ಮುಸ್ಲಿಮರು ಮೊಘಲ್ ಚಕ್ರವರ್ತಿ ಔರಂಗಜೇಬನ ಪೋಸ್ಟರ್ ಅನ್ನು ಬಳಸಿಕೊಂಡು ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿಯವರ ರಾಲಿಯನ್ನು ಕೆಡವಲು ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಪೋಸ್ಟರ್ವೊಂದು ಸೋಶಿಯಲ್ ಮೀಡಿಯಾದಲ್ಲಿ (ಇಲ್ಲಿ) ವೀಡಿಯೊ ವೈರಲ್ ಆಗಿದೆ. ವೀಡಿಯೊದಲ್ಲಿ ಕೆಲ ಪುರುಷರು ಒಂದು ಕಡೆ ಔರಂಗಜೇಬ್ ಮತ್ತು ಇನ್ನೊಂದು ಬದಿಯಲ್ಲಿ ಬಿ.ಆರ್ ಅಂಬೇಡ್ಕರ್ ಇರುವ ಪೋಸ್ಟರ್‌ಗಳನ್ನು ತೋರಿಸುತ್ತಿದ್ದಾರೆ ಇದರ ಜೊತೆಗೆ ಮೊಘಲ್ ಚಕ್ರವರ್ತಿಯನ್ನು ಬೆಂಬಲಿಸುವ ಘೋಷಣೆಗಳನ್ನು ಹೇಳುತ್ತಿದ್ದಾರೆ. ಹಾಗಾದರೆ ಈ ಆರ್ಟಿಕಲ್ ಮೂಲಕ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಔರಂಗಜೇಬ್ ಪೋಸ್ಟರ್‌ಗಳು ಮತ್ತು ಘೋಷಣೆಗಳೊಂದಿಗೆ ಮುಸ್ಲಿಮರು ಬಾಗೇಶ್ವರ ಧಾಮ ಧೀರೇಂದ್ರ ಶಾಸ್ತ್ರಿ ಅವರ ರಾಲಿಗೆ ಅಡ್ಡಿಪಡಿಸುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ.
ಫ್ಯಾಕ್ಟ್: ವೈರಲ್ ವೀಡಿಯೋ ಬಾಗೇಶ್ವರ್ ಧಾಮ್ ಧೀರೇಂದ್ರ ಶಾಸ್ತ್ರಿಯ ರಾಲಿಯದಲ್ಲ. ಬದಲಾಗಿ ಔರಂಗಾಬಾದ್ ಕೇಂದ್ರ ಸ್ಥಾನದ ಅಭ್ಯರ್ಥಿಗಳಾದ ವಂಚಿತ್ ಬಹುಜನ ಅಘಾಡಿಯ ಜಾವೇದ್ ಖುರೇಷಿ ಮತ್ತು ಶಿವಸೇನೆಯ ಪ್ರದೀಪ್ ಜೈಸ್ವಾಲ್ (ಶಿಂಧೆ) ಅವರ ಚುನಾವಣಾ ಪ್ರಚಾರ ಸಭೆಯಿಂದ ಎರಡೂ ಕಡೆ ಮುಖಾಮುಖಿಯಾಗಿದ್ದಾರೆ. 18 ನವೆಂಬರ್ 2024 ರಂದು ರಸ್ತೆಯಲ್ಲಿ ಎರಡೂ ಕಡೆಯವರು “ಔರಂಗಜೇಬ್ ಜಿಂದಾಬಾದ್” ಮತ್ತು “ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ” ಘೋಷಣೆಗಳನ್ನು ಹೇಳಿದ್ದಾರೆ. ಈ ಚುನಾವಣಾ ಪ್ರಚಾರ ರಾಲಿಯು 21 ನವೆಂಬರ್ 2024 ರಂದು ಶಾಸ್ತ್ರಿಯವರ ರಾಲಿಗಿಂತ ಹಿಂದಿನದಾಗಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. 18 ನವೆಂಬರ್ 2024 ರಂದು ಜಾವೀದ್ ಖುರೇಷಿ ಅವರ ಫೇಸ್‌ಬುಕ್ ಪೋಸ್ಟ್ (ಆರ್ಕೈವ್) ಗೆ ನಮ್ಮನ್ನು ಕರೆದೊಯ್ಯಿತು. “In Aurangabad Central, Vanchit candidate Javed Qureshi’s rally faced off against Pradeep Jaiswal, showing Aurangzeb’s (RH) photo and raising slogans of ‘Zindabad’” ಎಂಬ ಶೀರ್ಷಿಕೆಯನ್ನು ಕಂಡುಕೊಂಡಿದ್ದೇವೆ.

ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಅವರು 21 ನವೆಂಬರ್ 2024 ರಂದು ಬಾಗೇಶ್ವರ ಧಾಮದಿಂದ 160 ಕಿಮೀ ಪಾದಯಾತ್ರೆಯನ್ನು ಪ್ರಾರಂಭಿಸಿದರು ಎಂದು ನಾವು ಕಂಡುಕೊಂಡಿದ್ದೇವೆ (ಆರ್ಕೈವ್). ಹಿಂದೂ ಐಕ್ಯತೆಯನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸಿದ ಮೆರವಣಿಗೆಯು 29 ನವೆಂಬರ್ 2024 ರಂದು ಮಧ್ಯಪ್ರದೇಶದ ಓರ್ಚಾದಲ್ಲಿ ಕೊನೆಗೊಂಡಿತು. ಆದ್ದರಿಂದ ವೈರಲ್ ವೀಡಿಯೋ ಶಾಸ್ತ್ರಿಯವರ ರಾಲಿಗಿಂತ ಹಿಂದಿನದ್ದು ಎಂದು ತಿಳಿದುಬಂದಿದೆ.

ಈ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕೆಲವು ವ್ಯಕ್ತಿಗಳು ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರ ಚಿತ್ರಗಳನ್ನು ಹಿಡಿದು ಘೋಷಣೆಗಳನ್ನು ಹೇಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದರೆ ಇನ್ನು ಕೆಲವರು ‘ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ’ ಎಂದು ಕೂಗಿದ್ದಾರೆ. ಎದುರುಗಡೆಯಿಂದ ಸಾಗುತ್ತಿದ್ದ ವಾಹನಗಳು ಶಿವಸೇನೆಯ (ಶಿಂಧೆ ಬಣ) ಧ್ವಜಗಳನ್ನು ಪ್ರದರ್ಶಿಸಿದವು. ಬಿಜೆಪಿ. ವೀಡಿಯೊದಲ್ಲಿ ಒಂದು ಕಾರಿನ ನಂಬರ್ ಪ್ಲೇಟ್ ಮಹಾರಾಷ್ಟ್ರದಲ್ಲಿ ಔರಂಗಾಬಾದ್ ನ ರಿಜಿಸ್ಟ್ರೇಷನ್ ನಂಬರ್ MH 20 ಎಂದು ತೋರಿಸುತ್ತಿದೆ. ಇದಕ್ಕಿಂತಲೂ ಮುಖ್ಯವಾಗಿ ಶಾಸ್ತ್ರಿಯವರ ರಾಲಿ ನಡೆದದ್ದು ಮಧ್ಯಪ್ರದೇಶದಲ್ಲಿ ಹೊರತಾಗಿ ಮಹಾರಾಷ್ಟ್ರದಲಲ್ಲ.

ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟ ನಡೆಸಿದ್ದೇವೆ. ಈ ಮೂಲಕ 18 ನವೆಂಬರ್ 2024 ರಂದು ಔರಂಗಾಬಾದ್ ಅಪ್‌ಡೇಟ್ಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊ (ಆರ್ಕೈವ್) ಕಂಡುಬಂಡಿದ್ದೇವೆ. ವೀಡಿಯೊ ಶೀರ್ಷಿಕೆಯಲ್ಲಿ ಔರಂಗಾಬಾದ್ ಸೆಂಟ್ರಲ್: ಜಾವೇದ್ ಖುರೇಷಿ ಕಾರ್ಯಕರ್ತರು ಬೈಕ್ ರಾಲಿಯಲ್ಲಿ ಔರಂಗಜೇಬ್ ಅವರ ಫೋಟೋವನ್ನು ಹಿಡಿದು ಜಿಂದಾಬಾದ್ ಎಂಬ ಘೋಷಣೆಗಳನ್ನು ಹೇಳಿದ್ದಾರೆ. ವೀಡಿಯೊದಲ್ಲಿ, ಜನರು ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರ ಚಿತ್ರಗಳನ್ನು ಹಿಡಿದಿರುವ ಚಿತ್ರಗಳನ್ನು ನೋಡಬಹುದು.
ವೈರಲ್ ವೀಡಿಯೊ ಮತ್ತು ಔರಂಗಾಬಾದ್ ಯುಟ್ಯೂಬ್ ವೀಡಿಯೊ ಎರಡರಲ್ಲೂ ಅದೇ ವ್ಯಕ್ತಿ ಒಂದು ಕಡೆ ಔರಂಗಜೇಬ್ ಮತ್ತು ಇನ್ನೊಂದು ಬದಿಯಲ್ಲಿ ಬಿ.ಆರ್ ಅಂಬೇಡ್ಕರ್ ಇರುವ ಪೋಸ್ಟರ್‌ಗಳನ್ನು ಪ್ರದರ್ಶಿಸುವುದನ್ನು ನಾವು ಗಮನಿಸಿದ್ದೇವೆ.

ನವೆಂಬರ್ 2024 ರ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ, ಶಿವಸೇನೆ (ಶಿಂಧೆ) ಯಿಂದ ಪ್ರದೀಪ್ ಶಿವನಾರಾಯಣ ಜೈಸ್ವಾಲ್ ಅವರು ಔರಂಗಾಬಾದ್ (ಮಧ್ಯ) ನಿಂದ ಗೆದ್ದರು. ಪ್ರಕಾಶ್ ಅಂಬೇಡ್ಕರ್ ಅವರ ಪಕ್ಷದ ವಂಚಿತ್ ಬಹುಜನ ಅಘಾಡಿ ಅಭ್ಯರ್ಥಿ ಮೊಹಮ್ಮದ್ ಜಾವೇದ್ ಖುರೇಷಿ ನಾಲ್ಕನೇ ಸ್ಥಾನದಲ್ಲಿ ಪಡೆದಿದ್ದಾರೆ.
ಕೊನೆಯದಾಗಿ ಹೇಳುವುದಾದರೆ, ಔರಂಗಾಬಾದ್ ಚುನಾವಣಾ ರಾಲಿಯ ವೀಡಿಯೊವನ್ನು ಧೀರೇಂದ್ರ ಶಾಸ್ತ್ರಿ ಅವರ ರಾಲಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ.