Fake News - Kannada
 

‘ಹಿಂದೂ ದೇವಸ್ಥಾನ ಧ್ವಂಸಗೊಂಡಿದೆ’ ಎಂದು ಹಳೆಯ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

0

ಹನುಮಂತನ ವಿಗ್ರಹ ಧ್ವಂಸಗೊಂಡಿದೆ ಎಂದು ತೋರಿಸುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದು ಆಂಧ್ರಪ್ರದೇಶದ ಎಲೂರಿನಲ್ಲಿರುವ ದೇವಾಲಯದ ವಿಗ್ರಹ ಎಂದು ಹೇಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಆಂಧ್ರಪ್ರದೇಶದ ಎಲೂರಿನಲ್ಲಿ ಮತ್ತೊಂದು ಹಿಂದೂ ದೇವಸ್ಥಾನ ಧ್ವಂಸಗೊಂಡಿದೆ.

ಸತ್ಯಾಂಶ: ಈ ಘಟನೆ ನಡೆದದ್ದು 2014 ರಲ್ಲಿ. ವಿಗ್ರಹ ಧ್ವಂಸಗೊಳಿಸಿದ ಆರೋಪಿಗಳನ್ನು 2015 ರಲ್ಲಿ ಬಂಧಿಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈ ವಿಷಯವನ್ನು ಪಶ್ಚಿಮ ಗೋದಾವರಿ ಪೊಲೀಸರು ತಮ್ಮ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದು, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ 2014 ರ ಘಟನೆಯ ಫೋಟೋಗಳನ್ನು ಇತ್ತೀಚಿನದ್ದು ಎಂದು ಹಂಚಿಕೊಂಡು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಹಾಗಾಗಿ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.

ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ಫೋಟೋಗಳ ವಿವರಗಳಿಗಾಗಿ ನಾವು ಹುಡುಕಾಡಿದಾಗ, ಪಶ್ಚಿಮ ಗೋದಾವರಿ ಪೊಲೀಸರು ಇತ್ತೀಚೆಗೆ ಇದರ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟೀಕರಣವನ್ನು ನೀಡಿದ್ದಾರೆ ಎಂಬುದು ತಿಳಿಬಂದಿದೆ. ಈ ಫೋಟೋಗಳು 2014 ರಲ್ಲಿ ಎಲೂರು ಒನ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಳೆಯ ಘಟನೆಯನ್ನು ತೋರಿಸುತ್ತವೆ ಎಂದು ಟ್ವೀಟ್ ನಲ್ಲಿ ಪಶ್ಚಿಮ ಗೋದಾವರಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಹಲ್ಲೆಯ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯವು 2015 ರಲ್ಲಿ ಬಂಧಿಸಿ ಶಿಕ್ಷಿಸಿತ್ತು. ಪಶ್ಚಿಮ ಗೋದಾವರಿ ಪೊಲೀಸರು ಇದೇ ಮಾಹಿತಿಯನ್ನು ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹನುಮಂತನ ವಿಗ್ರಹದ ಚಿತ್ರಗಳು ಹಳೆಯದಾಗಿದ್ದು, ಸುಳ್ಳು ಸುದ್ದಿ ಹರಡಿದ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪಶ್ಚಿಮ ಗೋದಾವರಿ ಪೊಲೀಸರು ತಿಳಿಸಿದ್ದಾರೆ.

ಎಲೂರಿನ ಹನುಮಂತನ ವಿಗ್ರಹದ ಮೇಲಿನ ನ್ಯಾಯಾಲಯದ 2014 ರ ತೀರ್ಪನ್ನು ಕೆಳಗೆ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 2014 ರಲ್ಲಿ ಎಲೂರಿನಲ್ಲಿ ಧ್ವಂಸಗೊಂಡ ಹನುಮಂತನ ವಿಗ್ರಹದ ಫೋಟೋಗಳನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll