ಯುಜಿ ನೀಟ್ ಪೇಪರ್ ಸೋರಿಕೆ ಹಗರಣದ ಆರು ಆರೋಪಿಗಳನ್ನು ಜಾರ್ಖಂಡ್‌ನ ಕಾಂಗ್ರೆಸ್ ಪಕ್ಷದ ದಿಯೋಘರ್ ಕಚೇರಿಯಲ್ಲಿ ಅಡಗಿಸಿಟ್ಟಿರುವಂತೆ ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಈ ವಿಡಿಯೋದಲ್ಲಿ ಯುಜಿ ನೀಟ್ ಪೇಪರ್ ಸೋರಿಕೆ ಹಗರಣದ ಆರೋಪಿಗಳು ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಬಂಧಿಸಲ್ಪಟ್ಟಿರುವುದನ್ನು ವಿಡಿಯೋ ತೋರಿಸುತ್ತಿದೆ.
ಫ್ಯಾಕ್ಟ್: ನೀಟ್ ಆರೋಪಿಗಳನ್ನು ಪೊಲೀಸರು ಪಾಟ್ನಾದ ಎಲ್ ಎನ್ ಜೆಪಿ ಆಸ್ಪತ್ರೆಯಿಂದ ಹೊರಗೆ ಕರೆದುಕೊಂಡು ಬರುವಂತೆ ಈ ವಿಡಿಯೋದಲ್ಲಿ ಕಾಣಬಹುದು. ಆದ್ದರಿಂದ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ಕ್ಲೈಮ್‌ನಲ್ಲಿರುವ ನಿಜಾಂಶವನ್ನು ಕಂಡುಹಿಡಿಯಲು ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಸಹಾಯದಿಂದ ಪರಿಶೀಲಿಸಿದೆವು. ಇಲ್ಲಿ ನಮಗೆ ಎಎನ್‌ಐ ಸುದ್ದಿ ವಾಹಿನಿ ಜೂನ್ 23, 2024 ರಂದು ಮಾಡಿದ ‘X’ ಪೋಸ್ಟ್‌ನ್ನು ಕಂಡುಕೊಂಡೆವು.
ಈ ವೈರಲ್ ಪೋಸ್ಟ್ ನ ವಿವರಣೆಯ ಪ್ರಕಾರ, ಯುಜಿ ನೀಟ್ ಪ್ರಕರಣದ ಆರು ಆರೋಪಿಗಳನ್ನು ಪಾಟ್ನಾದ ಎಲ್‌ಎನ್‌ಜೆಪಿ ಆಸ್ಪತ್ರೆಯಿಂದ ಹೊರಗೆ ಕರೆದೊಯ್ಯುವಾಗ ಇದನ್ನು ಸೆರೆಹಿಡಿಯಲಾಗಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಪಾಟ್ನಾದ ಎಲ್ ಎನ್ ಜೆಪಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಎಎನ್‌ಐ ಮತ್ತು ಎಕನಾಮಿಕ್ ಟೈಮ್ಸ್ ವಾಹಿನಿಗಳ ವರದಿಯ ಪ್ರಕಾರ ಆರೋಪಿಗಳನ್ನು ಜಾರ್ಖಂಡ್‌ನ ದಿಯೋಘರ್‌ನಲ್ಲಿ ಬಂಧಿಸಲಾಗಿದೆ. ವೈರಲ್ ವೀಡಿಯೊದಲ್ಲಿರುವ ಎಲ್‌ಎನ್‌ಜೆಪಿ ಆಸ್ಪತ್ರೆ ಕಟ್ಟಡವನ್ನು (ಇಲ್ಲಿ ಮತ್ತು ಇಲ್ಲಿ) ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ ಎಂಬುವುದು ಇಲ್ಲಿ ಸ್ಪಷ್ಟವಾಗಿ ತಿಳಿದು ಬಂದಿದೆ.
ಹೆಚ್ಚಿನ ವಿವರಗಳಿಗಾಗಿ ಹುಡುಕಾಡಿದಾಗ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಈ ಆರೋಪಿಗಳನ್ನುಬಿಹಾರದಲ್ಲಿರುವ ಎಲ್‌ಎನ್‌ಜೆಪಿ ಆಸ್ಪತ್ರೆ ಯಲ್ಲಿ ಬಂದಿಸಲ್ಪಟ್ಟಿಲ್ಲ ಬದಲಾಗಿ ಜಾರ್ಖಂಡ್‌ನಲ್ಲಿರುವ ದಿಯೋಘರ್‌ನ ಏಮ್ಸ್ ಬಳಿಯ ‘ಸೇಫ್ ಹೌಸ್’ ನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಜಾರ್ಖಂಡ್ ಪೊಲೀಸರ ಪ್ರಕಾರ, ಆರೋಪಿಗಳೆಲ್ಲರೂ ಜುನು ಸಿಂಗ್ ಎಂಬ ವ್ಯಕ್ತಿಯ ಮನೆಯಲ್ಲಿ ಅಡಗಿಕೊಂಡಿದ್ದರು.
ಹಾಗಾಗಿ ಈ ಮೂಲಕ ತಿಳಿದು ಬಂದ ವಿಷಯವೇನೆಂದರೆ ದಿಯೋಘರ್‌ನ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಅವರನ್ನು ಬಂಧಿಸಲಾಗಿದೆ ಎಂಬುದನ್ನು ಯಾವ ವರದಿಯಲ್ಲೂ ತಿಳಿಸಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಯುಜಿ ನೀಟ್ ಪ್ರಕರಣದ ಆರು ಆರೋಪಿಗಳನ್ನು ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಅಲ್ಲ, ಬದಲಾಗಿ ಪಾಟ್ನಾದ ಆಸ್ಪತ್ರೆಯಿಂದ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಕರೆದೊಯ್ಯಲಾಗಿದೆ .