ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್ ಮಾಲ್’ ತೆರೆದ ನಂತರ ಇತ್ತೀಚಿನ ಬೆಳಕಿಗೆ ಬಂದ ಲೂಟಿ ಘಟನೆಗೆ ಸಂಬಂಧಿಸಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ಫೋಟೋವು ‘ಡ್ರೀಮ್ ಬಜಾರ್ ಮಾಲ್’ ಹೆಸರಿನ ಕಟ್ಟಡವನ್ನು ತೋರಿಸುತ್ತಿದ್ದು, ಸುತ್ತಲೂ ಸಾಕಷ್ಟು ಜನರ ಗಾರ್ಬೇಜ್ ಅನ್ನ ಹಿಡಿದುಕೊಂಡಿಯುವಂತಿದೆ. ಅನೇಕ ಬಳಕೆದಾರರು ಈ ವೈರಲ್ ಚಿತ್ರವನ್ನು ಶೇರ್ ಮಾಡಿದ್ದು, ಇದು ನಿಜವೆಂದು ನಂಬಲಾಗಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನ ಸತ್ಯತೆಯನ್ನು ತಿಳಿಯೋಣ.
ಕ್ಲೇಮ್: ಪಾಕಿಸ್ತಾನದ ಕರಾಚಿಯಲ್ಲಿ ಲೂಟಿಯಾದ ಡ್ರೀಮ್ ಬಜಾರ್ ಮಾಲ್‌ನ ಹೊರಭಾಗವನ್ನು ತೋರಿಸುವ ಚಿತ್ರ.
ಫ್ಯಾಕ್ಟ್: ಪ್ರಸಾರವಾಗುತ್ತಿರುವ ಚಿತ್ರವು AI- ರಚಿತವಾಗಿದ್ದು,ಇದು ಕರಾಚಿಯಲ್ಲ. 30 ಆಗಸ್ಟ್ 2024 ರಂದು, ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿರುವ ಡ್ರೀಮ್ ಬಜಾರ್ ಮಾಲ್ ಗಮನಾರ್ಹವಾದ ಆರಂಭಿಕ ದಿನದ ರಿಯಾಯಿತಿಗಳೊಂದಿಗೆ ಹೆಚ್ಚಿನ ಜನರನ್ನು ಆಕರ್ಷಿಸಿತು. ಜನಸಂದಣಿಯಿಂದಾಗಿ ಮಾಲ್ ಸಿಬ್ಬಂದಿ ಅಂಗಡಿಯ ಬಾಗಿಲುಗಳನ್ನು ಮುಚ್ಚಿಲಾಯಿತು. ಹತಾಶೆಗೊಂಡ ಕೆಲ ಜನರು ಬಲವಂತವಾಗಿ ಬಾಗಿಲುಗಳನ್ನು ಒಡೆದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪುದಾರಿಗೆಳೆಯುತ್ತಿದೆ.
ನಮ್ಮ ತನಿಖೆಯ ಸಮಯದಲ್ಲಿ, ನಾವು ಫೋಟೋದಲ್ಲಿ ಹಲವಾರು ಲೋಪದೋಷಗಳನ್ನು ಗುರುತಿಸಿದ್ದೇವೆ. ಕಟ್ಟಡದ ಮೇಲೆ ‘ಡ್ರೀಮ್ ಬಜಾರ್’ ಎಂಬ ಬರಹವು ಸಾಮಾನ್ಯದಂತೆ ಕಾಣುತ್ತಿಲ್ಲ, ಗಾಜಿನ ಕಿಟಕಿಗಳು ವಿಚಿತ್ರವಾಗಿದೆ. ಇನ್ನೂ ಹೆಚ್ಚಾಗಿ, ಎಡಭಾಗದಲ್ಲಿರುವ ಕಟ್ಟಡದ ವಾಸ್ತುಶಿಲ್ಪದ ವಿನ್ಯಾಸವು ಅಸ್ಪಷ್ಟಾಗಿದೆ. ಏಕೆಂದರೆ ಇದು ಭಾಗಶಃ ಬಿಲ್ಬೋರ್ಡ್ ಅನ್ನು ಅಳವಡಿಸಿದ್ದು ಅಸಾಮಾನ್ಯವಾಗಿದೆ. ಚಿತ್ರದಲ್ಲಿನ ಜನಸಮೂಹವು ಬ್ಲರ್ ಆಗಿದ್ದು, ಕೈ ಮತ್ತು ಪಾದಗಳು ಸರಿಯಾಗಿಲ್ಲವಾದರಿಂದ ಈ ಚಿತ್ರದ ಸತ್ಯಾಸತ್ಯತೆಯ ಬಗ್ಗೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿತು.
ನಾವು ನಂತರ ಚಿತ್ರವನ್ನು ವಿಶ್ಲೇಷಿಸಲು ಹೈವ್ AI ಅನ್ನು ಬಳಸಿದ್ದೇವೆ, ಅದು 99.9% AI- ರಚಿತವಾಗಿದೆ ಎಂದು ದೃಢಪಡಿಸಿತು.
ಈ ಕುರಿತು ಮತ್ತಷ್ಟು ಪರಿಶೀಲಿಸಲು, ನಾವು ಹಗ್ಗಿಂಗ್ ಫೇಸ್ ಎಂಬ ಮತ್ತೊಂದು ಟೂಲ್ ಅನ್ನು ಬಳಸಿದ್ದೇವೆ. ಇದು AIಸಹಾಯದಿಂದ ಚಿತ್ರವನ್ನು ರಚಿಸಲಾಗಿದೆ ಎಂದು ಸೂಚಿಸುತ್ತದೆ. ಈ ಟೂಲ್ ಪ್ರಕಾರ, ಚಿತ್ರದ 65% AI ಬಳಸಿ ರಚಿಸಲಾಗಿದೆ ಎಂದು ತಿಳಿಸಿದೆ.
ಇದಲ್ಲದೆ, ಗೂಗಲ್ ಕೀವರ್ಡ್ ಹುಡುಕಾಟವು ಕರಾಚಿಯ ‘ಡ್ರೀಮ್ ಬಜಾರ್ ಮಾಲ್’ ಕುರಿತು ವರದಿಗಳಿಗೆ (ಇಲ್ಲಿ ಮತ್ತು ಇಲ್ಲಿ) ಕಾರಣವಾಯಿತು. ಈ ವರದಿಗಳ ಪ್ರಕಾರ, 30 ಆಗಸ್ಟ್ 2024 ರಂದು, ಕರಾಚಿಯ ಗುಲಿಸ್ತಾನ್-ಎ-ಜೋಹರ್ ಪ್ರದೇಶದಲ್ಲಿನ ಮಾಲ್ ಗ್ರಾಹಕರನ್ನು ಆಕರ್ಷಿಸಲು ಆರಂಭಿಕ ದಿನದಂದು ದೊಡ್ಡ ರಿಯಾಯಿತಿಗಳನ್ನು ನೀಡಿತ್ತು. ಇದರ ಪರಿಣಾಮವಾಗಿ, ದೊಡ್ಡ ಗುಂಪು ಹೊರಗೆ ಜಮಾಯಿಸಿತು. ಇದಕ್ಕೆ ಪ್ರತಿಯಾಗಿ, ಜನಸಂದಣಿಯನ್ನು ಸಹಿಸಲಾರದೆ ಮಾಲ್ ಸಿಬ್ಬಂದಿ ಅಂಗಡಿಯ ಬಾಗಿಲುಗಳನ್ನು ಮುಚ್ಚಿದರು, ಇದರಿಂದ ಕೆರಳಿಡಾ ಜನರ ಗುಂಪು ಬಲವಂತವಾಗಿ ಬಾಗಿಲುಗಳನ್ನು ಒಡೆಯಲು ಪ್ರಾರಂಭಿಸಿದರು. ಪರಿಸ್ಥಿತಿ ನಿಯಂತ್ರಿಸಲು ಮಾಲ್ ನೌಕರರು ಹರಸಾಹಸ ಪಡುವಂತಾಯಿತು.
31 ಆಗಸ್ಟ್ 2024 ರಂದು ಪಾಕಿಸ್ತಾನದ ಅಜ್ರಕ್ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ ‘ಡ್ರೀಮ್ ಬಜಾರ್ ಮಾಲ್’ನ ಹೊರಗಿನ ಸ್ಥಳವನ್ನು ತೋರಿಸಲಾಗಿದೆ. ವೈರಲ್ ಚಿತ್ರದಲ್ಲಿರುವ ದೃಶ್ಯಕ್ಕಿಂತ ಈ ಸ್ಥಳವು ವಿಭಿನ್ನವಾಗಿ ಕಂಡುಬಂದಿದೆ, ಈ ಮೂಲಕ ವೈರಲ್ ಚಿತ್ರವು ಕರಾಚಿಯಿಂದಲ್ಲ ಎಂದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ಚಿತ್ರವು ಕರಾಚಿಯದಲ್ಲ. ಇದು ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿರುವ ಡ್ರೀಮ್ ಬಜಾರ್ ಮಾಲ್‌ನಲ್ಲಿ ಇತ್ತೀಚೆಗೆ ನಡೆದ ಲೂಟಿ ಘಟನೆಗೆ ಸಂಬಂಧಿಸಿದಂತೆ ತಪ್ಪುದಾರಿಗೆಳೆಯುವ ರೀತಿಯಲ್ಲಿ ಹಂಚಿಕೊಳ್ಳಲಾದ AI- ರಚಿತ ಚಿತ್ರವಾಗಿದೆ.