Fake News - Kannada
 

ಶ್ರೀರಾಮನನ್ನು ಚಿತ್ರಿಸಿರುವ ಲೋಕೋಮೋಟಿವ್ ರೈಲು ಎಂಜಿನ್‌ಗಳ ಈ ಫೋಟೋಗಳು ನಿಜವಲ್ಲ, ಇದು AI ಬಳಸಿ ರಚಿಸಲಾಗಿದೆ

0

ಎರಡು ಲೋಕೋಮೋಟಿವ್ ಎಂಜಿನ್‌ಗಳ ಮೇಲೆ ರಾಮನ ಚಿತ್ರಣವನ್ನು ರಚಿಸಿರುವ ಫೋಟೋ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ), ಇದರಲ್ಲಿ ಒಂದು ಎಂಜಿನ್ ವಂದೇ ಭಾರತ್ ರೈಲಿನದು ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಫೋಟೋದಲ್ಲಿ ರಾಮನನ್ನು ಚಿತ್ರಿಸಿರುವ ಲೋಕೋಮೋಟಿವ್ ರೈಲು ಎಂಜಿನ್‌ಗಳನ್ನು ತೋರಿಸಲಾಗಿದೆ.

ಫ್ಯಾಕ್ಟ್: ವೈರಲ್ ಫೋಟೋ AI-ರಚಿತವಾಗಿದ್ದು, ನಿಜವಾದ ಲೋಕೋಮೋಟಿವ್‌ ಅಲ್ಲ. ಇದನ್ನು ಮೂಲತಃ ಇನ್ಸ್ಟಾಗ್ರಾಮ್ ಬಳಕೆದಾರರು (@the_rail_pilot) 26 ಮೇ 2025 ರಂದು ಪೋಸ್ಟ್ ಮಾಡಿದ್ದಾರೆ. ಅವರು ಫೋಟೋಗಳನ್ನು AI ಬಳಸಿ ರಚಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. AI-ಪತ್ತೆ ಪರಿಕರಗಳು ಸಹ ಫೋಟೋವನ್ನು AI-ರಚಿತ ಎಂದು ದೃಢಪಡಿಸಿವೆ. ಈ ನಡುವೆ  ಭಾರತೀಯ ರೈಲ್ವೆ ಮಾರ್ಚ್ 2024 ರಲ್ಲಿ ನ್ಯೂ ಗುವಾಹಟಿ ಶೆಡ್‌ನಿಂದ ನಿಜವಾದ ಲೋಕೋಮೋಟಿವ್ (WDP4D 40603) ನಲ್ಲಿ ಭಗವಾನ್ ಶ್ರೀ ರಾಮನ ಭಾವಚಿತ್ರವನ್ನು ಚಿತ್ರಿಸಿದ್ದು; ವೈರಲ್ ಫೋಟೋದಲ್ಲಿರುವ ಎಂಜಿನ್‌ಗಳು ನಿಜವಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ವೈರಲ್ ಫೋಟೋವನ್ನು ಸರಿಯಾಗಿ ಪರಿಶೀಲಿಸಿದಾಗ, ನಾವು @the_rail_pilot ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನೊಂದಿಗೆ ವಾಟರ್‌ಮಾರ್ಕ್ ಅನ್ನು ಗಮನಿಸಿದ್ದೇವೆ. ಗೂಗಲ್ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ನಾವು the_rail_pilot ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಅಕೌಂಟ್ ಕಂಡುಬಂದಿದ್ದು, ಅಲ್ಲಿ ಅದೇ ರೈಲಿನ ಫೋಟೋವನ್ನು ಮೇ 26, 2025 ರಂದು ಪೋಸ್ಟ್ ಮಾಡಲಾಗಿದೆ. ಆ ಪೋಸ್ಟ್‌ನ ಕ್ಯಾಪ್ಶನ್ ಫೋಟೋಗಳನ್ನು ಸಂಪೂರ್ಣವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್  (AI) ಬಳಸಿ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಅದೇ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ AI ಬಳಸಿ ರಚಿಸಲಾದ ಇದೇ ರೀತಿಯ ಫೋಟೋಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಇತರರು ಕಾಣಿಸಿಕೊಂಡ ರೈಲುಗಳ ಫೋಟೋಗಳು ಇದರಲ್ಲಿ ಸೇರಿವೆ. ಎಲ್ಲಾ ಪೋಸ್ಟ್‌ಗಳು ಒಂದೇ ವಿವರಣೆಯನ್ನು ಹೊಂದಿದ್ದು, ಫೋಟೋಗಳು AI- ರಚಿತವಾಗಿವೆ ಎಂದು ಹೇಳುತ್ತವೆ.

ಫೋಟೋಗಳು AI- ರಚಿತವಾಗಿದೆಯೇ ಎಂದು ನಿರ್ಧರಿಸಲು, ನಾವು ಅವುಗಳನ್ನು ಎರಡು AI- ಪತ್ತೆ ಪರಿಕರಗಳಾದ ಹೈವ್ ಮತ್ತು ಸ್ಲೈಟ್ ಎಂಜಿನ್ ಬಳಸಿ ವಿಶ್ಲೇಷಿಸಿದ್ದೇವೆ. ಎರಡೂ ಪರಿಕರಗಳು ಫೋಟೋಗಳನ್ನು AI- ರಚಿತವಾಗಿವೆ ಎಂದು ಗುರುತಿಸಿದ್ದು, ಸುಮಾರು  98.6% ಮತ್ತು 90% ಫಲಿತಾಂಶ ನೀಡಿದೆ.

ಮಾರ್ಚ್ 2024 ರಲ್ಲಿ ಪ್ರಕಟವಾದ ರಿಪಬ್ಲಿಕ್ ಟಿವಿ ವರದಿಯ ಪ್ರಕಾರ, ಭಾರತೀಯ ರೈಲ್ವೆಯು ನ್ಯೂ ಗುವಾಹಟಿ ಶೆಡ್‌ನ ಲೋಕೋಮೋಟಿವ್ (WDP4D 40603) ಮೇಲೆ ಶ್ರೀ ರಾಮನ ಭಾವಚಿತ್ರವನ್ನು ಚಿತ್ರಿಸಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಭಗವಾನ್ ರಾಮನನ್ನು ಒಳಗೊಂಡ ಅದೇ ಲೋಕೋಮೋಟಿವ್‌ನ ವೀಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ (ಇಲ್ಲಿ, ಇಲ್ಲಿ).

ಹಿಂದೆ, ಭಾರತೀಯ ರೈಲ್ವೆಯು ಹಲವಾರು ಡೀಸೆಲ್ ಲೋಕೋಮೋಟಿವ್‌ಗಳಿಗೆ ಹುತಾತ್ಮರಾದ ಭಾರತೀಯ ಸೈನಿಕರ ಹೆಸರಿಟ್ಟಿದೆ (ಇಲ್ಲಿ, ಇಲ್ಲಿ).

ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀರಾಮನ ಚಿತ್ರವಿರುವ ಲೋಕೋಮೋಟಿವ್ ರೈಲು ಎಂಜಿನ್‌ಗಳ ಈ ಫೋಟೋಗಳು ನಿಜವಲ್ಲ ಬದಲಿಗೆ  AI ಬಳಸಿ ರಚಿಸಲಾಗಿದೆ.

Share.

Comments are closed.

scroll