Fake News - Kannada
 

ವ್ಯಂಗ್ಯ ಬರಹವನ್ನು “CNN ಸಂಸ್ಥೆ ತಾಲಿಬಾನ್‌ಗಳನ್ನು ಹೊಗಳುತ್ತಿದೆ” ಎಂದು ಹಂಚಿಕೊಳ್ಳಲಾಗಿದೆ

0

‘CNN’ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ, ತಾಲಿಬಾನ್‌ಗಳು ಮಾಸ್ಕುಗಳನ್ನು ಧರಿಸಿ ಜವಾಬ್ದಾರಿಯುತವಾಗಿ ಯುದ್ಧ ಮಾಡುತ್ತಿದ್ದಾರೆಂದು’ ಹೊಗಳುತ್ತಾ ಲೇಖನ ಪ್ರಕಟಣೆ ಮಾಡಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಫೋಟೊವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ

ಪ್ರತಿಪಾದನೆ: ತಾಲಿಬಾನ್‌ಗಳು ಮಾಸ್ಕ್‌ಗಳನ್ನು ಧರಿಸಿ ಜವಾಬ್ದಾರಿಯುತವಾಗಿ ಯುದ್ಧ ಮಾಡುತ್ತಿದ್ದಾರೆಂದು ‘CNN’ ಸುದ್ದಿ ಸಂಸ್ಥೆಯು ಹೊಗಳುತ್ತಾ ಲೇಖನ ಪ್ರಕಟಿಸಿದೆ.

ನಿಜಾಂಶ: ಈ ಪೋಸ್ಟ್‌ನಲ್ಲಿ ಷೇರ್ ಮಾಡಿರುವ ಲೇಖನವನ್ನು ‘The Babylon Bee’ ಎನ್ನುವ ಸೆಟೈರಿಕಲ್ ವೆಬ್ಸೈಟ್ ಪ್ರಕಟಣೆ ಮಾಡಿದೆ. ತಾಲಿಬಾನರನ್ನು ಹೊಗಳುತ್ತಾ ‘CNN’ ಸುದ್ದಿ ಸಂಸ್ಥೆಯು ಇತ್ತೀಚಿಗೆ ಯಾವುದೇ ಲೇಖನ ಪ್ರಕಟಣೆ ಮಾಡಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಲೇಖನಕ್ಕೆ ಸಂಬಂದಿಸಿದಂತೆ ವಿವರಗಳಿಗಾಗಿ ಗೂಗಲ್‌ನಲ್ಲಿ ಹುಡುಕಿದಾಗ, ಈ ಲೇಖನವನ್ನು 14 ಆಗಸ್ಟ್ 2021 ರಂದು ‘ the Babylon Bee’ ಎನ್ನುವ ಅಮೆರಿಕಾ ದೇಶಕ್ಕೆ ಸೇರಿದ ಒಂದು ಸೆಟೈರಿಕಲ್ ವೆಬ್ಸೈಟ್ ಪ್ರಕಟಿಸಿರುವುದು ತಿಳಿದುಬಂದಿದೆ. ವ್ಯಂಗ್ಯವಾಗಿ ಬರೆದ ಕಾಲ್ಪನಿಕ ಕಥನಗಳನ್ನು ಪ್ರಕಟಿಸುತ್ತೆವೆಂದು ಈ ವೆಬ್ಸೈಟ್‌ನ ವಿವರಣೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ‘The Babylon Bee’ ಸೆಟೈರಿಕಲ್ ವೆಬ್ಸೈಟ್ ಈ ಲೇಖನವನ್ನು 15ಆಗಸ್ಟ್ 2021 ರಂದು ಟ್ವೀಟ್ ಸಹ ಮಾಡಿದೆ.

ಪೋಸ್ಟ್‌ನಲ್ಲಿ ಪ್ರತಿಪಾದನೆ ಮಾಡಿರುವ ಹಾಗೆ ‘CNN’ ಸುದ್ದಿ ಸಂಸ್ಥೆಯು ತಾಲಿಬಾನ್‌ಗಳನ್ನು ಹೊಗಳುತ್ತಾ ಇತ್ತೀಚಿಗೆ ಲೇಖನಗಳನ್ನು ಪ್ರಕಟಿಸಿದೆಯಾ ಎಂದು ಹುಡುಕಿದಾಗ ಅಂತಹ ಯಾವುದೇ ಲೇಖನಗಳು ಕಂಡುಬಂದಿಲ್ಲ. ಆಪ್ಘಾನಿಸ್ತಾನ್ ದೇಶದಲ್ಲಿ ಪ್ರಸ್ತುತ ನಿರ್ಮಾಣಗೊಂಡಿರುವ ಸಂಕ್ಷೋಭೆಯನ್ನು ವರದಿ ಮಾಡುತ್ತಾ ‘ CNN’ ನ್ಯೂಸ್ ಸಂಸ್ಥೆ ಪ್ರಕಟಿಸಿದ ಲೇಖನಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಆಪ್ಘಾನಿಸ್ತಾನ್ ದೇಶದಿಂದ ತಮ್ಮ ಸೈನ್ಯವಿರುವುದು  11ಸೆಪ್ಟೆಂಬರ್ 2021ಕೊನೆಯ ದಿನ ಎಂದು ಪ್ರಕಟಿಸಿದ ಕೂಡಲೇ, ತಾಲಿಬಾನ್ ಉಗ್ರವಾದಿಗಳು ಆಪ್ಘಾನಿಸ್ತಾನ್ ದೇಶದಲ್ಲಿ ಮತ್ತೆ ರಕ್ತಪಾತ ಸೃಷ್ಟಿಸುತ್ತಾ  ಕೆಲ ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳಲು ಶುರು ಮಾಡಿದರು. 15 ಆಗಸ್ಟ್ 2021ರಂದು ತಾಲಿಬಾನ್‌ಗಳು ಆಪ್ಘಾನ್ ರಾಜಧಾನಿ ಕಾಬುಲ್ ನಗರವನ್ನು ಆಕ್ರಮಿಸಿ, ಅಧ್ಯಕ್ಷ್ಯ ಭವನವನ್ನು ಅಧೀನಕ್ಕೆ ತೆಗೆದುಕೊಂಡರು. ಅಧ್ಯಕ್ಷ್ಯ ಅಷ್ರಾಫ್ ಘನಿ ಆಪ್ಘಾನ್ ದೇಶವನ್ನು ತೊರೆದು ಹೋದದ್ದರಿಂದ, ಆಫ್ಘಾನಿಸ್ತಾನ್ ಸರ್ಕಾರದೊಂದಿಗೆ ತಾವು ಮಾಡುತ್ತಿರುವ ಯುದ್ಧ ಮುಗಿದಿದೆಯೆಂದು ತಾಲಿಬಾನರು ಅಧಿಕೃತವಾಗಿ ಪ್ರಕಟಿಸಿದರು.

ಒಟ್ಟಿನಲ್ಲಿ ‘CNN’ ಸಂಸ್ಥೆ ತಾಲಿಬಾನರನ್ನು ಹೊಗಳುತ್ತಾ ಸುದ್ದಿ ವರದಿ ಮಾಡಿದ ಹಾಗೆ ಷೇರ್ ಮಾಡುತ್ತಿರುವುದು ವ್ಯಂಗ್ಯವಾಗಿ ಬರೆದ ಲೇಖನವೇ ಹೊರತು ನಿಜವಾದುದ್ದಲ್ಲ..

Share.

About Author

Comments are closed.

scroll