Fake News - Kannada
 

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಸಿಂಧಿ ಹಿಂದೂ ಅನಿಶ್ ರಜನಿ ಅವರನ್ನು ವಿವಾಹವಾಗಿದ್ದಾರೆ, ಮುಸ್ಲಿಂನಲ್ಲ

0

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಕೋಟಾದ ಬಿಸ್ಸಿನಿಸ್ಸ್ ಕುಟುಂಬದ ಮೊಹಮ್ಮದ್ ಅನೀಶ್ ಎಂಬ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ (ಇಲ್ಲಿ) ಪೋಸ್ಟ್ ವೈರಲ್ ಆಗಿದೆ. ಹಾಗಾದರೆ ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಮೊಹಮ್ಮದ್ ಅನೀಶ್ ಎಂಬ ಮುಸ್ಲಿಂನ್ನು ಮದುವೆಯಾಗಿದ್ದಾರೆ.

ಫ್ಯಾಕ್ಟ್: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಸಿಂಧಿ ಹಿಂದೂ ಅನಿಶ್ ರಜನಿ ಅವರನ್ನು 12 ನವೆಂಬರ್ 2024 ರಂದು ವರಿಸಿದ್ದಾರೆ. ಈ ಕುರಿತು ಹಲವಾರು ಸುದ್ದಿ ವರದಿಗಳಾಗಿದ್ದು, ಮಾಜಿ ಗಯಾ ಸಂಸದ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯ ಹರಿ ಮಾಂಝಿ X ನಲ್ಲಿ ತಮ್ಮ ಮನೆಗೆ ನೀಡಿದ  ಮದುವೆಯ ಕಾರ್ಡ್ ಅನ್ನು ಹಂಚಿಕೊಳ್ಳುವುದರ ಮೂಲಕ ಈ ವದಂತಿಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಈ ಕ್ಲೇಮ್ ಅನ್ನು ಪರಿಶೀಲಿಸಲು, ನಾವು ಗೂಗಲ್ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಅದು ನಮಗೆ 13 ನವೆಂಬರ್ 2024 ರ ರಿಪೋರ್ಟ್ (ಇಲ್ಲಿ, ಮತ್ತು ಇಲ್ಲಿ)ಗಳನ್ನು ಸೂಚಿಸಿತು. ಈ ರಿಪೋರ್ಟಗಳ ಪ್ರಕಾರ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಉದ್ಯಮಿ ಅನೀಶ್ ರಜನಿ ಅವರನ್ನು ನವೆಂಬರ್ 12, 2024 ರಂದು ವಿವಾಹವಾಗಿದ್ದಾರೆ. ಅನೀಶ್ ಅವರು ಸಿಂಧಿ ವ್ಯಾಪಾರ ಕುಟುಂಬದಿಂದ ಬಂದವರು ಮತ್ತು ಪ್ರಸ್ತುತ ಅವರ ಫ್ಯಾಮಿಲಿ ಬಿಸ್ಸಿನಿಸ್ಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಇದರ ಜೊತೆಗೆ, ಅಂಜಲಿ ಬಿರ್ಲಾ ಅವರ ಮದುವೆಯ ಕುರಿತಾದ ವದಂತಿಗಳನ್ನು ಸ್ಪಷ್ಟಪಡಿಸುವ 13 ನವೆಂಬರ್ 2024 ರಂದು X, ನಲ್ಲಿ ಮಾಜಿ ಗಯಾ ಸಂಸದ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯ ಹರಿ ಮಾಂಝಿ ಅವರ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಅವರು ಮದುವೆ ಕಾರ್ಡ್ ಅನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಳ್ಳುವುದರ ಮೂಲಕ ಅಂಜಲಿ ಬಿರ್ಲಾ ಅವರ ಪತಿ ಅನೀಶ್ ರಜನಿ, ಕೋಟಾದ ಹೆಸರಾಂತ ಸಿಂಧಿ ಹಿಂದೂ, ವ್ಯಾಪಾರ ಕುಟುಂಬದವರು ಎಂದು ದೃಢಪಡಿಸಿದ್ದಾರೆ.

ಈ ಮೊದಲು ಅಂಜಲಿ ಬಿರ್ಲಾ ಬಗ್ಗೆ ಅವರು ನಾಗರಿಕ ಸೇವೆಗಳ ಪರೀಕ್ಷೆಗೆ (ಸಿಎಸ್‌ಇ) ಹಾಜರಾಗದೆ ಐಎಎಸ್‌ಗೆ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿದ ಹೇಳಿಕೆಯನ್ನು ಫಾಕ್ಟ್ಲಿ ಅಲ್ಲಗಳೆದಿತ್ತು

ಒಟ್ಟಾರೆಯಾಗಿ ಹೇಳುವುದಾದರೆ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಮದುವೆಯಾಗಿದ್ದು, ಸಿಂಧಿ ಹಿಂದೂ ಅನೀಶ್ ರಜನಿಯನ್ನು ಹೊರತು ಮುಸ್ಲಿಂನಲ್ಲ.

Share.

Comments are closed.

scroll