ಲಾಸ್ ಏಂಜಲೀಸ್ ಕಾಡ್ಗಿಚ್ಚಿನಲ್ಲಿ ಹಲವಾರು ಪ್ರಾಣಿಗಳನ್ನು ಜನರು ರಕ್ಷಿಸುವುದರ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ), ಜೊತೆಗೆ ಅಗ್ನಿಶಾಮಕ ದಳದವರು ಪ್ರಾಣಿಗಳನ್ನು ರಕ್ಷಿಸುತ್ತಿರುವುದನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: LA ಕಾಡ್ಗಿಚ್ಚಿನಲ್ಲಿ ಸಿಲುಕಿರುವ ಪ್ರಾಣಿಗಳನ್ನು ಅಗ್ನಿಶಾಮಕ ದಳದವರು ರಕ್ಷಿಸುತ್ತಿರುವ ವೀಡಿಯೊ.
ಫ್ಯಾಕ್ಟ್: ಇದು AI- ರಚಿತವಾದ ವೀಡಿಯೊ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ಈ ಕ್ಲೇಮ್ ನ ಕುರಿತು ಪರಿಶೀಲಿಸಲು, ವೈರಲ್ ವೀಡಿಯೊದಲ್ಲಿ ಚಿತ್ರಿಸಲಾದ ಘಟನೆಗಳನ್ನು ಯಾವುದಾದರೂ ಮಾಧ್ಯಮಗಳು ವರದಿ ಮಾಡಿವೆಯೇ ಎಂದು ತಿಳಿಯಲು ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ ಇದಕ್ಕೆ ಸಲುವಾಗಿ ಯಾವುದೇ ನಿಖರವಾದ ವರದಿಗಳು ಲಭಿಸಿಲ್ಲ.
ವೀಡಿಯೊವನ್ನು ಪರಿಶೀಲಿಸಿದಾಗ, ಹಲವಾರು ಅಸ್ಪಷ್ಟವಾದ ವಿಷಗಳು ಕಂಡುಬಂದವು. ಇವು ಸಾಮಾನ್ಯವಾಗಿ ಕೃತಕ ಬುದ್ಧಿಮತ್ತೆ (AI) ಪರಿಕರಗಳನ್ನು ಬಳಸಿಕೊಂಡು ರಚಿಸಲಾದ ವೀಡಿಯೊಗಳೊಂದಿಗೆ ಕಂಡುಬರುತ್ತದೆ. ಉದಾಹರಣೆಗೆ, ವಿವಿಧ ಹಂತಗಳಲ್ಲಿ, ವೀಡಿಯೊದಲ್ಲಿರುವ ತೋಳಗಳು ಬಹು ಪಂಜಗಳನ್ನು ಹೊಂದಿರುವಂತೆ ಕಂಡುಬರುತ್ತವೆ, ಇದು ವಿಚಿತ್ರವಾಗಿದೆ.

ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು, ಕೆಲವು ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಲಾಯಿತು. ಈ ಹುಡುಕಾಟವು ವೀಡಿಯೊಗಾಗಿ ಇನ್ನೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರ @Futureriderus ಗೆ ಕ್ರೆಡಿಟ್ ನೀಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಕಾರಣವಾಯಿತು.
ಇದರ ಹೆಚ್ಚಿನ ತನಿಖೆಯು @Futureriderus ನ ಇನ್ಸ್ಟಾಗ್ರಾಮ್ ಪೇಜ್ ಗೆ ಕಾರಣವಾಯಿತು. ಅಲ್ಲಿ ವೈರಲ್ ವೀಡಿಯೊದ ಒರಿಜಿನಲ್ ವರ್ಷನ್ ಅನ್ನು (ಆರ್ಕೈವ್ ಲಿಂಕ್) ಪೋಸ್ಟ್ ಮಾಡಲಾಗಿದೆ.
@Futureriderus ತಮ್ಮ ಪೋಸ್ಟ್‌ಗೆ ನೀಡಿದ ಕಾಮೆಂಟ್‌ನಲ್ಲಿ, ವೀಡಿಯೊವನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿದೆ ಎಂದು ಹೇಳಿದ್ದಾರೆ. ವೈರಲ್ ವೀಡಿಯೊ ನಿಜವಾದ ಘಟನೆಗೆ ಸಂಬಂಧಿಸಿದ್ದಲ್ಲ, ಬದಲಿಗೆ AI ಪರಿಕರಗಳನ್ನು ಬಳಸಿಕೊಂಡು ಮಾಡಿದ ಕ್ರಿಯೇಟಿವಿಟಿ ಎಂದು ತಿಳಿಸಿದ್ದಾರೆ.
ಹೆಚ್ಚುವರಿಯಾಗಿ, @Futureriderus ಅವರ ಬಯೋದಲ್ಲಿ ಅವರು ‘ಡಿಜಿಟಲ್ ಕ್ರಿಯೇಟರ್’ ಎಂದು ತಿಳಿಸಿದ್ದಾರೆ. ಜೊತೆಗೆ ಅವರ ಇನ್ಸ್ಟಾಗ್ರಾಮ್ ಪೇಜ್ ಅನೇಕ ರೀತಿಯ ವೀಡಿಯೊಗಳನ್ನು ಒಳಗೊಂಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊ LA ಕಾಡ್ಗಿಚ್ಚಿನಲ್ಲಿ ಅಗ್ನಿಶಾಮಕ ದಳದವರು ಪ್ರಾಣಿಗಳನ್ನು ರಕ್ಷಿಸುವ ನೈಜ ದೃಶ್ಯಗಳನ್ನು ತೋರಿಸುವುದಿಲ್ಲ; ಬದಲಾಗಿ ಇದು AI- ರಚಿತವಾಗಿದೆ.