ಇತ್ತೀಚೆಗೆ 2025 ರ ಮಹಾ ಕುಂಭ ಮೇಳದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ).ಹರಿದಾಡುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಪೊಲೀಸ್ ಅಧಿಕಾರಿಗಳು ಸ್ವಾಮಿ ಅವಿಮುಕ್ತೇಶ್ವರಾನಂದರ ಮೇಲೆ ಲಾಠಿ ಚಾರ್ಜ್ ಮಾಡುತ್ತಿರುವ ವಿಡಿಯೋ.
ಫ್ಯಾಕ್ಟ್: ಈ ವಿಡಿಯೋ 2015 ರದ್ದು. ವಾರಣಾಸಿಯ ಗಂಗಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಯನ್ನು ನಿಷೇಧಿಸುವ ಯುಪಿ ಸರ್ಕಾರದ ನಿರ್ಧಾರದ ವಿರುದ್ಧ ಸ್ವಾಮಿ ಅವಿಮುಕ್ತೇಶ್ವರಾನಂದರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಮೇಲೆ ಪೊಲೀಸ್ ಕ್ರಮ ಜರುಗಿಸುವ ಸಮಯದಲ್ಲಿ ರೆಕಾರ್ಡ್ ಮಾಡಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ವೈರಲ್ ಕ್ಲೇಮ್ ನಸತ್ಯಾಸತ್ಯತೆಯನ್ನು ಪರಿಶೀಲಿಸಲು, ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಮೇಲೆ ಇತ್ತೀಚೆಗೆ ಲಾಠಿ ಚಾರ್ಜ್ ನಡೆದಿರುವ ಬಗ್ಗೆ ಯಾವುದಾದರೂ ಮಾಧ್ಯಮಗಳು ವರದಿ ಮಾಡಿವೆಯೇ ಎಂದು ಪರಿಶೀಲಿಸಲು ನಾವು ಇಂಟರ್ನೆಟ್ ನಲ್ಲಿ ಕೀವರ್ಡ್ ರಿಸರ್ಚ್ ಅನ್ನು ನಡೆಸಿದ್ದೇವೆ. ಆದರೆ ನಮಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ದೊರಕಿಲ್ಲ. ಆದರೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಇತರ ಕೆಲವು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಬಗ್ಗೆ ಸೆಪ್ಟೆಂಬರ್ 2015 ರ ವರದಿಗಳನ್ನು (ಇಲ್ಲಿ ಮತ್ತು ಇಲ್ಲಿ) ನಾವು ಕಂಡುಕೊಂಡಿದ್ದೇವೆ.

ಆ ಸಮಯದಲ್ಲಿ, ಸ್ವಾಮಿ ಅವಿಮುಕ್ತೇಶ್ವರಾನಂದರು, ಹಲವಾರು ಸಂತರು ಮತ್ತು ಸ್ಥಳೀಯರೊಂದಿಗೆ, ಗಂಗಾ ಮತ್ತು ಯಮುನಾ ನದಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಯನ್ನು ನಿಷೇಧಿಸುವ ಅಲಹಾಬಾದ್ ಹೈಕೋರ್ಟ್ ತೀರ್ಪಿನ ನಂತರ, ಗಂಗಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಯನ್ನು ನಿಷೇಧಿಸಿದ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದರು. ಇಂಡಿಯಾ ಟುಡೇ ವರದಿಯ ಪ್ರಕಾರ, “ಮಂಗಳವಾರ ವಿವಿಧ ಸಂತರು ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಲು ಪ್ರತಿಭಟನಾಕಾರರೊಂದಿಗೆ ಸೇರಿಕೊಂಡರು. ನಂತರ ಹಿರಿಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳ ಗುಂಪನ್ನು ಚದುರಿಸಲು ಹಲವಾರು ವ್ಯರ್ಥ ಪ್ರಯತ್ನಗ ಳು ನಡೆದವು. ಆದರೆ ಸ್ವಾಮಿ ಅವಿಮುಕ್ತೇಶ್ವರಾನಂದ ನೇತೃತ್ವದಲ್ಲಿ ಪ್ರತಿಭಟನಾಕಾರರು ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮತ್ತೊಮ್ಮೆ ದಶಾಶ್ವಮೇಧ ಘಾಟ್ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದರು, ಇದು ಪೊಲೀಸರನ್ನು ಲಾಠಿ ಚಾರ್ಜ್ ಗೆ ಕಾರಣವಾಯಿತು.”

ಈ ಲಾಠಿ ಚಾರ್ಜ್ ಸಮಯದಲ್ಲಿ, ಸ್ವಾಮಿ ಅವಿಮುಕ್ತೇಶ್ವರಾನಂದ್ ಮತ್ತು ಇತರ 30 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ತನಿಖೆಯು 2015 ರ ವೀಡಿಯೊ ವರದಿಗಳನ್ನು ನಮಗೆ ತೋರಿಸಿದೆ.
ಈ ವರದಿಗಳು ವೈರಲ್ ವೀಡಿಯೊದಲ್ಲಿ ಕಂಡುಬರುವ ವಿಭಿನ್ನ ಆಯಾಮಗಳ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ದೃಶ್ಯಗಳನ್ನು ಒಳಗೊಂಡಿವೆ. ಈ ರಿಪೋರ್ಟ್ ನಲ್ಲಿ, ಸ್ವಾಮಿ ಅವಿಮುಕ್ತೇಶ್ವರಾನಂದರು ವೈರಲ್ ವೀಡಿಯೊದಲ್ಲಿರುವಂತೆ ಅದೇ ಭಂಗಿಯಲ್ಲಿ ತೋಳುಗಳನ್ನು ತೆರೆದು ನಿಂತು, “ಮರಿಯೇ… ಮರಿಯೇ” ಎಂದು ಹೇಳುತ್ತಿರುವುದನ್ನು ಕಾಣಬಹುದು.

ಹೆಚ್ಚುವರಿಯಾಗಿ, ವೈರಲ್ ಕ್ಲಿಪ್ ಅನ್ನು ತೆಗೆದ ನಿಖರವಾದ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದನ್ನು ಜನವರಿ 2016 ರಲ್ಲಿ ಸ್ಟಾಕ್ ಫೂಟೇಜ್ ಪ್ಲಾಟ್‌ಫಾರ್ಮ್ ವೈಲ್ಡ್ ಫಿಲ್ಮ್ಸ್ ಇಂಡಿಯಾ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. ವೈರಲ್ ವೀಡಿಯೊದಲ್ಲಿ ಫೂಟೇಜ್ ಕ್ಲಿಪಿಂಗ್ಸ್ 4:32 ಮಾರ್ಕ್‌ನಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, 2015 ರಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದರ ಮೇಲೆ ಲಾಠಿ ಚಾರ್ಜ್ ನಡೆದ ವೀಡಿಯೊವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.