ಸಲೀಂ ಎಂಬ ಮುಸ್ಲಿಂ ವ್ಯಕ್ತಿ ರವಿ ಎಂಬ ಹಿಂದೂ ಪುರುಷನಂತೆ ನಟಿಸಿ ಹಿಂದೂ ಹುಡುಗಿಯನ್ನು ಮೋಸದಿಂದ ಮದುವೆಯಾಗಿದ್ದಾನೆ ಎಂದು ಹೇಳುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಇಬ್ಬರು ಪೊಲೀಸರು ಒಬ್ಬ ವ್ಯಕ್ತಿಯ ಗುರುತಿನ ಚೀಟಿಯನ್ನು ಕೇಳುವುದನ್ನು ಮತ್ತು ಆ ವ್ಯಕ್ತಿ ಮದುವೆಯಾದ ಹುಡುಗಿಗೆ ಅವನ ನಿಜವಾದ ಹೆಸರು (ಸಲೀಂ) ಹೇಳುವುದನ್ನು ನಾವು ನೋಡಬಹುದು, ಹೀಗಾಗಿ ಅವನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಇದು ರವಿ ಎಂಬ ಹಿಂದೂ ಪುರುಷನಂತೆ ನಟಿಸಿ ಹಿಂದೂ ಹುಡುಗಿಯನ್ನು ಮೋಸದಿಂದ ಮದುವೆಯಾದ ಸಲೀಂ ಎಂಬ ಮುಸ್ಲಿಂ ವ್ಯಕ್ತಿಯ ವೀಡಿಯೊ.
ಫ್ಯಾಕ್ಟ್: ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಮತ್ತು ನಿಜವಾದ ಘಟನೆಯಲ್ಲ. ಈ ವೀಡಿಯೊವನ್ನು ಮಾಂಟಿ ದೀಪಕ್ ಶರ್ಮಾ ಎಂಬ ಸೋಶಿಯಲ್ ಮೀಡಿಯಾ ವಿಷಯ ರಚನೆಕಾರರು ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.
ಈ ಕ್ಲೇಮ್ ನ ಹಿಂದಿನ ಸತ್ಯವನ್ನು ಕಂಡುಹಿಡಿಯಲು, ವೈರಲ್ ಕ್ಲೇಮ್ ನಲ್ಲಿ ಹೇಳಿದಂತೆ, ಹಿಂದೂ ಹುಡುಗಿಯನ್ನು ಮೋಸದಿಂದ ಮದುವೆಯಾದ ಸಲೀಂ ಎಂಬ ವ್ಯಕ್ತಿಯ ಬಗ್ಗೆ ಇತ್ತೀಚೆಗೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಯಾವುದಾದರೂ ಸುದ್ದಿಗಳಿವೆಯೇ ಎಂದು ನೋಡಲು, ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಿದೆವು. ಆದರೆ, ವೈರಲ್ ವೀಡಿಯೊಗೆ ಲಿಂಕ್ ಮಾಡಲಾದ ಕ್ಲೇಮ್ ಕುರಿತು ವರದಿಯಾಗಿರುವ ಯಾವುದೇ ಸುದ್ದಿಗಳು ನಮಗೆ ಕಂಡುಬಂದಿಲ್ಲ.
ಅದರ ನಂತರ, ವೈರಲ್ ವೀಡಿಯೊದ ಕೆಲವು ಕೀಫ್ರೇಮ್‌ಗಳನ್ನು ಬಳಸಿಕೊಂಡು ನಾವು ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಈ ಹುಡುಕಾಟದ ಮೂಲಕ, ಈ ವೀಡಿಯೊದ ಮೂಲ ವೀಡಿಯೊವನ್ನು ನಾವು ‘monty_deepak_sharma’ (ಇಲ್ಲಿ, ಇಲ್ಲಿ, ಇಲ್ಲಿ) ಎಂಬ ಹೆಸರಿನ ಸಾಮಾಜಿಕ ಮಾಧ್ಯಮ ವಿಷಯ ರಚನೆಕಾರರ ಫೇಸ್‌ಬುಕ್ (ಆರ್ಕೈವ್ ಲಿಂಕ್) ಮತ್ತು ಯೂಟ್ಯೂಬ್ ಅಕೌಂಟ್ ನಲ್ಲಿ ಕಂಡುಕೊಂಡಿದ್ದೇವೆ.

ವೈರಲ್ ಆಗುತ್ತಿರುವ ಈ ವೀಡಿಯೊವನ್ನು ಮಾಂಟಿ ದೀಪಕ್ ಶರ್ಮಾ ಅವರು ಜುಲೈ 27, 2025 ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಮನರಂಜನೆಗಾಗಿ ಮಾಡಿದ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ (ಇಲ್ಲಿ, ಇಲ್ಲಿ).


ವೈರಲ್ ವೀಡಿಯೊದಲ್ಲಿ ಪೊಲೀಸ್, ವಿವಾಹಿತ ಹುಡುಗಿ, ಅವನ ತಾಯಿ ಮತ್ತು ಸಲೀಂ ಪಾತ್ರಗಳನ್ನು ನಿರ್ವಹಿಸುವ ಜನರು ಮಾಂಟಿ ದೀಪಕ್ ಶರ್ಮಾ ಅವರ ಪ್ರೊಫೈಲ್‌ಗಳಲ್ಲಿ ಪೋಸ್ಟ್ ಮಾಡಲಾದ ಅನೇಕ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳಲ್ಲಿದ್ದಾರೆ (ಇಲ್ಲಿ, ಇಲ್ಲಿ, ಇಲ್ಲಿ).

ಈ ಹಿಂದೆ, ಸೋಶಿಯಲ್ ಮೀಡಿಯಾ ಯೂಸರ್ಸ್ ಮಾಂಟಿ ದೀಪಕ್ ಶರ್ಮಾ ಅವರ ಕೆಲವು ಹೇಳಿಕೆಗಳು ನಿಜವಾದ ಘಟನೆಗಳು ಎಂದು ಹೇಳಿಕೊಳ್ಳುವ ವೀಡಿಯೊಗಳನ್ನು ಹಂಚಿಕೊಂಡಿದ್ದರು, ಆದರೆ ಫ್ಯಾಕ್ಟ್ಲಿ ಈ ಹೇಳಿಕೆಗಳು ನಸುಳ್ಳು ಎಂದು ತೋರಿಸುವ ಕೆಲವು ಫ್ಯಾಕ್ಟ್ – ಚೆಕಿಂಗ್ ಆರ್ಟಿಕಲ್ಸ್ ಪ್ರಕಟಿಸಿದೆ (ಇಲ್ಲಿ, ಇಲ್ಲಿ, ಇಲ್ಲಿ).
ಕೊನೆಯದಾಗಿ ಹೇಳುವುದಾದರೆ, ಹಿಂದೂ ಎಂದು ನಟಿಸಿ ಹಿಂದೂ ಹುಡುಗಿಯನ್ನು ಮದುವೆಯಾದ ಸಲೀಂ ಎಂಬ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ಹಿಡಿಯುವ ವೀಡಿಯೊ ಇದಾಗಿದೆ ಎಂದು ಹೇಳಿಕೊಂಡು ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.