Fake News - Kannada
 

ಎಡಿಟ್ ಮಾಡಿದ ವಿಡಿಯೋವನ್ನು ಹಾಕಿ, ‘ಮೂರು ಕಣ್ಣಿರುವ ಮಗು ಜನನ’ ಎಂದು ತಪ್ಪಾಗಿ ಶೇರ್ ಮಾಡುತ್ತಿದ್ದಾರೆ

0

ವಿದೇಶದಲ್ಲಿ ಮೂರು ಕಣ್ಣು ಇರುವ ಮಗು ಹುಟ್ಟಿದೆ ಎಂಬ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾಗುತ್ತಿದೆ. ಇದು ಎಷ್ಟು ಸತ್ಯ ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಮೂರು ಕಣ್ಣಿನ ಮಗು ಜನಿಸಿದ ವಿಡಿಯೋ

ನಿಜಾಂಶ: ಅದೊಂದು ಎಡಿಟ್ ಮಾಡಿದ ವಿಡಿಯೋ. ಎಡಿಟಿಂಗ್ ಸಾಪ್ಟ್ ವೇರ್ ಸಹಾಯದಿಂದ ಎಡ ಕಣ್ಣನ್ನು ನಕಲು ಮಾಡಿ, ಮೂರನೇ ಕಣ್ಣಿನ ಹಾಗೆ ಹಣೆಯ ಮೇಲೆ ಅಂಟಿಸಿದ್ದಾರೆ. ಆದ್ದರಿಂದ ಈ ಪೋಸ್ಟ್ ನಲ್ಲಿ ಪ್ರತಿಪಾದಿಸಿರುವುದು ತಪ್ಪು.

ವಿಡಿಯೋದಲ್ಲಿನ ಮಗುವಿನ ಬಗ್ಗೆ ಹುಡುಕಿದಾಗ, ಆ ಮಗುವು ಆ ರೀತಿ ಮೂರು ಕಣ್ಣಿನ ಜೊತೆಗೆ ಹುಟ್ಟಿರುವ ಬಗ್ಗೆ ಎಲ್ಲಿಯೂ ಸುದ್ದಿ ಸಿಗಲಿಲ್ಲ. ನಿಜವಾಗಲೂ, ಹಾಗೆ ಒಂದು ಮಗು ಇದ್ದಿದ್ದರೆ, ಆ ರೀತಿಯ ಮೂರು ಕಣ್ಣು ತೋರಿಸುತ್ತಿರುವ ಮುಗುವಿನ ವಿಡಿಯೋಗಳು ಬಹಳ ಇರುತ್ತಿದ್ದವು. ಅಷ್ಟೇ ಅಲ್ಲ, ವಿಡಿಯೋದಲ್ಲಿನ ಮಗುವಿನ ಕಣ್ಣುಗಳನ್ನು ಸರಿಯಾಗಿ ಗಮನಿಸಿದರೆ, ಎಡಗಡೆಯ ಕಣ್ಣು ಮತ್ತು ಹಣೆಯ ಮೇಲೆ  ಇರುವ ಕಣ್ಣು ಪ್ರತಿ ಪ್ರೇಮ್ ನಲ್ಲಿಯೂ ಒಂದೇ ರೀತಿ ಇರುವ ಹಾಗೆ ತಿಳಿಯುತ್ತದೆ.

ಎಡಿಟಿಂಗ್ ಸಹಾಯದೊಂದಿಗೆ ಎಡಗಣ್ಣನ್ನು ಕಾಪಿ ಮಾಡಿ, ಮೂರನೇ ಕಣ್ಣಿನಂತೆ ಹಣೆಯ ಮೇಲೆ ಜೋಡಿಸಿದ್ದಾರೆ. ‘ಆಪ್ಟರ್ ಎಫೆಕ್ಟ್ಸ್’ ಸಾಪ್ಟ್ ವೇರ್ ಸಹಾಯದಿಂದ ಆ ಮಗುವಿಗೆ ಒಂದು ವಿಡಿಯೋದಲ್ಲಿ ಎರಡು ಕಣ್ಣು ಇರುವ ಹಾಗೆ, ಇನ್ನೊಂದು ವಿಡಿಯೋದಲ್ಲಿ ನಾಲ್ಕು ಕಣ್ಣು ಇರುವ ಹಾಗೆ ಫ್ಯಾಕ್ಟ್ಲಿ (FACTLY) ಎಡಿಟ್ ಮಾಡಿದ ವಿಡಿಯೋಗಳನ್ನು ಕೆಳಗಡೆ ನೋಡಬಹದು.

ಮೂರು – ನಾಲ್ಕು ಅಲ್ಲ, ಎಷ್ಟು ಬೇಕೆಂದರೆ ಅಷ್ಟು ಕಣ್ಣಗಳನ್ನು  ಸಾಪ್ಟ್ ವೇರ್ ಸಹಾಯದಿಂದ ಸೃಷ್ಟಿಸಬಹುದು. ಆ ಪ್ರಕ್ರಿಯೆ ‘ಆಪ್ಟರ್ ಎಫೆಕ್ಟ್ಸ್’ ಸಾಪ್ಟ್ ವೇರ್ ನಲ್ಲಿ ಹೇಗೆ ಇರುತ್ತದೆ ಎಂದು ಕೆಳಗೆ ನೋಡಬಹುದು.

ಕೊನೆಯದಾಗಿ,  ಎಡಿಟ್ ಮಾಡಿದ ವಿಡಿಯೋವನ್ನು ಹಾಕಿ, ‘ಮೂರು ಕಣ್ಣಿನ ಮಗು ಜನನ’ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.

Share.

About Author

Comments are closed.

scroll