Fake News - Kannada
 

ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಚೀನಾದ ನಿಯೋಗದೊಂದಿಗೆ ಇರುವ ಈ ವೀಡಿಯೊ 2015ರದ್ದಾಗಿದ್ದು, ಇದು ಅವರ ಪ್ರಧಾನಿ ಅವಧಿಯ ನಂತರದಾಗಿದೆ

0

2025 ರ ಆಗಸ್ಟ್ 31 ರಿಂದ ಸೆಪ್ಟೆಂಬರ್ 01 ರವರೆಗೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ರಾಷ್ಟ್ರಗಳ ಮುಖ್ಯಸ್ಥರ 25 ನೇ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಶೃಂಗಸಭೆಯ ಹೊರತಾಗಿ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು. ಈ ಸಂದರ್ಭದಲ್ಲಿ, ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಚೀನಾದ ನಿಯೋಗವನ್ನು ಭೇಟಿಯಾದ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಸೋನಿಯಾ ಗಾಂಧಿ ಅತಿಥಿಗಳನ್ನು ಸ್ವಾಗತಿಸುವಲ್ಲಿ ಮುಂದಾಳತ್ವ ವಹಿಸಿದ್ದದ್ದು, ಇದರ ಸಲುವಾಗಿ ಅವರನ್ನು ಕಡೆಗಣಿಸಲಾಯಿತು  ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಪ್ರಧಾನಿಯಾಗಿದ್ದ ಅವಧಿಯಲ್ಲಿ ಚೀನಾದ ನಿಯೋಗವನ್ನು ಸ್ವಾಗತಿಸುವಾಗ ಸೋನಿಯಾ ಗಾಂಧಿ ಅವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಬದಿಗಿಟ್ಟಿದ್ದರು. 

ಫ್ಯಾಕ್ಟ್: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಅಧಿಕಾರಾವಧಿಯನ್ನು (2004–2014) ಪೂರ್ಣಗೊಳಿಸಿದ ನಂತರದ ವಿಡಿಯೋವಾಗಿದ್ದು, ಇದು ಜೂನ್ 16, 2015 ನದ್ದಾಗಿದೆ. ಆಗ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸೋನಿಯಾ ಗಾಂಧಿ, ಜಾಂಗ್ ಡೆಜಿಯಾಂಗ್ ನೇತೃತ್ವದ ಚೀನಾದ ನಿಯೋಗವನ್ನು ಭೇಟಿಯಾಗ ವಿಡಿಯೋವಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪುದಾರಿಗೆಳೆಯುವಂತಿದೆ.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಜೂನ್ 16, 2015 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಫೀಷಿಯಲ್ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊ ಮತ್ತು ಫೋಟೋಸ್ಗಳಿಗೆ ನಮ್ಮನ್ನು ಕರೆದೊಯ್ಯಿತು. ಈ ಮೂಲಗಳ ಪ್ರಕಾರ, ವೈರಲ್ ವೀಡಿಯೊವು ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಚೀನಾದ ನಿಯೋಗದ ನಡುವಿನ ಸಭೆಯನ್ನು ತೋರಿಸುತ್ತದೆ. ಆ ಸಮಯದಲ್ಲಿ ಮನಮೋಹನ್ ಸಿಂಗ್ ಭಾರತದ ಪ್ರಧಾನಿಯಾಗಿರಲಿಲ್ಲ. ಅವರು 2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು ಎಂಬುದನ್ನು ಗಮನಿಸಬೇಕಾದ ಅಂಶ.  

ಆ ಸಮಯದ ಮಾಧ್ಯಮ ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಚೀನಾದ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯ ಅಧ್ಯಕ್ಷೆ ಜಾಂಗ್ ಡೆಜಿಯಾಂಗ್ ಅವರು ಜೂನ್ 16, 2015 ರಂದು ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು ಎಂದು ತಿಳಿಸಿವೆ. ಆ ಸಮಯದಲ್ಲಿ, ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಭೆಗೆ ಮೊದಲು, ಜಾಂಗ್ ಡೆಜಿಯಾಂಗ್ ಆಗಿನ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು ಎಂದು ವರದಿಗಳು ಉಲ್ಲೇಖಿಸಿವೆ. 

ಜೂನ್ 2015 ರಲ್ಲಿ ಜಾಂಗ್ ಡೆಜಿಯಾಂಗ್ ಅವರ ಭೇಟಿಯ ಕುರಿತು ಭಾರತದಲ್ಲಿರುವ ಚೀನೀ ರಾಯಭಾರ ಕಚೇರಿಯು ಪತ್ರಿಕಾ ಪ್ರಕಟಣೆಯನ್ನು ಸಹ ಬಿಡುಗಡೆ ಮಾಡಿತು. 

A screenshot of a document  AI-generated content may be incorrect.

ಈ ಹಿಂದೆ, ಸೋನಿಯಾ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ನಡೆದ ಸಭೆಗಳಲ್ಲಿ ಮನಮೋಹನ್ ಸಿಂಗ್ ಅವರನ್ನು ಕಡೆಗಣಿಸಿದ್ದರು ಎಂಬ ಹಲವಾರು ಕ್ಲೇಮ್ ಗಳನ್ನು ನಾವು (ಇಲ್ಲಿ ಮತ್ತು ಇಲ್ಲಿ) ನಿರಾಕರಿಸಿದ್ದೇವೆ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ವೈರಲ್ ವೀಡಿಯೊದಲ್ಲಿ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರನ್ನು ಕಡೆಗಣಿಸಿರುವುದನ್ನು ತೋರಿಸುವುದಿಲ್ಲ. ಈ ದೃಶ್ಯಗಳು ಮನಮೋಹನ್ ಸಿಂಗ್ ಅಧಿಕಾರದಿಂದ ಕೆಳಗಿಳಿದ ಒಂದು ವರ್ಷದ ನಂತರದ ಅಂದರೆ ಜೂನ್ 2015 ರ ವಿಡಿಯೋವಾಗಿದೆ. 

Share.

Comments are closed.

scroll