಲಿನ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಷೇರ್ ಮಾಡಿದೆ. ಈ ವಿಡಿಯೋದಲ್ಲಿ ಮತ್ತು ಮೇಲಿನ ಪೋಸ್ಟ್ನಲ್ಲಿ ಇರುವ ವಿಡಿಯೋದಲ್ಲಿ ಒಂದೇ ದೃಶ್ಯ ಇರುವುದನ್ನು ನೋಡಬಹುದು. ಇದರಿಂದ ಪೋಸ್ಟ್ನಲ್ಲಿನ ವಿಡಿಯೋವು ಬಿಜೆಪಿ ತಮ್ಮ ಪೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡ ವಿಡಿಯೋನಿಂದ ತೆಗೆದುಕೊಂಡದ್ದು ಎಂದು ಅರ್ಥ ಮಾಡಿಕೊಳ್ಳಬಹುದು. ಆದರೆ ಬಿಜೆಪಿ ವಿಡಿಯೋದಲ್ಲಿ ಮೋದಿ ದೊಡ್ಡ ಸಂಖ್ಯೆಯಲ್ಲಿ ಬಂದ ಜನರಿಗೆ ಶುಭಾಶಯ ಕೋರುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ, ಅಲ್ಲದೆ ವಿಡಿಯೋದಲ್ಲಿ ಜನರ ಕೂಗಾಟವನ್ನೂ ಸಹ ಕೇಳಬಹುದು.
ಇದೆ ವಿಡಿಯೋವನ್ನು ಹಲವು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಷೇರ್ ಮಾಡಿದ್ದಾರೆ. ಆದರೆ ಈ ವಿಡಿಯೋದಲ್ಲಿಯೂ ಸಹ ಜನರು ಮತ್ತು ಅವರು ಕೂಗುವುದನ್ನು ಸ್ಪಷ್ಟವಾಗಿ ಗಮನಿಸಬಹುದು. ಇದರಿಂದ, ಬಿಜೆಪಿ ಶೇರ್ ಮಾಡಿದ ಮೋದಿ ಪ್ರಚಾರದ ವಿಡಿಯೋವನ್ನು ಜನರು ಕಾಣಿಸದ ಹಾಗೆ ಜನರ ಕೂಗು ಕೇಳಿಸದ ಹಾಗೆ ಡಿಜಿಟಲ್ ಎಡಿಟ್ ಮಾಡಿದ್ದಾರೆಂದು ಅರ್ಥ ಮಾಡಿಕೊಳ್ಳಬಹುದು.
ಪ್ರಸ್ತುತ ಪಶ್ಚಿಮ ಬಂಗಾಳ ಸಹಿತ ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ದಾರಿ ತಪ್ಪಿಸುವಂತಹ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿದ ವಿಡಿಯೋವನ್ನು ಡಿಜಿಟಲ್ ಎಡಿಟ್ ಮಾಡಿ ಪ್ರಧಾನಮಂತ್ರಿ ಮೋದಿ ಖಾಲಿ ಮೈದಾನಕ್ಕೆ ಶುಭಾಶಯ ಕೋರುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.