Fake News - Kannada
 

ಗ್ವಾದರ್ ಹೋಟೆಲ್ ದಾಳಿಯ ನಂತರ ಚೀನಾ ಮತ್ತು ಪಾಕಿಸ್ತಾನಕ್ಕೆ ಬಿಎಲ್‌ಎ ನಾಯಕರೊಬ್ಬರು ಎಚ್ಚರಿಕೆ ನೀಡಿದ 2019 ರ ವೀಡಿಯೊವನ್ನು 2025 ರ ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್ ಗೆ ಲಿಂಕ್ ಮಾಡಿ ಎಡಿಟ್ ಮಾಡಿ ಶೇರ್ ಮಾಡಲಾಗಿದೆ

0

11 ಮಾರ್ಚ್ 2025 ರಂದು, ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ದಂಗೆಕೋರರು ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಅನ್ನು ಹೈಜಾಕ್ ಮಾಡಿ, ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುವ ಮಾರ್ಗದಲ್ಲಿ ರೈಲ್ವೆ ಹಳಿಯನ್ನು ಸ್ಫೋಟಿಸಿ ಮಿಲಿಟರಿ ಸಿಬ್ಬಂದಿಯನ್ನು ಕೊಂಡಿದ್ದಾರೆ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಭದ್ರತಾ ಪಡೆಗಳು 300 ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ್ದಾರೆ, ಆದರೆ 21 ಜನ ಒತ್ತೆಯಾಳುಗಳನ್ನು ಕೊಲ್ಲಲಾಯಿತು ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿದೆ. ನಾಲ್ವರು ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿಯೂ ಸಾವನ್ನಪ್ಪಿದಲ್ಲದೆ, 33 ಭಯೋತ್ಪಾದಕರನ್ನು ನಿರ್ನಾಮ ಮಾಡಲಾಯಿತು. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೀಡಿಯೊ ವೈರಲ್ ಆಗುತ್ತಿದೆ, ಇದು BLA ನಾಯಕನೊಬ್ಬ ಈ ದಾಳಿಯನ್ನು ಬಲೂಚಿಸ್ತಾನ್ ತೊರೆಯಲು “ಚೀನಾ ಮತ್ತು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ” ಎಂದು ಹೇಳಲಾಗಿದೆ. ಅವರು ಚೀನಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು “ಬಲೂಚಿಸ್ತಾನ್ ತೊರೆಯಿರಿ ಅಥವಾ ಪ್ರತೀಕಾರವನ್ನು ಎದುರಿಸಿ” ಎಂದು ಹೇಳಿದ್ದಾರೆ. ಇಲ್ಲವಾದಲ್ಲಿ CPEC (ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್) ವಿಫಲಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಇದು 2025 ರ ಪಾಕಿಸ್ತಾನ ರೈಲು ಹೈಜಾಕ್ ನಂತರ ನೀಡಲಾದ BLA ವೀಡಿಯೊ ಸಂದೇಶವಾಗಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: 2025 ರ ಮಾರ್ಚ್ 11 ರಂದು ನಡೆದ ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್ ನಂತರ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಾಯಕನೊಬ್ಬ ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ಆಗಿರುವ ಈ ವೀಡಿಯೊ ಮೇ 2019 ರದ್ದು. 2019 ರ ಮೇ 11 ರಂದು ಗ್ವಾದರ್‌ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಮೇಲೆ ದಾಳಿ ಮಾಡಿದ ನಂತರ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಬಿಡುಗಡೆ ಮಾಡಿತು. ಬಲೂಚಿಸ್ತಾನ್‌ನಲ್ಲಿರುವ ಚೀನೀ ಮತ್ತು ಪಾಕಿಸ್ತಾನಿ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು  ಹೇಳಲಾಗಿದೆ. ವೈರಲ್ ಆಗಿರುವ ಕ್ಲಿಪ್ ಅನ್ನು ಎಡಿಟ್ ಮಾಡಿದ್ದು, 2025 ರ ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್ ಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ. 

ಈ ಹೇಳಿಕೆಯನ್ನು ಪರಿಶೀಲಿಸಲು, ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಮೇ 2019 (ಇಲ್ಲಿ ಮತ್ತು ಇಲ್ಲಿ) (ಆರ್ಕೈವ್ ಮಾಡಲಾಗಿದೆ) ಒಂದೇ ವೀಡಿಯೊದ  ಲಾಂಗ್ ವರ್ಷನ್ ಅನ್ನು ಒಳಗೊಂಡ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ನಮ್ಮನ್ನು ಕರೆದೊಯ್ಯಿತು. ಈ ಎಕ್ಸ್ಟೆಂಡೆಡ್ ಫೂಟೇಜ್ನ ಆರಂಭಿಕ ಫ್ರೇಮ್‌ಗಳಲ್ಲಿ, ಬಿಎಲ್‌ಎ ನಾಯಕ  “ನಮ್ಮ ಸ್ವಯಂ ತ್ಯಾಗದ ತಂಡ, ಮಜೀದ್ ಬ್ರಿಗೇಡ್, ಗ್ವಾದರ್‌ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಮೇಲೆ ದಾಳಿ ಮಾಡಿತು ಮತ್ತು ಪಾಕಿಸ್ತಾನ ಮತ್ತು ಚೀನಾ ಎರಡಕ್ಕೂ ಭಾರೀ ನಷ್ಟವನ್ನುಂಟುಮಾಡಿತು…” ಹೀಗೆ ಹೇಳಿದ್ದಾನೆ. ವೀಡಿಯೊದ ದೀರ್ಘ ಆವೃತ್ತಿಯ ಸುಮಾರು 45 ಸೆಕೆಂಡುಗಳಲ್ಲಿ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಮೇಲಿನ ದಾಳಿಯನ್ನು ಅವರು ಮತ್ತೆ ಉಲ್ಲೇಖಿಸುತ್ತಾರೆ. ಆದರೆ ಈ ಭಾಗವನ್ನು ವೈರಲ್ ಕ್ಲಿಪ್‌ನಲ್ಲಿ ಎಡಿಟ್ ಮಾಡಲಾಗಿದೆ. 

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಸುಳಿವುಗಳ ಆಧಾರದ ಮೇಲೆ, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ಹುಡುಕಿದೆವು.  ಮೇ 2019 ರ ಹಿಂದಿನ ಅದೇ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ ಹಲವಾರು ವರದಿಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡೆವು. ಈ ವರದಿಗಳ ಪ್ರಕಾರ, ಬಲೂಚ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್‌ನ ನಾಲ್ವರು ಸದಸ್ಯರು ಗ್ವಾದರ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ನುಗ್ಗಿ ಪಾಕಿಸ್ತಾನಿ ಕಮಾಂಡೋಗಳೊಂದಿಗೆ 26 ಗಂಟೆಗಳ ಕಾಲ ಹೋರಾಡಿದ ಕೆಲವೇ ದಿನಗಳಲ್ಲಿ ಈ ವೀಡಿಯೊ ಬಿಡುಗಡೆಯಾಗಿದೆ. ಮೇ 11, 2019 ರಂದು ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಮಾರಕ ದಾಳಿಯು ಬೀಜಿಂಗ್‌ನ ಪ್ರಮುಖ ಅಭಿವೃದ್ಧಿ ಯೋಜನೆಗಳ ಬಗ್ಗೆ ಭದ್ರತಾ ಕಳವಳಗಳನ್ನು ಹೆಚ್ಚಿಸಿದ್ದು, ಇದರಲ್ಲಿ  ಡೀಪ್- ಸೀ ಪೋರ್ಟ್ ಸಹ ಒಳಗೊಂಡಿದೆ.  

ಗ್ವಾದರ್‌ನಲ್ಲಿರುವ ಝೇವರ್ ಪರ್ಲ್-ಕಾಂಟಿನೆಂಟಲ್ ಹೋಟೆಲ್‌ನಲ್ಲಿ ನಡೆದ ದಾಳಿ ಮತ್ತು ಮುತ್ತಿಗೆಯ ಕುರಿತು ನಾವು ಹಲವಾರು ಮಾಧ್ಯಮ ವರದಿಗಳನ್ನು ಕಂಡುಕೊಂಡಿದ್ದೇವೆ, ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಗ್ವಾದರ್ ಹೋಟೆಲ್ ದಾಳಿಯ ನಂತರ ಬಿಎಲ್‌ಎ ನಾಯಕರೊಬ್ಬರು ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ 2019 ರ ವೀಡಿಯೊವನ್ನು 2025 ರ ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್ ಗೆ  ಸಂಬಂಧಿಸಿ ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll