Fake News - Kannada
 

2020 ರಲ್ಲಿ ಕೋಲ್ಕತ್ತಾದ ಹೌರಾದಲ್ಲಿ ಪೊಲೀಸರ ಮೇಲೆ ಗುಂಪೊಂದು ದಾಳಿ ಮಾಡಿದ ವೀಡಿಯೊವನ್ನು 2025 ರ ಏಪ್ರಿಲ್‌ನಲ್ಲಿ ಮುರ್ಷಿದಾಬಾದ್‌ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

0

ಏಪ್ರಿಲ್ ಮೊದಲ ವಾರದಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆ 2025 ಜಾರಿಗೆ ಬಂದ ನಂತರ, ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಮುಸ್ಲಿಮರು ಹೊಸದಾಗಿ ಜಾರಿಗೆ ತಂದ ಕಾನೂನನ್ನು ವಿರೋಧಿಸುತ್ತಿದ್ದಾರೆ. ನ್ಯೂಸ್ ರಿಪೋರ್ಟ್ ಪ್ರಕಾರ (ಇಲ್ಲಿ, ಇಲ್ಲಿ), ಏಪ್ರಿಲ್ 11, 2025 ರಂದು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟವು, ಇದರ ಪರಿಣಾಮವಾಗಿ ಹಿಂಸಾಚಾರ ಮತ್ತು ಗಲಭೆಗಳು ನಡೆದವು. ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಹಿಂಸಾಚಾರದಲ್ಲಿ ಮೂರು ಜನರು ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಹಿಂದೂಗಳು, ಚಂದನ್ ದಾಸ್ ಮತ್ತು ಹರ್ಗೋಬಿಂದ್ ದಾಸ್ ಗುಂಪು ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದು, ಒಬ್ಬ ಮುಸ್ಲಿಂ ವ್ಯಕ್ತಿ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದರು. ವರದಿಗಳ ಪ್ರಕಾರ, ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಿಂದ ಪ್ರಭಾವಿತರಾದ ನೂರಾರು ಜನರು (ಹೆಚ್ಚಾಗಿ ಹಿಂದೂಗಳು) ಭಾಗೀರಥಿ ನದಿಯನ್ನು ದಾಟಿ ಪಕ್ಕದ ಮಾಲ್ಡಾ ಜಿಲ್ಲೆಯಲ್ಲಿ ಆಶ್ರಯ ಪಡೆದರು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಏಪ್ರಿಲ್ 12, 2025 ರಂದು, ಕಲ್ಕತ್ತಾ ಹೈಕೋರ್ಟ್ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿತು (ಇಲ್ಲಿ, ಇಲ್ಲಿ). 

ಈ ಸಂದರ್ಭದಲ್ಲಿ, ಸಮವಸ್ತ್ರ ಧರಿಸಿದ ಭದ್ರತಾ ಪಡೆ ಅಧಿಕಾರಿಗಳ ಮೇಲೆ ಕೆಲವರು ಹಲ್ಲೆ ಮಾಡುತ್ತಿರುವ ವಿಡಿಯೋ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಭದ್ರತಾ ಪಡೆಗಳಿಗೆ ಭದ್ರತೆಯ ಅವಶ್ಯಕತೆಯಿದೆ ಮತ್ತು ಮುಸ್ಲಿಮರು ತಮ್ಮ ಮೇಲೆ ಈ ರೀತಿ ದಾಳಿ ಮಾಡಿದ್ದಾರೆ ಎಂದು ಹೇಳಿಕೊಂಡು ಉಸೆರ್ಸ್ ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಏಪ್ರಿಲ್ 2025 ರ ಮುರ್ಷಿದಾಬಾದ್ ಗಲಭೆಯ ನಂತರ ಪಶ್ಚಿಮ ಬಂಗಾಳದಲ್ಲಿ ಕೆಲವು ಮುಸ್ಲಿಮರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡುತ್ತಿರುವ ವೀಡಿಯೊ.

ಫ್ಯಾಕ್ಟ್: ಈ ವೀಡಿಯೊ 2020 ರದ್ದಾಗಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಲಾಕ್‌ಡೌನ್ ಜಾರಿಗೊಳಿಸುತ್ತಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಕೆಲವರು ಹಲ್ಲೆ ನಡೆಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ದಾರಿತಪ್ಪಿಸುವಂತಿದೆ.

ಈ ಕ್ಲೇಮ್ ನ ಹಿಂದಿನ ಸತ್ಯವನ್ನು ಕಂಡುಹಿಡಿಯಲು, ನಾವು ವೈರಲ್ ವೀಡಿಯೊದ ಕೆಲವು ಪ್ರಮುಖ ಆಯಾಮಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಈ ಘಟನೆಯ ಕುರಿತು ಏಪ್ರಿಲ್ 2020 ರಲ್ಲಿ ಪ್ರಕಟವಾದ ಕೆಲವು ನ್ಯೂಸ್ ರಿಪೋರ್ಟ್ಸ ಗಳನ್ನು ಕಂಡುಕೊಂಡೆವು (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ).

ಈ ವರದಿಗಳ ಪ್ರಕಾರ, ಈ ಘಟನೆ 2020 ರ ಏಪ್ರಿಲ್ 28 ರಂದು ಪಶ್ಚಿಮ ಬಂಗಾಳದ ಹೌರಾದಲ್ಲಿರುವ ಟಿಕಿಯಾಪರಾ ಎಂಬ ಪ್ರದೇಶದಲ್ಲಿ ನಡೆದಿದೆ. ಹೌರಾದ ರೆಡ್ ಜೋನ್ ಟಿಕಿಯಾಪಾರಕ್ಕೆ ಕೊರೊನಾವೈರಸ್ (COVID-19) ಲಾಕ್‌ಡೌನ್ ಜಾರಿಗೊಳಿಸಲು ಹೋದ ಪೊಲೀಸರ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿ ದಾಳಿ ನಡೆಸಿದರು ಇದರ ಪರಿಣಾಮವಾಗಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡರು.

ಆ ಸಮಯದಲ್ಲಿ ಪೊಲೀಸರು ದಾಳಿಕೋರರ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು. ಘಟನೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಘಟನೆ ನಡೆದಿರುವುದು ತುಂಬಾ ದುರದೃಷ್ಟಕರ ಮತ್ತು ಅದು ಮೊದಲಿನಿಂದಲೂ ನಡೆಯಬಾರದಿತ್ತು ಎಂದು ಹೇಳಿದ್ದಾರೆ ಎಂದು ನ್ಯೂಸ್ ವರದಿಗಳು ತಿಳಿಸಿವೆ. 

ಕೊನೆಯದಾಗಿ ಹೇಳುವುದಾದರೆ, 2020 ರಲ್ಲಿ ಕೋಲ್ಕತ್ತಾದ ಹೌರಾದಲ್ಲಿ ಕೆಲವರು ಪೊಲೀಸರ ಮೇಲೆ ದಾಳಿ ಮಾಡಿದ ಘಟನೆಯ ವೀಡಿಯೊವನ್ನು ಏಪ್ರಿಲ್ 2025 ರಲ್ಲಿ ಮುರ್ಷಿದಾಬಾದ್‌ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ. 

Share.

Comments are closed.

scroll