Fake News - Kannada
 

2022 ರ ಹಳೆಯ ಎಡಿಟೆಡ್ ವಿಡಿಯೋವನ್ನು ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳುವ ಕ್ರಮ ‘ಲಿಬರೇಶನ್ ಫ್ರಂಟ್ ಆಫ್ ಅಫ್ಘಾನಿಸ್ತಾನ’ ಎಂದು ಹೇಳಿಕೊಂಡು ಶೇರ್ ಮಾಡಲಾಗಿದೆ

0

ಏಪ್ರಿಲ್ 2025 ರಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾ, “ಲಿಬರೇಶನ್ ಫ್ರಂಟ್ ಆಫ್ ಅಫ್ಘಾನಿಸ್ತಾನ” ಎಂದು ಕರೆಯಲ್ಪಡುವ ಸಂಘಟನೆಗೆ ಸೇರಿದವರು ಎಂಬ ಹೇಳಿಕೆಯೊಂದಿಗೆ ನಾಲ್ವರು ಮುಸುಕುಧಾರಿಗಳು ರೈಫಲ್‌ಗಳನ್ನು ಹಿಡಿದು ಸಂದೇಶ ನೀಡುತ್ತಿರುವ ವೀಡಿಯೊವನ್ನು (ಇಲ್ಲಿ) ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.“Pahalgam has not yet been AVENGED. Every ISI-backed resistance fighter in Pakistan or elsewhere will be HUNTED DOWN and ELIMINATED.”  ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು  ಪರಿಶೀಲಿಸೋಣ. 

ಕ್ಲೇಮ್: ಏಪ್ರಿಲ್ 2025 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಲು “ಲಿಬರೇಶನ್ ಫ್ರಂಟ್ ಆಫ್ ಅಫ್ಘಾನಿಸ್ತಾನ” ಪ್ರತಿಜ್ಞೆ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಈ ವೀಡಿಯೊ ಕ್ಲಿಪ್ 2022 ರದ್ದಾಗಿದ್ದು, ಇದನ್ನು 2025 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಓವರ್‌ಡಬ್‌ನೊಂದಿಗೆ ಎಡಿಟ್ ಮಾಡಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ಈ ಕ್ಲೇಮ್ ಅನ್ನು ಪರಿಶೀಲಿಸಲು, ನಾವು ವೈರಲ್ ಕ್ಲಿಪ್‌ನಿಂದ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಅದರ ಮೂಲ ವರ್ಷನ್ ಅನ್ನು (ಆರ್ಕೈವ್ ಲಿಂಕ್) ಕಂಡುಕೊಂಡಿದ್ದೇವೆ. ಲಿಬರೇಶನ್ ಫ್ರಂಟ್ AFG ಯ ಫೇಸ್‌ಬುಕ್ ಪೇಜ್ ಫೆಬ್ರವರಿ 4, 2022 ರಂದು ಅಪ್‌ಲೋಡ್ ಮಾಡಿದೆ ಎಂದು ಕಂಡುಕೊಂಡಿದ್ದೇವೆ.

ಗೂಗಲ್ ನ ನೋಟ್ಬುಕ್ ಎಲ್ ಎಂ ಬಳಸಿ ನಾವು ಪರ್ಷಿಯನ್ ಮತ್ತು ಅರೇಬಿಕ್ ಆಡಿಯೊವನ್ನು ಲಿಪ್ಯಂತರ ಮಾಡಿದ್ದೇವೆ. ವೀಡಿಯೊದಲ್ಲಿ ಕಂಡುಬರುವ ಶಸ್ತ್ರಸಜ್ಜಿತ ಪುರುಷರು ತಾಲಿಬಾನ್ ದಬ್ಬಾಳಿಕೆಯನ್ನು ಖಂಡಿಸುತ್ತಿದ್ದಾರೆ, ಪತ್ರಕರ್ತರ ಚಿತ್ರಹಿಂಸೆ ಮತ್ತು ಮಹಿಳೆಯರ ದಬ್ಬಾಳಿಕೆ ಮುಂತಾದ ವಿಷಯಗಳನ್ನು ಎತ್ತಿ ತೋರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಅವರು ಕಾಶ್ಮೀರ, ಪಾಕಿಸ್ತಾನ ಅಥವಾ ಪಹಲ್ಗಮ್ ಅನ್ನು ಉಲ್ಲೇಖಿಸುವುದಿಲ್ಲ.

ಆದರೆ, ಪ್ರಸ್ತುತ ವೈರಲ್ ವರ್ಷನ್ ನಲ್ಲಿ ಪಹಲ್ಗಮ್, ಪಾಕಿಸ್ತಾನ ಮತ್ತು ISI ಅನ್ನು ಸ್ಪಷ್ಟವಾಗಿ ಉಲ್ಲೇಖಿಸುವ 20-ಸೆಕೆಂಡ್ ಮಾರ್ಕ್‌ನ ಇಂಗ್ಲಿಷ್ ಆಡಿಯೊವನ್ನು ಹೊಂದಿದೆ.ಇದು ಒರಿಜಿನಲ್ ವೀಯೊದಲಿಲ್ಲ. ವೈರಲ್ ವೀಡಿಯೊವನ್ನು ಡಬ್ ಮಾಡಿದ ಆಡಿಯೊದೊಂದಿಗೆ ಎಡಿಟ್ ಮಾಡಲಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.

ವೀಡಿಯೊ ಮತ್ತು ‘ಲಿಬರೇಶನ್ ಫ್ರಂಟ್ AFG’ ಗುಂಪಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ.  2022 ರ ವೀಡಿಯೊದ ಕುರಿತು ಸುದ್ದಿ ವರದಿಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡಿದ್ದೇವೆ. ಈ ವರದಿಗಳ ಪ್ರಕಾರ, ‘ಲಿಬರೇಶನ್ ಫ್ರಂಟ್ ಆಫ್ ಅಫ್ಘಾನಿಸ್ತಾನ್’ ಈ ವೀಡಿಯೊದ ಮೂಲಕ ತನ್ನ ಅಸ್ತಿತ್ವವನ್ನು ಘೋಷಿಸಿತ್ತು. ವರದಿಗಳು ಈ ಗುಂಪನ್ನು ತಾಲಿಬಾನ್ ವಿರೋಧಿ ಎಂದು ಲೇಬಲ್ ಮಾಡಿದೆ. ಈ ವರದಿಗಳ ವೀಡಿಯೊದಲ್ಲಿ  ಫ್ರಂಟ್ ISI ವಿರೋಧಿ ಅಥವಾ ಪಾಕಿಸ್ತಾನ ವಿರೋಧಿ ಹೇಳಿಕೆಯನ್ನು ನೀಡುವ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ.

ಲಿಬರೇಶನ್ ಫ್ರಂಟ್ ಎಎಫ್‌ಜಿಯ ಫೇಸ್‌ಬುಕ್ ಪೇಜ್ ನಲ್ಲಿಯೂ ಭಾರತವನ್ನು ಬೆಂಬಲಿಸುವ ಯಾವುದೇ ಹೇಳಿಕೆಗಳು ನಮಗೆ ಕಂಡುಬಂದಿಲ್ಲ. ಅವರ ಪೇಜ್ನಲ್ಲಿನ ಕೊನೆಯ ಪೋಸ್ಟ್ ಅನ್ನು ಏಪ್ರಿಲ್ 1, 2022 ರಂದು ಮಾಡಲಾಗಿದೆ, ಅದು ಸ್ಪಷ್ಟವಾಗಿ ಅವರ ಪ್ರಣಾಳಿಕೆಯಾಗಿದೆ.

ಇದಲ್ಲದೆ, ಪಹಲ್ಗಾಮ್‌ಗೆ ಸೇಡು ತೀರಿಸಿಕೊಳ್ಳುವ ಅಫ್ಘಾನ್ ಉಗ್ರಗಾಮಿ ಗುಂಪುಗಳ ಇತ್ತೀಚಿನ ಯಾವುದಾದರು ರೆಪೋರ್ಟ್ಗಳಿವೆಯೇ ಎಂದು ಹುಡುಕಿದಾಗ ನಮಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ. ಯಾವುದೇ ವಿಶ್ವಾಸಾರ್ಹ ಸುದ್ದಿವಾಹಿನಿ ಅಥವಾ ಅಧಿಕೃತ ಮೂಲವು ಅಂತಹ ಕ್ರಮಕ್ಕೆ ಬೆದರಿಕೆ ಹಾಕುವ ಯಾವುದೇ “ಲಿಬರೇಶನ್ ಫ್ರಂಟ್” ವರದಿ ಮಾಡಿಲ್ಲ. ಫೆಬ್ರವರಿ 2022 ರ ಲಿಬರೇಶನ್ ಫ್ರಂಟ್ AFG ವೀಡಿಯೊಗೆ ಇಂಗ್ಲಿಷ್ ಓವರ್‌ಡಬ್‌ನೊಂದಿಗೆ ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ಇದು ಖಚಿತಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, 2025 ರ ಪಹಲ್ಗಾಮ್ ಘಟನೆಯ ಕುರಿತು ಲಿಬರೇಶನ್ ಫ್ರಂಟ್ AFG ತಾಲಿಬಾನ್ ವಿರುದ್ಧ ಮಾತನಾಡುವ 2022 ರ ವೀಡಿಯೊವನ್ನುಎಡಿಟ್ ಮಾಡಿ ಇಂಗ್ಲಿಷ್‌ನಲ್ಲಿ ಡಬ್  ಮಾಡಿ ಪಾಕಿಸ್ತಾನಕ್ಕೆ ಬೆದರಿಕೆ ಹಾಕುತ್ತಿರುವ ಇತ್ತೀಚಿನ ವಿಡಿಯೋ ಎಂದು ಶೇರ್ ಮಾಡಲಾಗಿದೆ. 

Share.

Comments are closed.

scroll