ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಲಾ 8,500 ರೂ ನೀಡುವುದಾಗಿ ಭರವಸೆ ನೀಡಿದ್ದಕಾಂಗ್ರೆಸ್ ಭರವಸೆಯನ್ನು ಕೇಳಿಕೊಂಡು, ಹರಿಯಾಣದಲ್ಲಿ ಸಾರ್ವಜನಿಕರು ಕಾಂಗ್ರೆಸ್ ಸಂಸದೆ ಸೆಲ್ಜಾ ಕುಮಾರಿ ಮೇಲೆ ಮುತ್ತಿಗೆ ಹಾಕಿದ್ದಾರೆ ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಲ್ಲಿ ಜನರು ಕಚೇರಿಯ ಒಳಗೆ ಬರಲು ಬಾಗಿಲನ್ನು ಒಡೆದಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಹಾಗಾದ್ರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್ : ಜನರು ಕಾಂಗ್ರೆಸ್ ನ ಭರವಸೆಯ ಹಣವಾದ ರೂ 8500 ಕೇಳಿಕೊಂಡು ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಅವರ ಕಚೇರಿಗೆ ಮುತ್ತಿಗೆ ಹಾಕಿವುದು.
ಫ್ಯಾಕ್ಟ್ : ಜೂನ್ 13 2024 ರಂದು ಹರಿಯಾಣದ ಫತೇಪುರ್‌ನ ತೋಹಾನಾದಲ್ಲಿ ನಡೆದ ಪತ್ರಿಕಾಗೋಷ್ಠಿಯ ವೀಡಿಯೊ, ಅಲ್ಲಿ ಸಿರ್ಸಾ ಸಂಸದೆ ಸೆಲ್ಜಾ ಕುಮಾರಿ ಅವರು ಚುನಾವಣೆಯಲ್ಲಿ ಗೆದ್ದ ನಂತರ ತಮ್ಮ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು. ಈ ಘಟನೆಯು ಕಾಂಗ್ರೆಸ್ ನ ಮಹಾಲಕ್ಷ್ಮಿ ಯೋಜನೆಗೂ ಯಾವುದೇ ಸಂಬಂಧಿಸಿಲ್ಲ. ಇನ್ನೊಬ್ಬ ಕಾಂಗ್ರೆಸ್ ನಾಯಕ ಪರಮವೀರ್ ಸಿಂಗ್ ಅವರ ಬೆಂಬಲಿಗರು ಸಿಂಗ್ ಅವರನ್ನು ಕೋಣೆಯ ಹೊರಗೆ ಲಾಕ್ ಮಾಡಿದಾಗ ಬಾಗಿಲಿನ ಗಾಜಿನ ಫಲಕವನ್ನು ಒಡೆದ್ದಾರೆ ಎಂದು ವರದಿಯಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
2024ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಮಹಾಲಕ್ಷ್ಮಿಯೋಜನೆಯಡಿ ಪ್ರತಿ ಬಡ ಕುಟುಂಬದ ಮುಖ್ಯಸ್ಥ ಮಹಿಳೆಗೆ ವಾರ್ಷಿಕ 1 ಲಕ್ಷ (ಅಥವಾ ತಿಂಗಳಿಗೆ ರೂ. 8,500)ರೂ.ಗಳನ್ನುನೀಡುವುದಾಗಿ ಭರವಸೆ ನೀಡಿತ್ತು. ಆದಾಗ್ಯೂ, ಜೂನ್ 4, 2024 ರಂದು ಪ್ರಕಟವಾದ ಚುನಾವಣಾ ಫಲಿತಾಂಶಗಳಲ್ಲಿ, I.N.D.I.A ಬ್ಲಾಕ್ ಬಹುಮತವನ್ನು ಗಳಿಸಿ, NDA ಮೈತ್ರಿ ಸರ್ಕಾರ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನೀಡಿದ ನಗದು ವರ್ಗಾವಣೆ ಭರವಸೆಗೆ ಸಂಬಂಧಿಸಿದಂತೆ ‘ಗ್ಯಾರೆಂಟಿ ಕಾರ್ಡ್‘ಗಳನ್ನು ಪಡೆಯಲು ಲಕ್ನೋದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಹಿಳೆಯರು ಸಾಲುಗಟ್ಟಿ ನಿಂತಿದ್ದಾರೆ ಎಂಬ ಸುದ್ದಿ ವರದಿಗಳ ನಡುವೆ (ಇಲ್ಲಿ ಮತ್ತು ಇಲ್ಲಿ) ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
ಕ್ಲೈಮ್ ಅನ್ನು ಪರಿಶೀಲಿಸಲು, ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಈ ಮೂಲಕ ಫತೇಪುರ್‌ನ ತೋಹಾನಾದಲ್ಲಿ ಜೂನ್ 13 , 2024 ರಂದು ಪತ್ರಿಕಾಗೋಷ್ಠಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಕಂಡುಕೊಂಡಿದ್ದೇವೆ. ಈ ಪತ್ರಿಕಾಗೋಷ್ಠಿಯಲ್ಲಿ, ಸಿರ್ಸಾ ಲೋಕಸಭಾ ಕ್ಷೇತ್ರದಲ್ಲಿ ತನ್ನ ಗೆಲುವಿಗೆ ಬೆಂಬಲ ನೀಡಿದ ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಸೆಲ್ಜಾ ಕುಮಾರಿ ಧನ್ಯವಾದ ಅರ್ಪಿಸಿದರು.
ಮಾಧ್ಯಮ ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಹೆಚ್ಚಿನ ನಾಯಕರು ಕಾನ್ಫರೆನ್ಸ್ ಕೋಣೆಗೆ ಪ್ರವೇಶಿಸಿದ್ದು, ಆದರೆ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಪರಮವೀರ್ ಸಿಂಗ್ ಮತ್ತು ಅವರ ಬೆಂಬಲಿಗರು ಹೊರಗೆ ಒಳಗೆ ಬಿಡದೆ ಹೊರಗೆ ನಿಲ್ಲಿಸಲಾಗಿತು. ಸೆಲ್ಜಾ ಕುಮಾರಿ ಸಮಾವೇಶವನ್ನು ಆರಂಭಿಸಿದಾಗ ಪರಮವೀರ್ ಸಿಂಗ್ ಮತ್ತು ಅವರ ಬೆಂಬಲಿಗರು ಬಡಿದಾಡಿಕೊಂಡು ಬಾಗಿಲು ತಳ್ಳಲು ಪ್ರಾರಂಭಿಸಿದರು. ಇದರಿಂದಾಗಿ ಅಲ್ಲಿದ್ದವರಲ್ಲಿ ಗೊಂದಲ ಉಂಟಾಯಿತು. ಪರಿಸ್ಥಿತಿಯನ್ನು ಶಾಂತಗೊಳಿಸಲು ಸೆಲ್ಜಾ ಪ್ರಯತ್ನಿಸಿದರೂ, ಪರಮವೀರ್ ಸಿಂಗ್ ನ ಅನುಯಾಯಿಗಳು ಬಾಗಿಲಿನ ಗಾಜಿನ ಫಲಕವು ಮುರಿದುಹಾಕಿದರು. ಸಲ್ಮಾ ಮದ್ಯಸ್ತಿಗೆ ವಹಿಸಿದ ನಂತರ, ಪರಮವೀರ್ ಸಿಂಗ್ ಬಾಗಿಲು ಲಾಕ್ ಮಾಡಲಾಗಿದೆ ಎಂದು ದೂರಿದರೂ, ಸೆಲ್ಜಾ ಅದನ್ನು ಒಪ್ಪಿಕೊಳ್ಳಲಿಲ್ಲ. ಅಂತಿಮವಾಗಿ ಈ ವಿಷಯವನ್ನು ತನಿಖೆ ಮಾಡಲು ಒಪ್ಪಿಕೊಂಡು ಎಲ್ಲರೂ ಈ ವಿಷಯವನ್ನು ಲೈಟ್ ಆಗಿ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಈ ಹಿಂದೆ, ಫ್ಯಾಕ್ಟ್ಲಿ ಕಾಂಗ್ರೆಸ್ ಕುರಿತಾದ ಮಹಾಲಕ್ಷ್ಮಿ ಯೋಜನೆಗೆ ಸಂಬಂಧಿಸಿದಕ್ಲೇಮ್ ಗಳನ್ನೂ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ತಳ್ಳಿಹಾಕಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಾಲಕ್ಷ್ಮಿ ಯೋಜನೆಯಡಿ 8,500ರೂ ಬೇಡಿಕೆಯಿರುವ ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಅವರ ಕಚೇರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿದ್ದಾರೆ ಎಂದು ತಪ್ಪಾದ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.