ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ಮೆಹಬೂಬ್ ಆಲಿ, ಮುಸ್ಲಿಂ ಜನಸಂಖ್ಯೆ ಹೆಚ್ಚಾದಂತೆ ಬಿಜೆಪಿಯ ಆಡಳಿತ ಕೊನೆಗೊಳ್ಳಲಿದೆ ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಈ ವೀಡಿಯೊದಲ್ಲಿ “Now your rule will end,” ಮತ್ತು 2027 ರ ವೇಳೆಗೆ SP ಅಧಿಕಾರಕ್ಕೆ ಮರಳುತ್ತದೆ ಎಂದು ಹೇಳಿದ್ದಾರೆ. ಹಾಗಾದರೆಈ ಲೇಖನದಲ್ಲಿ ವೀಡಿಯೊದ ಹಿಂದಿನ ಸತ್ಯವನ್ನು ಕಂಡುಹಿಡಿಯೋಣ.
ಕ್ಲೇಮ್: ಎಸ್‌ಪಿ ಶಾಸಕ ಮೆಹಬೂಬ್ ಆಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಬಿಜೆಪಿಯ ಆಡಳಿತವು ಕೊನೆಗೊಂಡು, 2027 ರ ವೇಳೆಗೆ ಎಸ್‌ಪಿ ಅಧಿಕಾರಕ್ಕೆ ಮರಳುತ್ತದೆ ಎಂದು ಹೇಳುವ ವೀಡಿಯೊವನ್ನು ತೋರಿಸುತ್ತದೆ.
ಫ್ಯಾಕ್ಟ್: ಎಸ್‌ಪಿ ಶಾಸಕ ಮೆಹಬೂಬ್ ಅಲಿ ಅವರ ವೈರಲ್ ವೀಡಿಯೋ ಪೂರ್ತಿಯಿಲ್ಲ. 29 ಸೆಪ್ಟೆಂಬರ್ 2024 ರಂದು ಬಿಜ್ನೋರ್‌ನಲ್ಲಿ ನಡೆದ ಸಮಾಜವಾದಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಎಸ್‌ಪಿ ಶಾಸಕ ಮೆಹಬೂಬ್ ಆಲಿ ತಮ್ಮ ಭಾಷಣದಲ್ಲಿ, “ನಾವೆಲ್ಲರೂ ಪಿಡಿಎ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ) ಗೆ ಸೇರಿದ್ದೇವೆ. ಪ್ರತಿಯೊಬ್ಬರೂ ದೇಶದಲ್ಲಿ ಶಾಂತಿಯನ್ನು ಬಯಸುತ್ತಾರೆ. ನಾವು ಸಹೋದರತ್ವ ಮತ್ತು ಪ್ರೀತಿಯಿಂದ ಬದುಕಲು ಬಯಸುತ್ತೇವೆ. ಕೆಲವರು ಭಯ ಹಬ್ಬಿಸುತಿದ್ದು, ಮುಸ್ಲಿಂ ಜನಸಂಖ್ಯೆಯು ಬೆಳೆಯುತ್ತಿದೆ ಇವರನ್ನು ಓವರ್ಟೇಕ್ ಮಾಡುತ್ತದೆ ಎಂದು ಹೇಳಿದ್ದಾರೆ. 850 ವರ್ಷಗಳ ಕಾಲ ಆಳಿದ ಮೊಘಲರು ಸಹ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ದೇಶವನ್ನು ದಾರಿತಪ್ಪಿಸುವವರು ಸಂಸತ್ತಿನಲ್ಲಿದ್ದು, ಜನರು ಇದರ ಬಗ್ಗೆ ಎಚ್ಚೆತ್ತುಕೊಂಡು ಪ್ರತಿಕ್ರಿಯಿಸಿದ್ದಾರೆ. ಇನ್ಶಾ ಅಲ್ಲಾ, ನಾವು (ಸಮಾಜವಾದಿ ಪಕ್ಷ) 2027 ರಲ್ಲಿ ಹಿಂತಿರುಗುತ್ತೇವೆ.” ಎಂದು ಹೇಳಿದ್ದಾರೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪುದಾರಿಗೆಳೆಯುವಂತಿದೆ.
ಗೂಗಲ್ ಕೀವರ್ಡ್ ಹುಡುಕಾಟವು ನಮ್ಮನ್ನು 02 ಅಕ್ಟೋಬರ್ 2024 ರಂದು UP Tak ಯೂಟ್ಯೂಬ್ ಚಾನೆಲ್‌ನಲ್ಲಿನ “Mehboob Ali Controversy: SP MLA Mehboob Ali did not say what you are hearing” ಎಂಬ ಟೈಟಲ್ ವೀಡಿಯೊಗೆ ಕರೆದೊಯ್ಯಿತು. 29 ಸೆಪ್ಟೆಂಬರ್ 2024 ರಂದು ಬಿಜ್ನೋರ್‌ನಲ್ಲಿ ನಡೆದ ಸಮಾಜವಾದಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಎಸ್‌ಪಿ ಶಾಸಕರ ಭಾಷಣದ ಒಂದು ಭಾಗವನ್ನು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ವೀಡಿಯೊ ವರದಿ ಬಹಿರಂಗಪಡಿಸಿದೆ.
ಈಕುರಿತಾದ ಹೆಚ್ಚಿನ ತನಿಖೆಯು ನಮಗೆ X ಪ್ಲಾಟ್‌ಫಾರ್ಮ್‌ನಲ್ಲಿ ಮೆಹಬೂಬ್ ಆಲಿಯವರ ಟ್ವೀಟ್‌ಗೆ ಕಾರಣವಾಯಿತು, ಅಲ್ಲಿ ಅವರು “Original video of my speech at the Bijnor event.“ ಎಂಬ ಟೈಟಲ್ ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಮೆಹಬೂಬ್ ಅಲಿ ತಮ್ಮ ಭಾಷಣದಲ್ಲಿ “ನಾವೆಲ್ಲರೂ ಪಿಡಿಎ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರು) ಮತ್ತು ಪ್ರತಿಯೊಬ್ಬ ವ್ಯಕ್ತಿಯು ದೇಶದಲ್ಲಿ ಶಾಂತಿಯನ್ನು ಬಯಸುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯು ದೇಶದಲ್ಲಿ ಶಾಂತಿಯನ್ನು ಬಯಸುತ್ತಾನೆ. ನಾವು ಸಹೋದರತ್ವ ಮತ್ತು ಪ್ರೀತಿಯಿಂದ ಬದುಕಲು ಬಯಸುತ್ತೇವೆ. ನಮಗೆ ಶಾಂತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಆದರೆ ಕೆಲವರು ಎಲ್ಲಿಂದಲೋ ಬರುತ್ತಾರೆ. ಈಗ ಶೇಕಡಾವಾರು ಹೆಚ್ಚಾಗುತ್ತಿದೆ. ಅವರು ನಿಮ್ಮ ಕಿವಿ ಊದುತ್ತಾರೆ, ಅವರು ಬ್ಯಾಗ್ ಹಿಡಿದುಕೊಂಡು ಬರುತ್ತಾರೆ, ‘ಮುಂಬರುವ ದಿನಗಳಲ್ಲಿ ಹುಷಾರಾಗಿರಿ. ಈಗ ನಿಮ್ಮ ಆಡಳಿತ ಕೊನೆಗೊಳ್ಳುತ್ತದೆ. ಮುಸ್ಲಿಮರ ಜನಸಂಖ್ಯೆಯು ತುಂಬಾ ಹೆಚ್ಚುತ್ತಿದೆ … ಮತ್ತು ಭವಿಷ್ಯದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ …’ 850 ವರ್ಷಗಳ ಕಾಲ ಆಳಿದ ಮೊಘಲರ ಅಧಿಕಾರದಲ್ಲಿಯೂ ಇದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರ ಸ್ಥಿತಿ ಏನಾಗಲಿಲ್ಲ. ಇಂದು ದೇಶವನ್ನು ನಡೆಸುವವರು ತಪ್ಪುದಾರಿಗೆಳೆಯುತ್ತಿದ್ದರೆ. ಭಾರತದ ಜನರು ಎಚ್ಚೆತ್ತುಕೊಂಡಿದ್ದಾರೆ ಎಂದು ತಿಳಿದಿರಬೇಕು, ಸಂಸತ್ತಿನಲ್ಲಿ (ಚುನಾವಣೆ) ಉತ್ತರವನ್ನೂ ನೀಡಿದ್ದಾರೆ. ಮುಂಬರುವ 2027 ರಲ್ಲಿ ಎಲ್ಲವೂ ಬದಲಾಗುತ್ತದೆ. ಇನ್ಶಾ ಅಲ್ಲಾ ನಾವು (ಸಮಾಜವಾದಿ ಪಕ್ಷ) ಬರುತ್ತೇವೆ”.
ಹೆಚ್ಚುವರಿಯಾಗಿ, ಎಸ್‌ಪಿ ಎಂಎಲ್‌ಎ ವೈರಲ್ ವೀಡಿಯೊವನ್ನು ಉದ್ದೇಶಿಸಿ, “ಬಿಜ್ನೋರ್‌ನಲ್ಲಿನ ಪಕ್ಷದ ಕಾರ್ಯಕ್ರಮದಲ್ಲಿ ನನ್ನ ಭಾಷಣದ ವೀಡಿಯೊವನ್ನು ದುರುದ್ದೇಶಪೂರಿತ ಮಾತುಗಳೊಂದಿಗೆ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ” ಎಂದು ಹೇಳುವ ರಿಪೋರ್ಟ್ಗಳನ್ನು ನಾವು ಕಂಡುಕೊಂಡಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಬಿಜೆಪಿಯ ಆಡಳಿತವು ಕೊನೆಗೊಳ್ಳುತ್ತದೆ ಎಂದು ಎಸ್‌ಪಿ ಶಾಸಕ ಮೆಹಬೂಬ್ ಆಲಿ ಅವರು ಎಚ್ಚರಿಸುತ್ತಿರುವ ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.