Fake News - Kannada
 

ಜೂನ್ 2022 ರಲ್ಲಿ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯ ವೀಡಿಯೊವನ್ನು ಸುಳ್ಳು ಧಾರ್ಮಿಕ ಕೋಮು ಆಯಾಮದೊಂದಿಗೆ ಹಂಚಿಕೊಳ್ಳಲಾಗುತ್ತಿದೆ

0

“ರೈಲಿಗೆ ಬೆಂಕಿ ಹಚ್ಚುತ್ತಿರುವ ಮುಸ್ಲಿಮರು” (ಇಲ್ಲಿ) ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಮುಸ್ಲಿಮರು ರೈಲಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯಗಳು.

ಫ್ಯಾಕ್ಟ್: ಈ ವೀಡಿಯೊ 2022 ರ ಜೂನ್ 17 ರಂದು ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಸೇನಾ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆಯ ವಿಡಿಯೋವಾಗಿದೆ. ಜೂನ್ 24, 2022 ರಂದು, ರೈಲ್ವೆ ರಕ್ಷಣಾ ಪಡೆ (RPF) ತನ್ನ ಅಫೀಷಿಯಲ್  ಟ್ವಿಟರ್ ಹ್ಯಾಂಡಲ್‌ನಲ್ಲಿ ವೈರಲ್ ವೀಡಿಯೊದಲ್ಲಿ ಕಂಡುಬರುವ ಜನರನ್ನು ಸಂತೋಷ್ ಮತ್ತು ಪೃಥ್ವಿ ಎಂದು ಗುರುತಿಸಿದೆ. ಆದ್ದರಿಂದ, ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ. 

ಈ ವೈರಲ್ ವೀಡಿಯೊಗೆ ಸಂಬಂಧಿಸಿದ ವಿವರಗಳಿಗಾಗಿ, ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಆಗ ಅದೇ ವೀಡಿಯೊವನ್ನು (ಆರ್ಕೈವೆಡ್ ) ಜೂನ್ 25, 2022 ರಂದು रेलवे सुरक्षा बल RPF (ರೈಲ್ವೆ ಸುರಕ್ಷತಾ ಬಲ RPF)’ ಎಂಬ ಫೇಸ್‌ಬುಕ್ ಪೇಜ್ ನಲ್ಲಿ ಹಂಚಿಕೊಂದಿರುವುದು ತಿಳಿದು ಬಂದಿದೆ. ಇದರಿಂದ, ಈ ವೀಡಿಯೊ ಇತ್ತೀಚಿನದಲ್ಲ ಎಂದು ಹೇಳಬಹುದು. ಈ ವೀಡಿಯೊದ ವಿವರಣೆಯಲ್ಲಿ ಇದನ್ನು ಜೂನ್ 17, 2022 ರಂದು ಸಿಕಂದರಾಬಾದ್ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಈ ವೀಡಿಯೊದಲ್ಲಿರುವವರು ಸಂತೋಷ್ ಮತ್ತು ಪೃಥ್ವಿ ಎಂದು ಗುರುತಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಜಿಆರ್‌ಪಿ ಮತ್ತು ಆರ್‌ಪಿಎಫ್ ಪೊಲೀಸರು ಐಪಿಸಿ, ಪಿಡಿಪಿಪಿ ಕಾಯ್ದೆ ಮತ್ತು ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಲ್ಲಿ 60 ಜನರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.

ಇದರ ಆಧಾರದ ಮೇಲೆ, ಈ ಘಟನೆ/ವೀಡಿಯೊಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಹುಡುಕಾಟವನ್ನು ನಡೆಸಲಾಯಿತು.  2022 ರ ಜೂನ್ 23 ರಂದು ‘ಹಿಂದೂಸ್ತಾನ್ ಟೈಮ್ಸ್’ ನ ಅಫೀಷಿಯಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ಕ್ಲಿಪ್ಪಿಂಗ್ಸ್ ಅನ್ನು ವರದಿ ಮಾಡುವ ವೀಡಿಯೊ ರಿಪೋರ್ಟ್ ನಮಗೆ ದೊರಕಿದೆ. ಈ ಲೇಖನದ ಪ್ರಕಾರ, ಜೂನ್ 17, 2022 ರಂದು ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಗ್ನಿಪಥ್ ಯೋಜನೆಯನ್ನು ಪ್ರತಿಭಟಿಸುವ ಸೇನಾ ಅಭ್ಯರ್ಥಿಗಳ ಪ್ರತಿಭಟನೆಯನ್ನು ವೀಡಿಯೊ ತೋರಿಸುತ್ತದೆ. ಅಗ್ನಿಪಥ್ ಯೋಜನೆಯ ವಿರುದ್ಧ ಸೇನಾ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟಿತು, ಕೆಲವು ಪ್ರತಿಭಟನಾಕಾರರು ನಿಲ್ದಾಣದಲ್ಲಿ ಅವ್ಯವಸ್ಥೆ ಸೃಷ್ಟಿಸಿ, ನಿಲ್ದಾಣದಲ್ಲಿನ ಪೀಠೋಪಕರಣಗಳನ್ನು ನಾಶಪಡಿಸಿದ್ದಲ್ಲದೇ,  ಪ್ಲಾಟ್‌ಫಾರ್ಮ್‌ಗಳಲ್ಲಿ ನಿಲ್ಲಿಸಿದ್ದ ಮೂರು ರೈಲುಗಳಿಗೆ ಬೆಂಕಿ ಹಚ್ಚಿದರು ಎಂದು ರೆಪೋರ್ಟ್ನಲ್ಲಿ ಹೇಳಲಾಗಿದೆ. ಇಷ್ಟು ಮಾತ್ರವಲ್ಲದೆ, ಈ ವೀಡಿಯೊದಲ್ಲಿ, ರೈಲಿನ ಸೀಟುಗಳ ನಡುವೆ ಕಾರ್ಡ್‌ಬೋರ್ಡ್ ಇರಿಸಿ ರೈಲಿಗೆ ಬೆಂಕಿ ಹಚ್ಚುತ್ತಿದ್ದ ಪೃಥ್ವಿರಾಜ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಲಾಗಿದೆ. 

ಈ ಸಂದರ್ಭದಲ್ಲಿ, ಜೂನ್ 2022 ರಲ್ಲಿ ವೈರಲ್ ವೀಡಿಯೊದಲ್ಲಿನ ದೃಶ್ಯಗಳ ಕುರಿತು ಹಲವಾರು ನ್ಯೂಸ್ ಆರ್ಟಿಕಲ್ಸ್  ಪ್ರಕವಾಗಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ಕೆಲವು ನ್ಯೂಸ್ ರಿಪೋರ್ಟ್ಸ ರೈಲ್ವೆ ರಕ್ಷಣಾ ಪಡೆ (RPF) ಜೂನ್ 24, 2022 ರಂದು ತಮ್ಮ ಅಫೀಷಿಯಲ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ಮಾಡಿದ ಪೋಸ್ಟ್ ಅನ್ನು ಹಂಚಿಕೊಂಡಿವೆ. ಈ ಪೋಸ್ಟ್‌ನಲ್ಲಿ, ರೈಲ್ವೆ ರಕ್ಷಣಾ ಪಡೆ (RPF) ವೈರಲ್ ವೀಡಿಯೊದಲ್ಲಿ ಕಂಡುಬರುವ ಜನರನ್ನು ಸಂತೋಷ್ ಮತ್ತು ಪೃಥ್ವಿ ಎಂದು ಗುರುತಿಸಿದೆ.

ಜೂನ್ 17, 2022 ರಂದು ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವರದಿಗಳ ಪ್ರಕಾರ (ಇಲ್ಲಿ ಮತ್ತು ಇಲ್ಲಿ), ಜೂನ್ 17, 2022 ರಂದು ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಸೇನಾ ಅಭ್ಯರ್ಥಿಗಳು ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಆದಿಲಾಬಾದ್‌ನ ಪೃಥ್ವಿರಾಜ್ ಅವರನ್ನು A2 ಎಂದು ಮತ್ತು ಸಂತೋಷ್ ಅವರನ್ನು A5 ಎಂದು ಹೆಸರಿಸಲಾಗಿದೆ. ಅದೇ ರೀತಿ, ಸಿಕಂದರಾಬಾದ್ ಗೋಪಾಲಪುರಂ ಎಲ್ & ಒ ಪೊಲೀಸರು ಇನ್ನೂ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ (223/2022, 222/2022).

ರೈಲ್ವೆ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ A2 ಎಂದು ಗುರುತಿಸಲ್ಪಟ್ಟ ಪೃಥ್ವಿರಾಜ್‌ಗೆ ಜುಲೈ 28, 2022 ರಂದು ಜಾಮೀನು ನೀಡಲಾಗಿದೆ.  A5 ಎಂದು ಗುರುತಿಸಲ್ಪಟ್ಟ ಸಂತೋಷ್‌ಗೆ ಆಗಸ್ಟ್ 01, 2022 ರಂದು ಜಾಮೀನು ನೀಡಿದೆ. ಈ ಪ್ರಕರಣಗಳ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಕೊನೆಯದಾಗಿ  ಹೇಳುವುದಾದರೆ, ಜೂನ್ 2022 ರಲ್ಲಿ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಸೇನಾ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆಯ ವೀಡಿಯೊವನ್ನು ಪ್ರಸ್ತುತ ಸುಳ್ಳು ಕೋಮುವಾದದ ಆಯಾಮದೊಂದಿದೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll