Fake News - Kannada
 

ರ ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು ಪಾಕಿಸ್ತಾನಿಗಳು ಹಣ ಹಿಂಪಡೆಯಲು ಬ್ಯಾಂಕುಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳಾಗಿ ಹಂಚಿಕೊಳ್ಳಲಾಗುತ್ತಿದೆ

0

2025 ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕ ಸಾವನ್ನಪ್ಪಿದ ನಂತರ, ಭಾರತೀಯ ಸಶಸ್ತ್ರ ಪಡೆಗಳು 2025 ಮೇ 07 ರ ಮುಂಜಾನೆ ‘ಆಪರೇಷನ್ ಸಿಂಧೂರ್‘ ಅನ್ನು ಪ್ರಾರಂಭಿಸಿದವು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಾದ್ಯಂತ ಒಂಬತ್ತು ಸ್ಥಳಗಳಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಭಾರತ ಸರ್ಕಾರ ಹೇಳಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ನಡೆದಿಲ್ಲ ಎಂದು ಒತ್ತಿಹೇಳಿತು. ದಾಳಿಗಳನ್ನು ಕೇಂದ್ರೀಕೃತ, ಅಳತೆ ಮಾಡಲಾದ ಮತ್ತು ಉಲ್ಬಣಗೊಳ್ಳದ ದಾಳಿ ಎಂದು ಅದು ವಿವರಿಸಿದೆ. ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ, ಮಾಧ್ಯಮ ವರದಿಗಳು ಕಾರ್ಯಾಚರಣೆಯ ಸಮಯದಲ್ಲಿ  80 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೂಚಿಸಿವೆ. ಆದರೆ, ಕ್ಷಿಪಣಿ ದಾಳಿಯಲ್ಲಿ  26 ನಾಗರಿಕರು ಸಾವನ್ನಪ್ಪಿದ್ದು, 46 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಪಡೆಗಳ ಗಡಿಯಾಚೆಗಿನ ಶೆಲ್ ದಾಳಿಯು ಜಮ್ಮು ಮತ್ತು ಕಾಶ್ಮೀರದಲ್ಲಿ  ಒಂಬತ್ತು ನಾಗರಿಕರ ಸಾವಿಗೆ ಮತ್ತು 38 ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಈ ಸಂದರ್ಭದಲ್ಲಿ, ‘ಭಾರತದೊಂದಿಗೆ ಯುದ್ಧದ ಸಮಯದಲ್ಲಿ ತಮ್ಮ ಬ್ಯಾಂಕುಗಳು ಕುಸಿಯುವ ಮೊದಲು’ ಹಣವನ್ನು ಹಿಂಪಡೆಯಲು ಪಾಕಿಸ್ತಾನಿಗಳು ತಮ್ಮ ಬ್ಯಾಂಕುಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎನ್ನುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ವಿವಿಧ ಬ್ಯಾಂಕುಗಳು ಮತ್ತು ಎಟಿಎಂಗಳ ಮುಂದೆ ಜನರು ನಿಂತಿರುವ ಹಲವಾರು ಕ್ಲಿಪ್‌ಗಳನ್ನು ನಾವು ನೋಡಬಹುದು. ಎಬಿಪಿ ಲೈವ್ ಈ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದೆ ಮತ್ತು ಪಾಕಿಸ್ತಾನಿಗಳು ಹಣವನ್ನು ಹಿಂಪಡೆಯಲು ಪಾಕಿಸ್ತಾನದ ಬ್ಯಾಂಕುಗಳ ಹೊರಗೆ ಸಾಲುಗಟ್ಟಿ ನಿಂತಿರುವುದನ್ನು ತೋರಿಸಿದೆ ಎಂದು ತಿಳಿಸಿದ್ದು,  ಇದು ಭಾರತದಿಂದ ದಾಳಿಯ ಭಯದ ಅಡ್ಡಪರಿಣಾಮವಾಗಿದೆ ಎಂದು ಹೇಳಿಕೊಂಡಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: 2025 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ,  ಪಾಕಿಸ್ತಾನಿ ನಾಗರಿಕರು ಹಣವನ್ನು ಹಿಂಪಡೆಯಲು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದನ್ನುಈ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಇದು 2021 ರ ಹಳೆಯ ವೀಡಿಯೊದ ಎಡಿಟೆಡ್ ವೀಡಿಯೊವಾಗಿದ್ದು, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಹಣವನ್ನು ಹಿಂಪಡೆಯಲು ಆಫ್ಘನ್ನರು ಸಾಲಾಗಿ ನಿಂತಿರುವುದನ್ನು ತೋರಿಸುತ್ತದೆ.  ಅದು ಪಾಕಿಸ್ತಾನದಿಂದ ಬಂದ ವೀಡಿಯೊ ಎಂದು ತೋರಿಸಲು ಪಾಕಿಸ್ತಾನಿ ಸೈನ್‌ಬೋರ್ಡ್‌ಗಳ ಇತರ ಸಣ್ಣ ತುಣುಕುಗಳನ್ನು 2021 ರ ವೀಡಿಯೊಗೆ ಸೇರಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಮಾಡಲಾದ ಕ್ಲೇಮ್ ಸುಳ್ಳು. 

ವೈರಲ್ ಕ್ಲೇಮ್ ನ  ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ವೈರಲ್ ವೀಡಿಯೊದ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ನಮ್ಮನ್ನು ‘ಟಿಆರ್‌ಟಿ ವರ್ಲ್ಡ್’ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ಆಗಸ್ಟ್ 2021 ರ ವೀಡಿಯೊ ವರದಿಗೆ ಕರೆದೊಯ್ಯಿತು. ಇದು ವೈರಲ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳನ್ನು ಒಳಗೊಂಡಿದೆ.

ವೀಡಿಯೊದ ಕ್ಯಾಪ್ಶನ್ ಮತ್ತು ವಿವರಣೆಯ ಪ್ರಕಾರ, ತಾಲಿಬಾನ್ ನಿರ್ಬಂಧಗಳನ್ನು ವಿಧಿಸಬಹುದು ಎಂಬ ಭಯದಿಂದ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಆಫ್ಘನ್ನರು ಹಣವನ್ನು ಹಿಂಪಡೆಯಲು ಬ್ಯಾಂಕ್‌ಗಳಿಗೆ ಬಂದಿರುವ ದೃಶ್ಯವಿದೆ. ವೀಡಿಯೊದ ವಿವರಣೆಯಲ್ಲಿ ತಾಲಿಬಾನ್ ಬ್ಯಾಂಕುಗಳನ್ನು ಮತ್ತೆ ತೆರೆಯಲು ಆದೇಶಿಸಿತು, ಆದರೆ ನಗದು ಹಿಂಪಡೆಯುವಿಕೆಯ ಮೇಲೆ ವಾರಕ್ಕೆ $200 ಮಿತಿಯನ್ನು ವಿಧಿಸಿತು ಎಂದು ಹೇಳಲಾಗಿದೆ.

ವೈರಲ್ ವೀಡಿಯೊದಲ್ಲಿ ಈ ವೀಡಿಯೊದ ಕ್ಲಿಪ್‌ಗಳು ಮತ್ತು ಪಾಕಿಸ್ತಾನಿ ಬ್ಯಾಂಕುಗಳ ಸೈನ್ ಬೋರ್ಡ್‌ಗಳ ಎರಡು ಹೆಚ್ಚುವರಿ ಶಾಟ್‌ಗಳು (ಒಂದು ಬೋರ್ಡ್ ಅರ್ಧ ಗೋಚರಿಸುತ್ತದೆ ಮತ್ತು ಇನ್ನೊಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವನ್ನು ತೋರಿಸುತ್ತದೆ), ಒಂದು 4 ಸೆಕೆಂಡುಗಳಲ್ಲಿ ಮತ್ತು ಇನ್ನೊಂದು 17 ಸೆಕೆಂಡುಗಳಲ್ಲಿ ಕಾಣಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, 2021 ರಲ್ಲಿ ಆಫ್ಘನ್ನರು ತಮ್ಮ ಬ್ಯಾಂಕುಗಳಲ್ಲಿ ಹಣವನ್ನು ಹಿಂಪಡೆಯುವ ವೀಡಿಯೊವನ್ನು ಪಾಕಿಸ್ತಾನಿ ಬ್ಯಾಂಕುಗಳ ಎರಡು ಶಾಟ್‌ಗಳೊಂದಿಗೆ ಎಡಿಟ್ ಮಾಡಲಾಗಿದೆ (ನಮಗೆ ಸಿಗಲಿಲ್ಲ).  ಅದನ್ನೇ ಪಾಕಿಸ್ತಾನದ ಇತ್ತೀಚಿನ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಈ ವೀಡಿಯೊ 2021ರದ್ದಾಗಿದ್ದು, ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸುತ್ತದೆ.

ಈ ವೀಡಿಯೊದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಆಗಸ್ಟ್ 2021 ರ ಇದರ ಕುರಿತಾದ ಸುದ್ದಿ ವರದಿಗಳನ್ನು (ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡಿದ್ದೇವೆ. ಯುಎಸ್ ಅಫ್ಘಾನಿಸ್ತಾನದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಈ ಘಟನೆ ಸಂಭವಿಸಿದೆ.

ವರದಿಯ ಪ್ರಕಾರ, ತಾಲಿಬಾನ್ ವಶಪಡಿಸಿಕೊಂಡರೆ ಲೂಟಿ ನಡೆಯಬಹುದೆಂಬ ಭಯದಿಂದ ಬ್ಯಾಂಕುಗಳನ್ನು ಮುಚ್ಚಲಾಗಿತ್ತು (ಇಲ್ಲಿ ಮತ್ತು ಇಲ್ಲಿ). ಆದರೆ, ನಂತರ ಬ್ಯಾಂಕ್ಗಳನ್ನು ತೆರೆಯಲಾಯಿತು.  ಇದರಿಂದಾಗಿ ಜನರು ಹಣವನ್ನು ಹಿಂಪಡೆಯಲು ಬ್ಯಾಂಕುಗಳಿಗೆ ಹೋಗಿದ್ದಾರೆ. ಇನ್ನು ಹೆಚ್ಚಾಗಿ ಹೇಳುವುದಾದರೆ, ಪಾಕಿಸ್ತಾನಿ ನಾಗರಿಕರು ಹಣವನ್ನು ಹಿಂಪಡೆಯಲು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತ ಘಟನೆಗಳ ಬಗ್ಗೆ ಪರಿಶೀಲಿಸಲು ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಆದರೆ ಅದು ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳನ್ನು ನೀಡಲಿಲ್ಲ.

ಕೊನೆಯದಾಗಿ ಹೇಳುವುದಾದರೆ, 2021 ರ ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು ಪಾಕಿಸ್ತಾನಿಗಳು ಹಣವನ್ನು ಹಿಂಪಡೆಯಲು ಬ್ಯಾಂಕುಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll