Fake News - Kannada
 

ಸಿರಿಯಾದ ಹಳೆಯ ವೀಡಿಯೊವನ್ನು ಇಸ್ರೇಲ್ನಲ್ಲಿ ನಡೆದ ಇತ್ತೀಚಿನ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸ್ಪೋಟಕವನ್ನು ಸಿಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. “ಮೃತದೇಹ ದಲ್ಲಿ ಟೈಮ್ ಬಾಂಬ್ ಇಟ್ಟು ಪ್ಯಾಲೆಸ್ಟೈನ್ ಗೆ ಪಾರ್ಸಲ್ ಕಳಿಸಿದ ಇಸ್ರೇಲ್” ಎನ್ನುವ ಕ್ಯಾಪ್ಶನ್ ಅನ್ನು ಈ ಪೋಸ್ಟ್ನಲ್ಲಿ ಮಾಡಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿರುವ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಇಸ್ರೇಲ್ ಭಯೋತ್ಪಾದಕನ ಮೃತ ದೇಹದಲ್ಲಿ ಟೈಮ್ ಬಾಂಬ್ ಇಟ್ಟು ಅದನ್ನು ಪ್ಯಾಲೆಸ್ಟೀನಿಯರಿಗೆ ಹಿಂದಿರುಗಿಸಲಾಗಿದೆ. 

ಫ್ಯಾಕ್ಟ್: 2012ರ ಜುಲೈನಲ್ಲಿ ಸಿರಿಯಾದ ಡಮಾಸ್ಕಸ್ ಉಪನಗರದಲ್ಲಿ ಸರ್ಕಾರಿ ಪಡೆಗಳಿಂದ ಹತ್ಯೆಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರದ ಮೆರವಣಿಗೆಯ ವಿಡಿಯೋ ಇದಾಗಿದೆ. ಸರ್ಕಾರ ಆಯೋಜಿಸಿದ್ದ ಕಾರ್ ಬಾಂಬ್ ಸ್ಫೋಟದಿಂದ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದ್ದು, ಈ  ಪರಿಣಾಮವಾಗಿ ಸುಮಾರು 85 ಜನರು ಸಾವನ್ನಪ್ಪಿದ್ದಾರೆ. ವೈರಲ್ ವೀಡಿಯೊಕ್ಕೂ ಇಸ್ರೇಲ್ನಲ್ಲಿ ಇತ್ತೀಚೆಗೆ ನಡೆದ ಘಟನೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಲೈಮ್ ತಪ್ಪಾಗಿದೆ.

ವೈರಲ್ ವೀಡಿಯೊವನ್ನು ಬಳಸಿಕೊಂಡು ಸಂಬಂದಿತ ಕಿಫ್ರೇಮ್ಗಳೊಂದಿಗೆ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಜುಲೈ 2012 ರಲ್ಲಿ ಯುರೋ ನ್ಯೂಸ್ ಪ್ರಕಟಪಡಿಸಿದ “Funeral Attack in Syria – Claims,” ಎಂಬ ವೀಡಿಯೊದಿಂದ ಬಂದ ಕ್ಲಿಪಿಂಗ್ಸ್ಗಳು ಎಂದು ತಿಳಿದುಬಂದಿದೆ. ಹಾಗಾಗಿ ಇದು ವೀಡಿಯೊ ಇತ್ತೀಚಿನದಲ್ಲ ಎಂಬುವುದು  ಖಚಿತವಾಗಿದೆ.  

ವೀಡಿಯೊದ ವಿವರಣೆಯನ್ನು ಕ್ಲೂ ಆಗಿ ತೆಗೆದುಕೊಂಡು, ಸಂಬಂಧಿತ ಕೀವರ್ಡ್ವೀಗಾಲ ಮೂಲಕ ರಿಸರ್ಚ್ ಮಾಡಿದಾಗ ಈ ವಿಡಿಯೊದ ಬಗ್ಗೆ  ಸಿಎನ್ಎನ್ ಪ್ರಕಟಿಸಿದ ಲೇಖನಕ್ಕೆ ನಾವು ಕಂಡುಕೊಂಡೆವು. 

ಸಿಎನ್ಎನ್ ವರದಿಗಳ ಪ್ರಕಾರ ಡಮಾಸ್ಕಸ್ ಸುಬರ್ಬ್ನಲ್ಲಿ ಸರ್ಕಾರಿ ಸೇನೆಗಳಿಂದ ಕೊಲ್ಲಲ್ಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಈ ವೀಡಿಯೊ ತೋರಿಸುತ್ತದೆ ಎಂದು ಹೇಳಿದೆ. ಆತನ ದೇಹವನ್ನು ಸಿರಿಯನ್ ರೆವೊಲ್ಯೂಷನರಿ ಫ್ಲಾಗ್ ನಿಂದ ಮುಚ್ಚಲಾಗಿದ್ದು, ಸೇರಿದ್ದ ಜನರೆಲ್ಲರೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಸರ್ಕಾರ ಆಯೋಜಿಸಿದ್ದ ಕಾರ್ ಬಾಂಬ್ ಸ್ಫೋಟದಿಂದ ಸ್ಫೋಟ ಸಂಭವಿಸಿದೆ ಎಂದು ನಂಬಲಾಗಿದೆ, ಈ ಪರಿಣಾಮವಾಗಿ ಸುಮಾರು 85 ಜನರು ಸಾವನ್ನಪ್ಪಿದ್ದಾರೆ.

18 ಆಗಸ್ಟ್ 2024 ರಂದು, ಟೆಲ್ ಅವೀವ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ದಾಳಿಕೋರ ಸಾವನ್ನಪ್ಪಿದ್ದು, ನೆರೆದರು ಗಾಯಗೊಂಡಿದ್ದಾರೆ. ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಸಹಯೋಗದೊಂದಿಗೆ ಹಮಾಸ್ ಈ ದಾಳಿಯ ಕಾರಣವಾಗಿದ್ದು, ಇದನ್ನು“martyrdom operation” (ಹುತಾತ್ಮರ ಕಾರ್ಯಾಚರಣೆ) ಎಂದು ಕರೆಯಲಾಗಿದೆ. ಗಾಝಾ ಕದನ ವಿರಾಮ ಮಾತುಕತೆಗಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ನಗರಕ್ಕೆ ಆಗಮಿಸಿದ ಸ್ವಲ್ಪ ಸಮಯದ ನಂತರ ಈ ಸ್ಫೋಟ ಸಂಭವಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಿರಿಯಾದ ಹಳೆಯ ವೀಡಿಯೊವನ್ನು ಇಸ್ರೇಲ್ನ ಇತ್ತೀಚಿನ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. 

Share.

Comments are closed.

scroll