Fake News - Kannada
 

ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವಾಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿಮಾನದೊಳಗೆ ಪ್ರವೇಶಿಸಿದ್ದಾರೆ ಎಂಬುದು ಸುಳ್ಳು

0

ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ಪ್ರಜೆಗಳೊಂದಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂವಾದ ನಡೆಸುತ್ತಿರುವ ಇತ್ತೀಚಿನ ದೃಶ್ಯಗಳು ಎಂದು ಹೇಳಿಕೊಳ್ಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಏರ್ ಇಂಡಿಯಾ ವಿಮಾನದಲ್ಲಿ ಪುಟಿನ್ ನೇರವಾಗಿ ಭಾರತೀಯ ಪ್ರಜೆಗಳ ಬಳಿಗೆ ಹೋಗಿದ್ದಾರೆ ಮತ್ತು ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದಾರೆ ಎಂದು ಈ ಪೋಸ್ಟ್ ಹೇಳಲಾಗಿದೆ.  ಪೋಸ್ಟ್‌ನಲ್ಲಿ ಮಾಡಿದ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ಪ್ರಜೆಗಳೊಂದಿಗೆ ವ್ಲಾಡಿಮಿರ್ ಪುಟಿನ್ ಸಂವಾದ ನಡೆಸುತ್ತಿರುವ ವೀಡಿಯೊ.

ನಿಜಾಂಶ: ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ಪ್ರಜೆಗಳೊಂದಿಗೆ ಸಂವಾದ ನಡೆಸುತ್ತಿರುವ ವೀಡಿಯೊದಲ್ಲಿರುವ ವ್ಯಕ್ತಿ ರೊಮೇನಿಯಾದ ಭಾರತೀಯ ರಾಯಭಾರಿ ರಾಹುಲ್ ಶ್ರೀವಾತ್ಸವ್. ಹಲವು ಕೇಂದ್ರ ಮಂತ್ರಿಗಳು ಮತ್ತು ಪ್ರಮುಖ ಸುದ್ದಿ ವಾಹಿನಿಗಳು ಈ ವೀಡಿಯೊವನ್ನು 26 ಫೆಬ್ರವರಿ 2022 ರಂದು ಪ್ರಕಟಿಸಿವೆ. ಈ ವೀಡಿಯೊದಲ್ಲಿ ಇರುವ ಅಧಿಕಾರಿಗೂ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಲಾಗಿದ್ದು, ಇದೇ ರೀತಿಯ ದೃಶ್ಯಗಳಿರುವ ವೀಡಿಯೊವನ್ನು 26 ಫೆಬ್ರವರಿ 2022 ರಂದು ‘ET Now’ ಸುದ್ದಿ ವಾಹಿನಿ ಟ್ವೀಟ್ ಮಾಡಿರುವುದು ಕಂಡುಬಂದಿದೆ. ‘ET Now’ ಇದನ್ನು ರೊಮೇನಿಯಾದ ಭಾರತೀಯ ರಾಯಭಾರಿ ರಾಹುಲ್ ಶ್ರೀವಾತ್ಸವ್ ಅವರ ಫೋಟೊಗಳು ಎಂದು ವರದಿ ಮಾಡಿದೆ.  ರಾಹುಲ್‌ ಶ್ರೀವಾಸ್ತವ್‌ಅವರು ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ಪ್ರಜೆಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ ಎಂದು ಹೇಳೀದೆ. ‘ಡಿಡಿ ನ್ಯೂಸ್’ ಚಾನೆಲ್ ಅದೇ ವೀಡಿಯೊವನ್ನು ಟ್ವೀಟ್ ಮಾಡಿ ರಾಹುಲ್ ಶ್ರೀವಾಸ್ತವ ಅವರು ಏರ್ ಇಂಡಿಯಾ ವಿಮಾನದಲ್ಲಿ ಉಕ್ರೇನ್‌ನಿಂದ ಮುಂಬೈಗೆ ತೆರಳುತ್ತಿದ್ದ ಭಾರತೀಯ ಪ್ರಜೆಗಳೊಂದಿಗೆ ಸಂವಾದ ನಡೆಸಿದರು ಎಂದು ಹೇಳಿದೆ.

26 ಫೆಬ್ರವರಿ 2022 ರಂದು ಹಲವು ಕೇಂದ್ರ ಸಚಿವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ‘ಮಾಹಿತಿ ಮತ್ತು ಪ್ರಸಾರ ಸಚಿವಾಲಯ’ ಯೂಟ್ಯೂಬ್ ಚಾನೆಲ್ ಕೂಡ ರೊಮೇನಿಯಾದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯ ಪ್ರಜೆಗಳೊಂದಿಗೆ ರಾಹುಲ್ ಶ್ರೀವಾತ್ಸವ್ ಅವರ ಸಂವಾದದ ವೀಡಿಯೊವನ್ನು ಪ್ರಕಟಿಸಿದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರಾಹುಲ್ ಶ್ರೀವಾತ್ಸವ್ ಸೇರಿ ಭಾರತೀಯ ಪ್ರಜೆಗಳ ಸ್ಥಳಾಂತರಿಸುವ ಕಾರ್ಯಾಚರಣೆಗಳ ಕುರಿತು ಸಂವಾದ ನಡೆಸುತ್ತಿರುವ ಇತ್ತೀಚಿನ ಚಿತ್ರಗಳನ್ನು ಇಲ್ಲಿ ನೋಡಬಹುದು. ಆದರೆ ಉಕ್ರೇನ್‌ನಿಂದ ಸ್ಥಳಾಂತರಿಸುವಾಗ ಭಾರತೀಯ ಪ್ರಜೆಗಳೊಂದಿಗೆ ರಷ್ಯಾ ಅಧ್ಯಕ್ಷ ಪುಟಿನ್ ಸಂವಾದ ನಡೆಸಿದ ಯಾವುದೇ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ಪ್ರಜೆಗಳೊಂದಿಗೆ ರೊಮೇನಿಯಾದ ಭಾರತೀಯ ರಾಯಭಾರಿ ಸಂವಾದ ನಡೆಸಿದ ವೀಡಿಯೊವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಸಂವಾದ ನಡೆಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll