Fake News - Kannada
 

ಅಸ್ಸಾಂನಲ್ಲಿ ಪ್ರತಿಭಟನಾಕಾರರು ರಾಹುಲ್ ಗಾಂಧಿಯನ್ನು ಎದುರಿಸುತ್ತಿರುವ ಹಳೆಯ ವೀಡಿಯೊವನ್ನು, ಇತ್ತೀಚಿನ ಮಣಿಪುರ ಭೇಟಿ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ

0

ಇತ್ತೀಚೆಗೆ ಮಣಿಪುರದ ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿಯವರು ಭೇಟಿ ನೀಡಿದ ನಂತರ, ಅವರ ಆಡಂಬರದ  ಭಾಷಣಗಳಿಂದಾಗಿ ಪ್ರತಿಭಟನಾಕಾರರು ರಾಹುಲ್ ಗಾಂಧಿಯನ್ನು ಅಲ್ಲಿಂದ  ಹಿಂತಿರುಗುವಂತೆ ಕೇಳುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ಜುಲೈ  8, 2024 ರಂದು ನಡೆದ ಘಟನೆಯನ್ನು ಮಣಿಪುರಕ್ಕೆ ಅವರ ಇತ್ತೀಚಿನ ಭೇಟಿಗೆ ಸಂಬಂಧಿಸಿದಂತೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಾಗಾದರೆ ಈ  ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್‌ಗಳನ್ನು ಪರಿಶೀಲಿಸೋಣ.

ಕ್ಲೇಮ್: ಜುಲೈ 8, 2024 ರಂದು ಮಣಿಪುರದ ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಿಂತಿರುಗುವಂತೆ ಒತ್ತಾಯಿಸುತ್ತಿರುವ ವೀಡಿಯೊವನ್ನು ತೋರಿಸುತ್ತದೆ.

ಫ್ಯಾಕ್ಟ್: 2024 ರ ಜನವರಿಯಲ್ಲಿ ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಎದುರಿಸಿದ ಘಟನೆ ಈ  ವೈರಲ್ ವೀಡಿಯೊದಲ್ಲಿದೆ. ಈ ವೀಡಿಯೊ ಮಣಿಪುರದ ಪರಿಹಾರ ಶಿಬಿರಗಳಿಗೆ ಅವರ ಇತ್ತೀಚಿನ ಭೇಟಿಗೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ. 

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಣಿಪುರದ ಜಿಬ್ರಾಮ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿನ ಪರಿಹಾರ ಶಿಬಿರಗಳಿಗೆ ಜುಲೈ 8, 2024 ರಂದು ಭೇಟಿ ನೀಡಿದ್ದು, ಮೈಟೀಸ್ ಮತ್ತು ಕುಕಿ-ಜೋಸ್ ಜನಾಂಗದ ನಡುವೆ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಿಂದ ಸ್ಥಳಾಂತರಗೊಂಡವರೊಂದಿಗೆ ಸಂವಾದ ನಡೆಸಿದ್ದಾರೆ.  ಹಾಗಾಗಿ, ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವೀಡಿಯೊ ಈ ಭೇಟಿಗೆ ಸಂಬಂಧಿಸಿಲ್ಲ ಎನ್ನುವುದು ಖಚಿತವಾಗಿದೆ.

ಸಂಬಂಧಿತ ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕಾಡಿದ ನಮಗೆ  ಅದೇ ದೃಶ್ಯಗಳನ್ನು ಒಳಗೊಂಡ ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಈ ವರದಿಗಳ ಪ್ರಕಾರ, ರಾಹುಲ್ ಗಾಂಧಿ ಅವರು ಜನವರಿ 2024 ರಲ್ಲಿ ಅಸ್ಸಾಂನ ನಾಗಾನ್‌ಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಭೇಟಿ ನೀಡಿದ ಸಂದರ್ಭದಲ್ಲಿ ವೈರಲ್ ವೀಡಿಯೊದಲ್ಲಿ ಇರುವಂತಹ  ಘೋಷಣೆಗಳನ್ನು  ಪ್ರತಿಭಟನಾಕಾರರು ಹೇಳಿದ್ದಾರೆ. ರಸ್ತೆಬದಿಯ ಉಪಾಹಾರ ಗೃಹದಲ್ಲಿ ಅವರು ನೆಲೆಸಿದ್ದಾಗ ಈ ಘಟನೆ ಸಂಭವಿಸಿದೆ.

ಮತ್ತೊಂದು ವರದಿಯ ಪ್ರಕಾರ, ಅಂಬಗಾನ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ರೆಸ್ಟೋರೆಂಟ್‌ ಒಂದರಲ್ಲಿ ತಂಗಿದ್ದರು, ಅಲ್ಲಿ ಕೆಲ ಜನರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳಲಾಗಿದೆ. ವೈರಲ್ ವೀಡಿಯೊ ಅವರ ಇತ್ತೀಚಿನ ಜುಲೈ 2024 ರ ಮಣಿಪುರ ಭೇಟಿಗೆ ಸಂಬಂಧಿಸಿಲ್ಲ ಎನ್ನುವುದನ್ನುಈ ವರದಿಗಳು ಖಚಿತಪಡಿಸುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಸ್ಸಾಂನಲ್ಲಿ ಪ್ರತಿಭಟನಾಕಾರರು ರಾಹುಲ್ ಗಾಂಧಿಯ ಹಳೆಯ ವೀಡಿಯೊವನ್ನು ಅವರ ಇತ್ತೀಚಿನ ಜುಲೈ 2024 ರ ಮಣಿಪುರ ಭೇಟಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ.

Share.

Comments are closed.

scroll