Fake News - Kannada
 

ಅವಾಮಿ ಲೀಗ್ ನಾಯಕ ಶಾಹಿದುಲ್ ಇಸ್ಲಾಂ ಹಿರಾನ್ ಅವರ ಮೃತ ದೇಹವನ್ನು ಪ್ರತಿಮೆಗೆ ನೇತಾಡುತ್ತಿರುವ ವೀಡಿಯೊವನ್ನು ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

0

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಕಾರಣವಾದ ನಡುವೆ (ಇಲ್ಲಿ, ಮತ್ತು ಇಲ್ಲಿ) ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ್ ಗಳಲ್ಲಿ (ಇಲ್ಲಿ) ವೈರಲ್ ವಿಡಿಯೋವೊಂದು ಹರಿದಾಡುತ್ತಿದೆ. ವೀಡಿಯೊದಲ್ಲಿ ಸತ್ತ ಮತ್ತು ವಿರೂಪಗೊಂಡ ವ್ಯಕ್ತಿಯನ್ನು ಕಟ್ಟಡಕ್ಕೆ ಕಟ್ಟಿಹಾಕಿರುವುದನ್ನು ತೋರಿಸಲಾಗಿದ್ದು, ಗುಂಪೊಂದು  “ಅಲ್ಲಾ-ಹು-ಅಕ್ಬರ್” ಎಂಬ ಘೋಷಣೆಗಳನ್ನು ಕೂಗುತ್ತಿದೆ. ವೀಡಿಯೊದಲ್ಲಿ ಮುಸ್ಲಿಂ ಗುಂಪೊಂದು ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಮೇಲೆ ದಾಳಿ ಮಾಡಿ ಕೊಲ್ಲುವುದನ್ನು ತೋರಿಸಲಾಗಿದೆ ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಬಾಂಗ್ಲಾದೇಶದಲ್ಲಿ ಮುಸ್ಲಿಂ ಗುಂಪೊಂದು ಹಿಂದೂ ವ್ಯಕ್ತಿಯನ್ನು ಸಾರ್ವಜನಿಕವಾಗಿ ಹೊಡೆದು ಕೊಂದು ಹಾಕುತ್ತಿರುವ ವೀಡಿಯೊ.

ಫ್ಯಾಕ್ಟ್: ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಗುಂಪೊಂದು ನೇತುಹಾಕುತ್ತಿರುವುದನ್ನು ವೀಡಿಯೊ ತೋರಿಸುತ್ತಿಲ್ಲ. ಬದಲಾಗಿ, ಪೊರಹತಿ ಒಕ್ಕೂಟದ ಅಧ್ಯಕ್ಷ ಮತ್ತು ಜೆನೈದಾ ಸದರ್ ಉಪಜಿಲ್ಲಾ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಶಾಹಿದುಲ್ ಇಸ್ಲಾಂ ಹಿರಾನ್ ಅವರ ಮೃತ ದೇಹವನ್ನು ಪ್ರತಿಮೆಗೆ ನೇತುಹಾಕುತ್ತಿರುವುದನ್ನು ಇದು ತೋರಿಸುತ್ತದೆ. ವರದಿಗಳ ಪ್ರಕಾರ, ಆಗಸ್ಟ್ 05 ರಂದು 2024, ಬಾಂಗ್ಲಾದೇಶದ ಪ್ರಧಾನಿ ಹಸೀನಾ ಅವರ ರಾಜೀನಾಮೆಯ ನಂತರ, ಪ್ರತೀಕಾರದ ಗುಂಪೊಂದು ಶಾಹಿದುಲ್ ಇಸ್ಲಾಂ ಹಿರಾನ್ ಮೇಲೆ ಹಲ್ಲೆ ನಡೆಸಿ ಅವರನ್ನು ಕೊಂದಿದೆ. ನಂತರ, ಅವರ ದೇಹವನ್ನು ಜೆನೈದಾ ನಗರ ಕೇಂದ್ರದಲ್ಲಿರುವ ಪೈರಾ ಛತ್ತರ್‌ನಲ್ಲಿರುವ ಶಿಲ್ಪಕ್ಕೆ ನೇತುಹಾಕಲಾಯಿತು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ಬಾಂಗ್ಲಾದೇಶವು ಜುಲೈ 2024 ರಲ್ಲಿ ಕೋಟಾ ವಿರೋಧಿ ಚಳುವಳಿಯಾಗಿ ಪ್ರಾರಂಭವಾದ ಮಾರಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ, ಈ ಸಾಮೂಹಿಕ ಪ್ರತಿಭಟನೆಗಳು ಪ್ರಮುಖ ಸರ್ಕಾರಿ ವಿರೋಧಿ ದಂಗೆಯಾಗಿ ಉಲ್ಬಣಗೊಂಡಿತ್ತು. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದಾಗ ಪರಿಸ್ಥಿತಿ ಕ್ಷೀಣಿಸಿತ್ತು. ಪ್ರತಿಭಟನಾಕಾರರು ಢಾಕಾದಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ಬಲವಂತವಾಗಿ ಪ್ರವೇಶಿಸಿ, ಆವರಣವನ್ನು ಲೂಟಿ ಮಾಡಿ ಧ್ವಂಸಗೊಳಿಸಿದರು (ಇಲ್ಲಿ, ಇಲ್ಲಿ).

ವರದಿಗಳ ಪ್ರಕಾರ, ಗುಂಪುಗಳು ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂಗಳ ಮನೆಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡಿ, ಅವರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿವೆ (ಇಲ್ಲಿ). ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ (ಇಲ್ಲಿ). ಹೆಚ್ಚುವರಿಯಾಗಿ, ಪ್ರತಿಭಟನಾಕಾರರು ಮಹಿಳೆಯರನ್ನು ಅಪಹರಿಸುತ್ತಿದ್ದಾರೆ (ಇಲ್ಲಿ) ಎಂದು ಕೆಲವು ಅನ್ ವೆರಿಫೈಡ್ ಕ್ಲೇಮ್ ಗಳು ಸೂಚಿಸುತ್ತವೆ.

ವೈರಲ್ ಕ್ಲೇಮ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಬಂಗಾಳಿ ಭಾಷೆಯಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ ಡೈಲಿ ಸ್ಟಾರ್ ಆಗಸ್ಟ್ 06, 2024 ರಂದು ಪ್ರಕಟಿಸಿದ  ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು. ಈ ಲೇಖನದ ಪ್ರಕಾರ, ಜೆನಿದಾದಲ್ಲಿನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮೀರ್ ಅಬ್ದುರ್ ರೆಹಮಾನ್, “ಜೆನಿದಾದಲ್ಲಿ, ಪೊರಹತಿ ಯೂನಿಯನ್ ಪರಿಷತ್ ಅಧ್ಯಕ್ಷ ಹಿರಾನ್ ಮತ್ತು ಅವರ ಚಾಲಕ ಅಸಾದ್ ಅವರನ್ನು ಥಳಿಸಿ ಕೊಲ್ಲಲಾಗಿದೆ. ನಂತರ, ಪೈರಾ ಚತ್ತರ್ ನಲ್ಲಿರುವ ಸ್ಟ್ಯಾಚುಗೆ  ಶವಗಳನ್ನು ನೇತುಹಾಕಲಾಗಿದೆ” ಎಂದು ಹೇಳಿದ್ದಾರೆ. ಆಗಸ್ಟ್ 05, 2024 ರಂದು ರಾಜಧಾನಿ ಢಾಕಾದ ಹೊರಗೆ ನಡೆದ ದಾಳಿಗಳು ಮತ್ತು ಘರ್ಷಣೆಗಳ ಬಗ್ಗೆಯೂ ಲೇಖನದಲ್ಲಿ ತಿಳಿಸಲಾಗಿದೆ. ವರದಿಯ ಪ್ರಕಾರ, ಶೇಖ್ ಹಸೀನಾ ಅವರ ರಾಜೀನಾಮೆ ಮತ್ತು ಅವರು ಪಲಾಯನ ಮಾಡಿದ ಸುದ್ದಿ ಹರಡಿದ ಕೂಡಲೇ ಅಲ್ಲಿನ ಗುಂಪುಗಳು ಅವಾಮಿ ಲೀಗ್ ನಾಯಕರು ಮತ್ತು ಅವರ ಸಹಚರರ ಮೇಲೆ ದಾಳಿ ಮಾಡಿ ಅವರ ಆಸ್ತಿಗಳು, ನಿವಾಸಗಳು ಮತ್ತು ಕಚೇರಿಗಳನ್ನು ಧ್ವಂಸಗೊಳಿಸಿದ್ದಾರೆ.

ಈ ಮಾಹಿತಿಯ ಆಧಾರದ ಮೇಲೆ, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದರ ಜೊತೆಗೆ  ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆಗಳಿಂದ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಹಲವಾರು ವರದಿಗಳನ್ನು ಸಹ  ಕಂಡುಕೊಂಡಿದ್ದೇವೆ. ಈ ವರದಿಗಳ ಪ್ರಕಾರ, ಹಸೀನಾ ಅವರ ರಾಜೀನಾಮೆಯ ನಂತರ, ಪ್ರತಿಭಟನಾಕಾರರು ಹಲವಾರು ಅವಾಮಿ ಲೀಗ್ ನಾಯಕರ ಮೇಲೆ ದಾಳಿ ಮಾಡಿದ್ದಾರೆ. ಪ್ರತೀಕಾರದ ಗುಂಪೊಂದು ಪೊರಹತಿ ಒಕ್ಕೂಟದ ಅಧ್ಯಕ್ಷ ಮತ್ತು ಜೆನೈದಾ ಸದರ್ ಉಪಜಿಲಾ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಶಾಹಿದುಲ್ ಇಸ್ಲಾಂ ಹಿರಾನ್ (75) ಮೇಲೆ ಹಲ್ಲೆ ನಡೆಸಿ ಕೊಲಲ್ಪಟ್ಟಿದ್ದಾರೆ. ಜೆನೈದಾ ಎಂಬುವುದು ನೈಋತ್ಯ ಬಾಂಗ್ಲಾದೇಶದ ಖುಲ್ನಾ ವಿಭಾಗದ ಒಂದು ನಗರವಾಗಿದೆ.

ಆಗಸ್ಟ್ 05, 2024 ರಂದು, ಜೆನೈದಾ ನಗರದ ಸ್ಟೇಡಿಯಂಪಾರದಲ್ಲಿರುವ ಹಿರೋನ್ ಅವರ ಮನೆಯನ್ನು ಗುಂಪೊಂದು ಧ್ವಂಸಗೊಳಿಸಿತು ಎಂದು ವರದಿಗಳು ತಿಳಿಸಿವೆ. ಈ ಪ್ರಕ್ರಿಯೆಯಲ್ಲಿ, ಹಿರೋನ್ ಗುಂಪಿನ ಮೇಲೆ ಗುಂಡು ಹಾರಿಸಲಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಇದರಿಂದ ಕೋಪಗೊಂಡ ಗುಂಪು ಅವರ ಮನೆಗೆ ಬೆಂಕಿ ಹಚ್ಚಿದೆ. ಮೂರನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಹಿರೋನ್ ಬೆಂಕಿಯಾ ಜ್ವಾಲೆಯಿಂದಾಗಿ ಸಾವನ್ನಪ್ಪಿದರು. ಕೋಪಗೊಂಡ ಗುಂಪು ಅವರ ಮನೆಗೆ ನುಗ್ಗಿ, ಅವರ ದೇಹವನ್ನು ಹೊರತೆಗೆದು, ನಗರದ ಮಧ್ಯಭಾಗದಲ್ಲಿರುವ ಪೈರಾ ಛತ್ತರ್‌ನಲ್ಲಿ ನೇತು ಹಾಕಿದ ನಂತರ ಅಲ್ಲಿದ್ದ ಕೆಲ ಜನರು ಶವದ ಮೇಲೆ ದಾಳಿ ನಡೆಸಿದ್ದಾರೆ. ಪೊರಾಹತಿ ಒಕ್ಕೂಟದ ಅಧಿಕೃತ ವೆಬ್‌ಸೈಟ್‌ನಲ್ಲಿ ಅದರ ಅಧ್ಯಕ್ಷರನ್ನು ಶಾಹಿದುಲ್ ಇಸ್ಲಾಂ ಹಿರೋನ್ ಹೇಳಲಾಗಿದೆ. 

ಇನ್ನು ಹೆಚ್ಚಿನ ಹುಡುಕಾಟ ನಡೆಸಿದಾಗ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಹಲವಾರು ವೀಡಿಯೊಗಳು (ಇಲ್ಲಿ, ಇಲ್ಲಿ) ನಮೆಗೆ ಸಿಕ್ಕಿದೆ. ಆ ವೀಡಿಯೊಗಳು ವೈರಲ್ ವೀಡಿಯೊದಲ್ಲಿರುವಂತೆಯೇ ಹೋಲುವ ದೃಶ್ಯಗಳನ್ನು ಒಳಗೊಂಡಿದ್ದವು. ಈ ವೀಡಿಯೊಗಳು ಮೃತ ವ್ಯಕ್ತಿಯನ್ನು ಹಿರಾನ್ ಎಂದು ಗುರುತಿಸಿವೆ ಮತ್ತು ಆತನನ್ನು ಸುಟ್ಟುಹಾಕಿ, ಜೆನೈದಾ ನಗರ ಕೇಂದ್ರದಲ್ಲಿರುವ ಪೈರಾ ಛತ್ತರ್‌ಗೆ ತಂದು ಅಲ್ಲಿ ನೇಣು ಹಾಕಲಾಗಿದೆ ಎಂದು ತಿಳಿಸಿದೆ. 

ನಂತರ ನಾವು ಗೂಗಲ್ ನಕ್ಷೆಯ ಮೂಲಕ ಹಿರನ್ ಅವರ ದೇಹವನ್ನು ನೇತುಹಾಕಲಾಗಿದ್ದ ಜಾಗವಾದ  ಜೆನೈದಾ ನಗರ ಕೇಂದ್ರದಲ್ಲಿರುವ ಪೈರಾ ಚತ್ತರ್ ಅನ್ನು ಜಿಯೋಲೊಕೇಶನ್ ನಡೆಸಿದ್ದೇವೆ. ಈ ಸ್ಥಳಕ್ಕೆ ಪಾರಿವಾಳದ ಪ್ರತಿಮೆಯಿಂದ (ಬಂಗಾಳಿಯಲ್ಲಿ ಪೈರಾ) ಈ ಹೆಸರು ಬಂದಿದೆ. ವೈರಲ್ ವೀಡಿಯೊದಲ್ಲಿ, ಪ್ರತಿಮೆಯ ಪಾದವು ಗೋಚರಿಸುತ್ತದೆ. ವೈರಲ್ ವೀಡಿಯೊವನ್ನು ಯೂಟ್ಯೂಬ್ ವೀಡಿಯೊದೊಂದಿಗೆ ಹೋಲಿಸಿದಾಗ ಎರಡೂ ದೃಶ್ಯಗಳು ಒಂದೇ ಘಟನೆಯನ್ನು ತೋರಿಸುತ್ತವೆ ಎಂದು ತಿಳಿದು ಬಂದಿದೆ. ಈ ಕೆಳಗೆ ಗೂಗಲ್ ಸ್ಟ್ರೀಟ್ ವ್ಯೂನಿಂದ ಫೋಟೋ, ಯೂಟ್ಯೂಬ್ ವೀಡಿಯೊದಿಂದ ಕೀಫ್ರೇಮ್ ಮತ್ತು ವೈರಲ್ ವೀಡಿಯೊದಿಂದ ಕೀಫ್ರೇಮ್ ನಡುವಿನ ಹೋಲಿಕೆ ಇದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಗುಂಪೊಂದು ಹಿಂದೂ ವ್ಯಕ್ತಿಯನ್ನು ನೇಣು ಹಾಕುತ್ತಿರುವುದನ್ನು ಈ ವೀಡಿಯೊ ತೋರಿಸುತ್ತಿಲ್ಲ. ಬದಲಾಗಿ, ಪೊರಹತಿ ಒಕ್ಕೂಟದ ಅಧ್ಯಕ್ಷ ಮತ್ತು ಜೆನೈದಾ ಸದರ್ ಉಪಜಿಲ್ಲಾ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಶಾಹಿದುಲ್ ಇಸ್ಲಾಂ ಹಿರಾನ್ ಅವರನ್ನು ಸುಟ್ಟು ನೇತಾಕಿರುವುದನ್ನು ತೋರಿಸಲಾಗಿದೆ.

Share.

Comments are closed.

scroll